ಡಿಪ್ಲೊಮಾ ವಿದ್ಯಾರ್ಥಿಗಳ ಪ್ರತಿಭಟನೆ

ಯಾದಗಿರಿ: ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ಗಳ ನೇಮಕದಲ್ಲಿ ಕಲಂ 371 (ಜೆ) ಅಡಿ ಯಾವುದೇ ಮೀಸಲಾತಿ ನಿಗದಿಪಡಿಸದೆ ನೇಮಕಾತಿ ಮಾಡಿಕೊಳ್ಳುತ್ತಿರುವ ಸರ್ಕಾರದ ಕ್ರಮ ಖಂಡಿಸಿ ಆರ್.ವಿ. ಕನ್ಸ್ಲ್ಟಿಂಗ್ ಸಿವಿಲ್ ಇಂಜಿನಿಯರಿಂಗ್ ಏಜೆನ್ಸಿಯಿಂದ ಇಂಜಿನಿಯರಿಂಗ್ ಡಿಪ್ಲೊಮಾ ವಿದ್ಯಾರ್ಥಿಗಳು ನಗರದ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಇಲಾಖೆಯಲ್ಲಿ ಸಹಾಯಕ ಅಭಿಯಂತರರು 570 ಮತ್ತು ಕಿರಿಯ ಅಭಿಯಂತರು 300 ಹುದ್ದೆಗಳಿಗೆ ಅಜರ್ಿ ಆಹ್ವಾನಿಸಲಾಗಿದ್ದು ಇದರಲ್ಲಿ ಕಲಂ 371ಜೆ ಪ್ರಕಾರ ಯಾವುದೇ ಮೀಸಲಾತಿ ತೋರಿಸಿದೇ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಕುರಿತು ಇಲಾಖೆಗೆ ಪ್ರಶ್ನಿಸಿದರೆ ನೇಮಕಾತಿ ಸಂದರ್ಭದಲ್ಲಿ ನಾವು 371 (ಜೆ) ಅನ್ವಯ ಮಾಡುತ್ತೇವೆ ಎಂದು ಉಡಾಫೆಯ ಉತ್ತರ ನೀಡಿ ಕಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೇವಲ ರಾಮನಗರ, ಹಾಸನ, ಮಂಡ್ಯಕ್ಕೆ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದು ಉಪಮುಖ್ಯಮಂಂತ್ರಿ ತುಮಕೂರು ಬೆಂಗಳೂರಿಗೆ ಸೀಮಿತರಾಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಸಕರ್ಾರ ಬದುಕಿದೆಯೇ ಸತ್ತಿದೆಯೇ ಎಂಬುದೂ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆರ್.ವಿ. ಕನ್ಸಲ್ಟಿಂಗ್ ಇಂಜಿನಿಯರಿಂಗ್ ಸಂಸ್ಥೆಯ ರಾಜಕುಮಾರ ಗಣೇರ, ನರೇಂದ್ರ ಅನವಾರ, ಶಿವಕುಮಾರ, ಸುರೇಶಕುಮಾರ, ಹಸೇನಿ, ಆನಂದ, ಸಾಬಣ್ಣ ಸೇರಿದಂತೆ ಅನೇಕ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.