Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಬಾಳು ಬೆಳಗುವ ಸಾಧನ ಸಾಹಿತ್ಯ

Tuesday, 10.07.2018, 5:22 AM       No Comments

ಹುಣಸಗಿ: ನಮ್ಮ ದಾಸ ಪರಂಪರೆಯಲ್ಲಿ ಇಲ್ಲಿವರೆಗೆ 22 ಜನ ಮಹಿಳೆಯರು ದಾಸರಾಗಿ ಹೊಗಿದ್ದಾರೆ. ಅವರು ತೊಟ್ಟಿಲು ತೂಗುವ ಕೈ ಎಂದಷ್ಟೆ ಸೀಮಿತವಾಗದೆ ಸಂಸ್ಕಾರ-ಸಂಸ್ಕೃತಿ ಎರಡನ್ನು ಬೆಳೆಸಿದವರು ಎಂದು ಕನಕ ರಾಜ್ಯಪ್ರಶಸ್ತಿ ಪುರಸ್ಕೃತ ಸಾಹಿತಿ ಸ್ವಾಮಿರಾವ ಕುಲಕಣರ್ಿ ಹೇಳಿದರು.

ಹುಣಸಿಹೊಳೆ ಕಣ್ವಮಠದಲ್ಲಿ ಹಮ್ಮಿಕೊಂಡ ಶ್ರೀ ವಿದ್ಯಾಭಾಸ್ಕರ್ ಶ್ರೀಗಳ ತೃತೀಯ ಮಹಾ ಸಮಾರಾಧನೆ ನಿಮಿತ್ತ ಸೋಮವಾರ ಎರಡನೇ ದಿನ ನಡೆದ ಪುಸ್ತಕಗಳ ಲೋಕಾರ್ಪಣೆಯಲ್ಲಿ ಮಾತನಾಡಿದ ಅವರು, ನಮ್ಮ ಭಾಗದ ದಾಸವರೇಣ್ಯರು ಸಂಸ್ಕೃತಿಯ ಜೀವಂತ ನದಿಯಾಗಿದ್ದಾರೆ. ಮನುಷ್ಯನ ಅಂತರಂಗದ ಚಿಂತೆಯನ್ನು ದೂರ ಮಾಡಲು ದಾಸರ ಹಾಡುಗಳು ಸೂಕ್ತ ಚುಚ್ಚುಮದ್ದುಗಳಾಗಿವೆ. ಹೀಗಾಗಿ ಸಾಹಿತ್ಯ ಎಂದಿಗೂ ಎಲ್ಲರಿಗೂ ಬಾಳು ಬೆಳಗುವ ಸಾಧನ. ಮಹಿಳೆಯರಿಗೆ ಹೆಳವನಕಟ್ಟೆ ಗಿರಿಯಮ್ಮ, ಭೀಮಾಂಬಿಕೆ ಸೇರಿ ಇತತರು ಇಂದಿಗೂ ಮಾದಿರಿಯಾಗಿದ್ದಾರೆ ಎಂದರು.

ಡಾ.ಶೀಲಾದಾಸ ಅವರು ಯಾಜ್ಞವಲ್ಕ್ಯರ ಕುರಿತು ಮಾತನಾಡಿ, ಮಹಿಳೆಯರು ಕೂಡಾ ಅಧ್ಯಯನಶೀಲರಾಗಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ರಾಜ್ಯಾದ್ಯಂತ ಮೈತ್ರೇಯಿ ಭಜನಾ ಮಂಡಳಿಗಳು ಚಟುವಟಿಕೆ ಗುರುಗಳ ಮಾರ್ಗದರ್ಶನದೊಂದಿಗೆ ನಡೆದಿರುವ ಕುರಿತು ಸುರೇಖಾ ಕುಲಕಣರ್ಿ ಮಾಹಿತಿ ನೀಡಿದರು.

ಪುಸ್ತಕ ಬಿಡುಗಡೆ: ಚಂದುಬಾಯಿ ನಾಯಕ ಅವರು ಬರೆದಿರುವ ಕೀರ್ತನ ಕಲಶ, ಸುರೇಖಾ ಕುಲಕಣರ್ಿ ಅವರ ಕಾದಂಬರಿಗಳನ್ನು ವಿದ್ಯಾವಾರಿಧಿತೀರ್ಥ ಶ್ರೀಗಳು ಲೋಕಾರ್ಪಣೆಗೊಳಿಸಿದರು. ಬೆಂಗಳೂರಿನ ಯಾಜ್ಞವಲ್ಕ್ಯ ಕೃಪಾ ಪತ್ರಿಕೆ ಸಂಪಾದಕ ಕೈವಾರ ಕೃಷ್ಣಮೂತರ್ಿ, ಅಖಿಲ ಭಾರತ ಕಣ್ವಪರಿಷತ್ ಮಾಜಿ ಅಧ್ಯಕ್ಷ ನಾಸಿಕ್ ಪ್ರಲ್ಹಾದ ಕುಲಕಣರ್ಿ, ಬೆಂಗಳೂರಿನ ಶುಕ್ಲಯಜು ಟ್ರಸ್ಟನ್ ಅಧ್ಯಕ್ಷೆ ವತ್ಸಲಾ ನಾಗೇಶ ಇತರರಿದ್ದರು.
ಮಹಿಳೆಯರಿಗಾಗಿ ರಸಪ್ರಶ್ನೆ, ಕೋಲಾಟ, ರಂಗೋಲಿ, ಚಚರ್ಾಗೊಷ್ಠಿ ಜರುಗಿದವು.

Leave a Reply

Your email address will not be published. Required fields are marked *

Back To Top