ಆಸ್ತಿ ಹಂಚಿಕೆ ವಿಷಯದಲ್ಲಿ ಸೊಸೆ, ಮೊಮ್ಮಕ್ಕಳಿಗೇ ಥಳಿಸಿದ ಅಜ್ಜ

ಯಾದಗಿರಿ: ಆಸ್ತಿ ವಿಚಾರವಾಗಿ ಕೋಪಗೊಂಡ ಅಜ್ಜ‌ನೊಬ್ಬ ತನ್ನ ಮೊಮ್ಮಕ್ಕಳು ಹಾಗೂ ಸೊಸೆಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್​ನಲ್ಲಿ ಭಾನುವಾರ ಬೆಳಗ್ಗೆ ಘಟನೆ ನಡೆದಿದ್ದು, ಯಂಕಣ್ಣ ಎಂಬ ವೃದ್ಧ ಮೊಮ್ಮಕ್ಕಳಾದ ಗೋವಿಂದ, ವಿಜಯಲಕ್ಷ್ಮಿ ಹಾಗೂ ಸೊಸೆ ಹುಲಿಗೆಮ್ಮಳಿಗೆ ಥಳಿಸಿದ್ದಾನೆ. ಹಲ್ಲೆಯಲ್ಲಿ ಗಾಯಗೊಂಡ ಮೂವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತಂತೆ ಹಲ್ಲೆಗೊಳಗಾದ ಗೋವಿಂದ ತನ್ನ ಅಜ್ಜ ಸೇರಿ 8 ಜನರ ವಿರುದ್ಧ ಸುರಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್)