ಪ್ರಯಾಣಿಕರು ತಂಗಲು ಸ್ಥಳಾವಕಾಶ ನೀಡಿ

ಕಕ್ಕೇರಾ: ದೇವಾಪುರ ಕ್ರಾಸ್ನ ಬಸ್ ಶೆಲ್ಟರ್ ಮುಂದೆ ವ್ಯಾಪಾರಸ್ಥರು ತಳ್ಳುಬಂಡಿಗಳಲ್ಲಿ ನಿಲ್ಲಿಸಿ ವ್ಯಾಪಾರ ಮಾಡುವುದರಿಂದ ಪ್ರಯಾಣಿಕರು ಕುಳಿತುಕೊಳ್ಳಲು ಸಾಧ್ಯವಾಗದೆ ರಸ್ತೆ ಬದಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ದೇವಾಪುರ ಕ್ರಾಸ್ದಿಂದ ಸುರಪುರ, ಹುಣಸಗಿ ಹಾಗೂ ತಿಂಥಣಿ ಬ್ರಿಜ್ ಮಾರ್ಗಕ್ಕೆ ತೆರಳಲು ವಿದ್ಯಾಥರ್ಿಗಳು, ವೃದ್ಧರು, ವಿಕಲಚೇತನರು, ಮಹಿಳೆಯರು ಹಾಗೂ ರೈತರು ಸೇರಿ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ತೆರಳುತ್ತಾರೆ. ಆದರೆ ಸೂಕ್ತ ನೆರಳಿನೊಂದಿಗೆ ಕುಳಿಕೊಳ್ಳಲು ಸ್ಥಳ ಇಲ್ಲದಂತಾಗಿದೆ. ಆದರೆ ಇಲ್ಲಿವರೆಗೂ ಸ್ಥಳೀಯ ಗ್ರಾಪಂ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಗಮನಹರಿಸುತ್ತಿಲ್ಲ.

ಮೂರು ಮಾರ್ಗದ ಕಡೆ ಸಂಚರಿಸಲು ಬಸ್ಗಳಿಗಾಗಿ ಕಾಯುವ ಪ್ರಯಾಣಿಕರು ಬಿರು ಬಿಸಿಲಿನಲ್ಲಿ ರಸ್ತೆಯಲ್ಲಿ ಕಾಯುವಂತಾಗಿದೆ. ತಂಗುದಾಣದ ದುರು ತಳ್ಳುಬಂಡಿಯಲ್ಲಿ ವ್ಯಾಪಾರಸ್ಥರು ನಸುಕಿನಿಂದಲೇ ಟೀ, ಹಣ್ಣಿನ ಅಂಗಡಿ, ಹೊಟೇಲ್ ನಡೆಸುತ್ತಾರೆ. ಇದರಿಂದ ತಂಗುದಾನದ ಒಳಗೆ ತೆರಳಲು ಇಕ್ಕಟ್ಟಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೂಡಲೇ ದೇವಾಪೂರ ಗ್ರಾಪಂ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಇತ್ತ ಗಮನಹರಿಸಿ ಬಸ್ ಶೆಲ್ಟರ್ ಎದುರಿನ ತಳ್ಳುಬಂಡಿಗಳನ್ನು ತೆರವುಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.