ಪೊಲೀಸರಿಗೆ ನೈರ್ಮಲ್ಯ ಟಾಸ್ಕ್​ ; ಚರಂಡಿ ಸ್ವಚ್ಛಗೊಳಿಸಿದ ಐಪಿಎಸ್ ಅಧಿಕಾರಿ !

ಯಾದಗಿರಿ: ಕೈಯಲ್ಲಿ ಲಾಠಿ, ಬಾಯಲ್ಲಿ ಸೀಟಿ ಹಿಡಿದು ನಗರದಲ್ಲಿ ಸಂಚರಿಸುತ್ತಿದ್ದ ಖಾಕಿಪಡೆ ಸೋಮವಾರ ಬೆಳ್ಳಂಬೆಳಗ್ಗೆ ನಗರದಲ್ಲಿನ ರಸ್ತೆಗಳ ಮಧ್ಯೆ ರಾಶಿಯಾಗಿ ಬಿದ್ದಿದ್ದ ಕಸ ವಿಲೇವಾರಿ ಮಾಡುವ ಮೂಲಕ ಮಾರ್ಬನ್ಯಾಂಗ್ ವೇಳೆ ವಾಕಿಂಗ್ ಬರುವವರಿಗೆ ಶಾಕ್ ಕೊಟ್ಟಿತು.

ಹೌದು, ಇಲ್ಲಿನ ಸುಭಾಷ್ ವೃತ್ತದಲ್ಲಿನ ಮುಖ್ಯರಸ್ತೆಯ ಎರಡು ಬದಿಯಲ್ಲಿ ಬೆಳಗ್ಗೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕೈಯಲ್ಲಿ ಪೊರಕೆ ಹಾಗೂ ಬಕೆಟ್​ಗಳನ್ನು ಹಿಡಿದು ಚರಂಡಿಗಳನ್ನು ಕ್ಲೀನ್ ಮಾಡಿದರು. ಈ ಮಹತ್ವದ ಅಭಿಯಾನದ ಸಾರಥ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾಟರ್ಿನ್ ಮರ್ಬನ್ಯಾಂಗ್ ವಹಿಸಿದ್ದು ವಿಶೇಷವಾಗಿತ್ತು. ಅಲ್ಲದೆ, ಎಸ್ಪಿ ಸಾಹೇಬರೇ ಸ್ವತಃ ತಮ್ಮ ಕೈಯಿಂದ ಚರಂಡಿಯಲ್ಲಿನ ತ್ಯಾಜ್ಯವನ್ನು ಎತ್ತಿ ಹಾಕಿದ್ದು, ರಾಜ್ಯದಲ್ಲಿನ ಇತರೇ ಐಪಿಎಸ್ ಅಧಿಕಾರಿಗಳಿಗೆ ಮಾದರಿಯಾಯುತು.

ಸದಾ ಒಂದಿಲ್ಲೊಂದು ಚಟುವಟಿಕೆಗಳ ಮೂಲಕ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯಲ್ಲಿ ಆತ್ಮಸ್ಥೈರ್ಯ ಮೂಡಿಸುತ್ತಿರುವ ಎಸ್ಪಿ ಮಾಟರ್ಿನ್ ಈ ಬಾರಿ ತಮ್ಮ ಅಧಿಕಾರಿಗಳಿಗೆ ಪರಿಸರ ಸ್ವಚ್ಛತೆಯ ಟಾಸ್ಕ್ ನೀಡುವ ಮೂಲಕ ನಗರದಲ್ಲಿ ಸ್ವಚ್ಛತೆ ಎಷ್ಟರ ಮಟ್ಟಿಗೆ ಮುಖ್ಯ ಎಂಬುದನ್ನು ಬಾಯಿಮಾತಲ್ಲಿ ಹೇಳದೆ ಮಾಡಿ ತೋರಿಸಿದ್ದಾರೆ.

ಪೊಲೀಸ್ ಇಲಾಖೆ ಜನಸ್ನೇಹಿಯಾಗುವುದರ ಜತೆಯಲ್ಲಿ ಪರಿಸರದ ಬಗ್ಗೆಯೂ ಕಾಳಜಿ ವಹಿಸುತ್ತದೆ ಎಂಬುದನ್ನು ಸಾರಲು ಈ ಅಭಿಯಾನ ಮತ್ತೊಂದು ವಿಶೇಷ. ಅಲ್ಲದೆ, ನಮ್ಮ ಸಿಬ್ಬಂದಿ ಸದಾ ಒತ್ತಡದಲ್ಲಿರುತ್ತಾರೆ. ಜಂಜಾಟದಿಂದ ಬಳಲಿದ ಅವರಿಗೆ ಒಂದಿಷ್ಟು ಶ್ರಮದಾನದಿಂದ ರಿಲ್ಯಾಕ್ಸ್ ಕೊಡಿಸಬೇಕು ಎಂಬುದು ನಮ್ಮ ಉದ್ದೇಶ ಎಂದು `ವಿಜಯವಾಣಿ’ಗೆ ತಿಳಿಸಿದರು.

ಅಲ್ಲದೆ, ಪೊಲೀಸ್ ಇಲಾಖೆ ಜತೆ ನಗರದಲ್ಲಿನ ಕೆಲ ವೈದ್ಯರು ಕೂಡ ಸ್ವಯಂಪ್ರೇರಿತರಾಗಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿರುವುದು ಮತ್ತೊಂದು ವಿಶೇಷವಾಗಿತ್ತು.

ಈ ವೇಳೆ ಡಿವೈಎಸ್ಪಿ ಪಾಂಡುರಂಗ, ವೈದ್ಯರಾದ ಡಾ.ಪ್ರಶಾಂತ ಭಾಸುತ್ಕರ್, ಡಾ.ವೀರೇಶ ಜಾಕಾ, ಪೌರಾಯುಕ್ತ ಸಂಗಪ್ಪ ಉಪಾಸೆ ಸೇರಿದಂತೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.