ಓಡಿಸ್ಸಾ ರಾಜ್ಯದ ಕಾರ್ಮಿಕರ ರಕ್ಷಣೆ

ಯಾದಗಿರಿ: ಇಟ್ಟಂಗಿ ಭಟ್ಟಿಯಲ್ಲಿ ಒತ್ತೆಯಾಳುಗಳಾಗಿ ದುಡಿಯುತ್ತಿದ್ದ ಅಂತಾರಾಜ್ಯ ಕಾರ್ಮಿಕರನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ರಕ್ಷಿಸಿದ ಘಟನೆ ಸೋಮವಾರ ನಡೆದಿದೆ.

ಏನಿದು ಘಟನೆ?: ತಾಲೂಕಿನ ರಾಮಸಮುದ್ರ ಗ್ರಾಮದ ಬಳಿ ಇರುವ ಇಟ್ಟಂಗಿ ಭಟ್ಟಿಯಲ್ಲಿ ಓಡಿಸ್ಸಾ ರಾಜ್ಯದ ಸುಮಾರು 48 ಕಾರ್ಮಿಕರನ್ನು ಒತ್ತೆಯಾಳುಗಳನ್ನಾಗಿ ದುಡಿಸಿಕೊಳ್ಳಲಾಗುತ್ತಿದ್ದು ಈ ಬಗ್ಗೆ ಕ್ರಮ ವಹಿಸುವಂತೆ ಓಡಿಸ್ಸಾ ರಾಜ್ಯದ ಕಾರ್ಮಿಕ ಆಯುಕ್ತರಿಂದ ರಾಜ್ಯ ಸಕರ್ಾರಕ್ಕೆ ಪತ್ರ ಬರೆಯಲಾಗಿತ್ತು.

ಓಡಿಸ್ಸಾ ರಾಜ್ಯದಿಂದ ಒಟ್ಟು 48 ಕಾರ್ಮಿಕರು ಜಿಲ್ಲೆಯಲ್ಲಿ ಒತ್ತೆಯಾಳುಗಳಾಗಿದ್ದು ಈ ಬಗ್ಗೆ ರಕ್ಷಣೆ ಮಾಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಮಿಕ ಇಲಾಖೆಯ ಕಲಬುರಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ಆರುತಿ ಪೂಜಾರಿ ಹಾಗೂ ಬಾಲಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ ನೇತೃತ್ವದ ತಂಡ ತಾಲೂಕಿನ ರಾಮಸಮುದ್ರ ಗ್ರಾಮದ ಬಳಿಯ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ 12 ಮಕ್ಕಳು ಸೇರಿದಂತೆ 38 ಜನರ ರಕ್ಷಣೆ ಮಾಡಿದ್ದಾರೆ. ಸಧ್ಯ ಈ ಕಾಮರ್ಿಕರು ಡಾ. ಬಾಬು ಜಗಜೀವನರಾಮ್ ಭವನದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದು ರಘುವೀರಸಿಂಗ್ ಠಾಕೂರ ವಿಜಯವಾಣಿಗೆ ತಿಳಿಸಿದ್ದಾರೆ.