Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ನೌಕರರ ಮೇಲಿನ ಶೋಷಣೆ ನಿಲ್ಲಲಿ

Wednesday, 11.07.2018, 5:32 AM       No Comments

ಯಾದಗಿರಿ: ಅಂಗನವಾಡಿ ನೌಕರರನ್ನು ಕಡೆಗಣಿಸುವ ಮೂಲಕ ಅವರ ಮೇಲೆ ಶೋಷಣೆ ಮಾಡುತ್ತಿರುವ ಸಕರ್ಾರದ ಕ್ರಮ ಖಂಡಿಸಿ ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಕನರ್ಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಸಂಘದ ಜಿಲ್ಲಾಧ್ಯಕ್ಷೆ ಸುರೇಖಾ ಕುಲಕಣರ್ಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸಕರ್ಾರ ಜಾರಿಗೊಳಿಸುವ ಎಲ್ಲ ಯೋಜನೆಗಳ ಅನುಷ್ಠಾನಕ್ಕೆ ಅಂಗನವಾಡಿ ನೌಕರರನ್ನು ಬಳಸಿಕೊಳ್ಳಲಾಗುತ್ತಿದೆ. ಸಕರ್ಾರ ಭಾಗ್ಯಲಕ್ಷ್ಮೀ, ಸ್ತ್ರೀಶಕ್ತಿ, ವಿಕಲಚೇತನರಿಗೆ ಸಂಬಂಧಿಸಿದಂತೆ ಯಾವುದೇ ಯೋಜನೆಗಳ ಮಾಹಿತಿ ನೀಡಬೇಕಾದರೂ ಸಕರ್ಾರ ನಮ್ಮನ್ನೇ ಕಳಿಸುತ್ತದೆ. ಆದರೆ ನಾವು ಸಣ್ಣಪುಟ್ಟ ತಪ್ಪು ಮಾಡಿದರೂ ಇಲಾಖೆಯಲ್ಲಿ ಕಾರ್ಯಕತರ್ೆಯರನ್ನು ಅವಮಾನಿಸುವ ಇಲ್ಲವೇ ಕೆಲಸದಿಂದ ತೆಗೆದುಹಾಕುವ ಪ್ರವೃತ್ತಿ ಬೆಳೆಯುತ್ತಿರುವುದು ನಿಜಕ್ಕೂ ಖಂಡನಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಕರ್ಾರ ಶೂನ್ಯ ಜಂಟಿ ಖಾತೆಯನ್ನು ತೆಗೆಯಲು ನಮ್ಮ ವಿರೋಧವಿಲ್ಲ ಆದರೆ ಅದರಲ್ಲಿನ ನಕಾರಾತ್ಮಕ ಅಂಶಗಳನ್ನು ಕೈಬಿಡಬೇಕು. ಬಾಲವಿಕಾಸ ಸಮಿತಿ ಅಧ್ಯಕ್ಷರ ಪ್ರಕಾರ ಅಂಗನವಾಡಿ ಕಾರ್ಯಕತರ್ೆಯರಿಗೆ ಸಹಾಯಕಿಯರನ್ನು ರಜೆ ಮಂಜೂರು ಹಾಗೂ ಸಭೆಗಳಿಗೆ ತೆರಳುವ ಅಧಿಕಾರ ನೀಡಿದೆ. ಆದರೆ ಇದರಿಂದ ಕಾರ್ಯಕತರ್ೆಯರು ಕೆಲ ಸಂದರ್ಭದಲ್ಲಿ ತೀವ್ರ ಕಿರುಕುಳ ಅನುಭವಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಸಕರ್ಾರದಿಂದಲೇ ಎಲ್ಕೆಜಿ, ಯುಕೆಸಿ ಶಾಲೆಗಳನ್ನು ಆರಂಭಿಸುವ ನಿಧರ್ಾರದಿಂದ ಕೂಡಲೇ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಕೂಡಲೇ ಸಹಾಯಕಿಯರನ್ನು ಕಡ್ಡಾಯವಾಗಿ ನೇಮಕ ಮಾಡಿಕೊಳ್ಳಬೇಕು. ಅಲ್ಲದೆ ಮಿನಿ ಅಂಗನವಾಡಿ ಕಾರ್ಯಕತರ್ೆಯರುಗೆ ಹೆರಿಗೆ ರಜೆ ಕಾಯಿಲೆ ಹಾಗೂ ಪಯರ್ಾಯ ವ್ಯವಸ್ಥೆ ಮಾಡಬೇಕು. ಅಂಗನವಾಡಿ ಸಹಾಯಕಿ, ಕಾರ್ಯಕತರ್ೆಯಾಗಿ ಮುಂಬಡ್ತಿ ಪಡೆಯಲು ಇರುವ ವಯಸ್ಸಿನ ಭೌಗೋಳಿಕ ಮಿತಿಯನ್ನು ಸಡಲಿಸಬೇಕು, ಕಾರ್ಯಕತರ್ೆಯರಿಗೆ ಸೇವಾ ನಿಯಮಾವಳಿ ರಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷೆ ರಾಜೇಶ್ವರಿ, ಬಸಲಿಂಗಮ್ಮ ನಾಟೇಕಾರ, ಕವಿತಾ ಯಾದಗಿರಿ, ಬಸ್ಸಮ್ಮ ಆಲ್ದಾಳ, ರಾಧಾ ಸುರಪುರ, ಯಮನಮ್ಮ, ಅನಿತಾ ಹಿರೇಮಠ, ಅಂಜಮ್ಮ ಗುರುಮಠಕಲ್, ನಸೀಮಾ ಮುದ್ನೂರ ಸೇರಿದಂತೆ ಸುಮಾರು 500 ಹೆಚ್ಚು ನೌಕರರು ಇದ್ದರು.

Leave a Reply

Your email address will not be published. Required fields are marked *

Back To Top