ತಾರತಮ್ಯ ಹೋಗಲಾಡಿಸಲು ಆಗ್ರಹಿಸಿ ರೈತ ಸಂಘ ಪ್ರತಿಭಟನೆ

ಕಕ್ಕೇರಾ: ಸ್ಥಳೀಯ ಸಹಕಾರ ಸಂಘದಲ್ಲಿ ರೈತರಿಗೆ ಕೃಷಿ ಬೆಳೆ ಸಾಲ ವಿತರಣೆಯಲ್ಲಿ ಸಂಘದ ಆಡಳಿತ ಮಂಡಳಿ ತಾರತಮ್ಯ ಮಾಡುತ್ತಿದ್ದು, ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎದುರು ಶುಕ್ರವಾರ 3ಗಂಟೆ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡರು ಮಾತನಾಡಿ, ಪಟ್ಟಣದ ಸಹಕಾರ ಸಂಘವು ಜಿಲ್ಲೆಯಲ್ಲಿಯೇ ಬೃಹತ ಸಹಕಾರ ಸಂಘವಾಗಿದೆ. ಈ ಸಂಘದಲ್ಲಿ ಸುಮಾರು 1200 ಜನರು ಸದಸ್ಯತ್ವ ಹೊಂದಿದ್ದಾರೆ. ಪ್ರಸಕ್ತ 2018-19ನೇ ಸಾಲಿನಲ್ಲಿ ಕೇವಲ 396 ರೈತರಿಗೆ ಮಾತ್ರ ಬೆಳೆ ಸಾಲ ನೀಡಲಾಗಿದ್ದು, ಇನ್ನುಳಿದ 800ಕ್ಕೂ ಹೆಚ್ಚು ರೈತರಿಗೆ ಸಾಲ ನಿರಾಕರಿಸಲಾಗಿದೆ. ಈ ಬಗ್ಗೆ ಸಕಾರ ಸಂಘದ ಆಡಳಿತ ಮಂಡಳಿಯನ್ನು ವಿಚಾರಿಸಿದರೇ, ಸಕರ್ಾರದಿಂದ ನಮಗೆ ಯಾವುದೇ ಆದೇಶ ಬಂದಿಲ್ಲವೆಂದು ಸಬೂಬು ಹೇಳುತ್ತಾರೆ. ಸಹಕಾರದ ಸಂಘದ ಸಾಲ ಮನ್ನಾ ಆಗಿ ವರ್ಷ ಕಳೆದರೂ ಇನ್ನು ಆದೇಶ ಬಂದಿಲ್ಲವೆಂದರೇ ಹೇಗೆ. ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು.

ನಮ್ಮ ಬೇಡಿಕೆಗಳು ನ್ಯಾಯುವವಾಗಿದ್ದು, ಮುಂದಿನ ಕೆಲ ದಿನಗಳಲ್ಲಿ ಇವುಗಳನ್ನು ಈಡೇರಿಸಬೇಕು. ತಪ್ಪಿದ್ದಲ್ಲಿ ಮತ್ತೇ ಹೋರಾಟ, ಪ್ರತಿಭಟನೆ, ರಸ್ತೆತಡೆ, ಪಟ್ಟಣದಬಂದ್ ನಂತಹ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಡಿಸಿಸಿ ಬ್ಯಾಂಕ್ ತಾಲೂಕು ಮೇಲ್ವಿಚಾರಕ ಬಸವರಾಜ ಕುಂಬಾರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಲು ಆರಂಭಿಸಿದಾಗ ಸಹಕಾರ ಸಂಘದಿಂದ ಸಾಲ ಪಡೆಯದ ರೈತರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಪೊಲೀಸರು ಮದ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ರೈತರ ಬೇಡಿಕೆಗಳು: ಯಾದಗಿರಿ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಸಕರ್ಾರ ಘೋಷಿಸಬೇಕು. ಮುಂಗಾರು ಬೆಳೆ ಬಿತ್ತನೆಗೆ ಸಹಕಾರ ಸಂಘದಿಂದ ಬೀಜ, ರಸಗೊಬ್ಬರ, ಕ್ರಿಮಿಕೀಟನಾಶಕ ಸೇರಿ ಕೃಷಿ ಸಲಕರಣೆಗಳನ್ನು ಎಲ್ಲ ರೈತರಿಗೆ ನೀಡಬೇಕು. ಸಹಕಾರ ಸಂಘಕ್ಕೆ ಕಾನೂನು ಸಲಹೆಗಾರರನ್ನು ನೇಮಿಸಿಕೊಳ್ಳಬೇಕು. ಸ್ತ್ರೀಶಕ್ತಿ ಸಂಘ ಸಂಘಗಳಿಗೆ ಸಾಲ ನೀಡಬೇಕು. 396 ರೈತರನ್ನು ಹೊರತುಪಡಿಸಿ 800ಕ್ಕೂ ಹೆಚ್ಚು ರೈತರಿಗೆ ಕೃಷಿ ಬೆಳೆಸಾಲ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಎಂದು ಆಗ್ರಹಿಸಿದರು.