ಪ್ರಾಣದೇವರಿಗೆ ವಿಶೇಷ ಪೂಜೆ

ಯಾದಗಿರಿ: ಶ್ರೀರಾಮ ದೇವರಲ್ಲಿ ಅತ್ಯಂತ ನಿಷ್ಠೆ, ಶ್ರದ್ಧೆಯ ಭಕ್ತನಾದ ಶ್ರೀ ಹನುಮ ದೇವರು ತನ್ನ ದೇಹವನ್ನು ಬಗೆದು ರಾಮನನ್ನು ತೋರಿಸಿದ ಮಹನ್ ಭಕ್ತ ಎಂದು ಇಡೀ ಜಗತ್ತು ಆ ಹನುಮ ದೇವರನ್ನು ಧ್ಯಾನಿಸುತ್ತದೆ ಎಂದು ಶ್ರೀ ವೀರೇಶ ಸ್ವಾಮಿಗಳು ನುಡಿದರು.

ನಗರದ ದಾಸಬಾಳ ಮಠದಲ್ಲಿ ಶುಕ್ರವಾರ ಹನುಮ ಜಯಂತಿ ನಿಮಿತ್ತ ಪಂಚಮುಖಿ ಪ್ರಾಣದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಆಶೀರ್ವಚನ ನೀಡಿದ ಅವರು, ಧಾರ್ಮಿಕ ಪರಂಪರೆಯುಳ್ಳ ನಮ್ಮ ನಾಡಿನ ಜನತೆ ಮಾಡುವ ಕಾಯಕದಲ್ಲಿ ಹನುಮ ದೇವರಂತೆ ಭಕ್ತಿಯಿಯಿಂದ ದೇವರನ್ನು ನೆನೆಯಬೇಕು ಎಂದರು.

ಶಿವಾನುಭವದಲ್ಲಿ ನಿವೃತ್ತ ಪ್ರಾಚಾರ್ಯ ಎಸ್.ಎಸ್. ಜುಗೇರಿ ಉಪನ್ಯಾಸ ನೀಡಿದರು. ನಾಗಯ್ಯ ಶಾಸ್ತ್ರೀಗಳಿಂದ ಶಿವಕೀರ್ತನೆ ಜರುಗಿತು. ಬೆಳಗ್ಗೆಯಿಂದ ಪಂಚಮುಖಿ ಪ್ರಾಣದೇವರಿಗೆ ಪುಷ್ಪಾಲಂಕಾದೊಂದಿಗೆ ತುಳಸಿ ಹಾಗೂ ಕುಂಕುಮಾರ್ಚನೆ, ಕ್ಷೀರಾಭಿಷೆಕ ನಡೆಯಿತು.

ಪರ್ವತರೆಡ್ಡಿ ಹೊಸಳ್ಳಿ, ಬಸಯ್ಯಸ್ವಾಮಿ ಯರಗೋಳ, ಪ್ರಾಚಾರ್ಯ ಸುರೇಶ ತಡಿಬಿಡಿ, ಪಿ.ಅಂಬರೇಶ ತಡಿಬಿಡಿ, ಬಸಯ್ಯ ಪಡಮನಳ್ಳಿ, ಬನ್ನಯ್ಯ ಶಾಸ್ತ್ರೀ ಜೋಳದಡಿಗಿ, ಗುರುಪಾದ ಶಹಾಪುರ, ಸಿದ್ದಲಿಂಗ ಶಿರವಾರ, ಮಲ್ಲಣ್ಣ ಶಿರವಾಳ ಇದ್ದರು.

Leave a Reply

Your email address will not be published. Required fields are marked *