ಹೆಡಗಿಮದ್ರಾ ಗ್ರಾಮ ತಲುಪಿದ ಪಾರಂಪರಾ ಪಾದಯಾತ್ರೆ

ಯಾದಗಿರಿ: ಲೋಕಕಲ್ಯಾಣಾರ್ಥವಾಗಿ ಅಬ್ಬೆ ತುಮಕೂರಿನ ಡಾ. ಗಂಗಾಧರ ಮಹಾಸ್ವಾಮಿಗಳು ಕೈಕೊಂಡಿರುವ ಪಾರಂಪರಾ ಪಾದಯಾತ್ರೆ ಶುಕ್ರವಾರ ಸಂಜೆ ತಾಲೂಕಿನ ಹೆಡಗಿಮುದ್ರಾ ಗ್ರಾಮಕ್ಕೆ ಬಂದು ತಲುಪಿತು.
ಲೋಕಕಲ್ಯಾಣಾರ್ಥವಾಗಿ ಜೇವರ್ಗಿ ತಾಲೂಕಿನ ಗಂವ್ಹಾರ ಗ್ರಾಮದಿಂದ ಆಗಷ್ಟ್ 09 ರಂದು ಆರಂಭಗೊಂಡ ತಾಲೂಕಿನ ಅಬ್ಬೆತುಮಕೂರಿನ ಡಾ.ಗಂಗಾಧರ ಮಹಾಸ್ವಾಮಿಗಳ ಪಾರಂಪರಾ ಪಾದಯಾತ್ರೆ ಶುಕ್ರವಾರ ಸಂಜೆ ತಾಲೂಕಿನ ಹೆಡಗಿಮದ್ರಾ ಗ್ರಾಮ ತಲುಪಿತು.
ಸನ್ನತಿಯ ಚಂದ್ರಲಾ ಪರಮೇಶ್ವರಿ ಹಾಗೂ ಸೋಮೇಶ್ವರ ಲಿಂಗಕ್ಕೆ ರುದ್ರಾಭೀಷೇಕ ಮಹಾಪೂಜೆ ನೆರವೇರಿಸಿದ ಶ್ರೀಗಳು ನಂತರ ಭಕ್ತರಿಗೆ ಆಶಿರ್ವಚನ ನೀಡಿ, ಇಂದಿನ ವ್ಯವಸ್ಥೆಯಲ್ಲಿ ಮನುಷ್ಯ ಅನೇಕ ಒತ್ತಡಗಳಿಗೆ ಸಿಲುಕಿ ಒದ್ದಾಡುತ್ತಿದ್ದಾನೆ. ಸಾಂಸಾರಿಕ ಜಂಜಾಟಗಳಿಗೆ ತುತ್ತಾಗಿ ಜರ್ಜರಿತನಾಗುತ್ತಿದ್ದಾನೆ. ಇದರಿಂದ ಮುಕ್ತನಾಗಿ ಶಾಂತಿಯನ್ನು ಪಡೆಯಬೇಕಾದರೆ ಭಕ್ತಿಯ ಮಾರ್ಗದಲ್ಲಿ ನಡೆಯುವುದು ಅವಶ್ಯವಿದೆ. ಪಾದಯಾತ್ರೆಯಲ್ಲಿ ಅತ್ಯಂತ ಭಕ್ತಿ ಮತ್ತು ನಿಷ್ಠೆಯಿಂದ ಪಾಲ್ಗೊಳ್ಳುತ್ತಿದ್ದು, ಎಲ್ಲರಿಗೂ ವಿಶ್ವಾರಾಧ್ಯ ಆಯುರಾರೋಗ್ಯ ನೀಡಿ ಕರುಣಿಸಿ ಕಾಪಾಡುತ್ತಾನೆ ಎಂದರು.
ಅಲ್ಲಿಂದ ಶ್ರೀಗಳ ಪಾದಯಾತ್ರೆ ಹೆಡಗಿಮದ್ರಾದ ಶ್ರೀಶಾಂತ ಶಿವಯೋಗಿ ಮಠಕ್ಕೆ ಆಗಮಿಸಿ ವಾಸ್ತವ್ಯ ಮಾಡಲಾಯಿತು. 3ನೇ ದಿನದ ಪಾದಯಾತ್ರೆ ಹೆಡಗಿಮದ್ರಾದಿಂದ ಹೊರಟು ಠಾಣಗುಂದಿ ಗ್ರಾಮಕ್ಕೆ ಸಾಗಿ ವೀರಾಂಜನೇಯ ಸ್ವಾಮಿ ಪ್ರಾಂಗಣದಲ್ಲಿ ಭಕ್ತರ ಸೇವೆಯನ್ನು ಸ್ವೀಕರಿಸಿ ಸಂಜೆ 6 ಗಂಟೆಗೆ ಅಬ್ಬೆತುಮಕೂರಿನ ಪಾದಗಟ್ಟೆಯನ್ನು ತಲುಪಲಾಗುತ್ತದೆ.
ಶ್ರೀಗಳ ಜತೆ ರಾಮಶೆಟ್ಟಿ ಜೇವಗರ್ಿ, ಸಿದ್ದನಗೌಡ ಪೊಲೀಸ್ ಪಾಟೀಲ್, ಮಲ್ಲಿಕಾಜರ್ುನ ಶಾಸ್ತ್ರೀ, ಬಸವರಾಜ ಶಾಸ್ತ್ರೀ, ಚಮದಲಾ ಪರಮೇಶ್ವರಿ ದೇವಸ್ಥಾನ ಕಮೀಟಿ ಸದಸ್ಯರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಶನಿವಾರ ಅಬ್ಬೆತುಮಕೂರಿನ ಸೀಮಾಂತರದಲ್ಲಿ ಗ್ರಾಮಸ್ಥರು ಮತ್ತು ಎಲ್ಲ ಸದ್ಬಕ್ತರು ಶ್ರೀಗಳನ್ನು ಅತ್ಯಂತ ವೈಭವದಿಂದ ಭಕ್ತಿ ಪೂರ್ವಕವಾಗಿ ಬರಮಾಡಿಕೊಳ್ಳುವರು. ಈ ಸಂದರ್ಭದಲ್ಲಿ ಸಚಿವರುಗಳಾದ ವೆಂಕಟರಾವ್ ನಾಡಗೌಡ, ಎಂ.ಸಿ.ಮನಗೂಳಿ, ಶಾಸಕರುಗಳಾದ ಸಿದ್ದರಾಮ ಮೇತ್ರೆ, ವೆಂಕಟರಡ್ಡಿಗೌಡ ಮುದ್ನಾಳ, ನಾಗನಗೌಡ ಕಂದಕೂರ, ಶರಣಬಸ್ಸಪ್ಪಗೌಡ ದರ್ಶನಾಪುರ, ಬಸವರಾಜ ಮತ್ತಿಮೂಡ, ರಾಜುಗೌಡ, ಬಸವರಾಜ ದದ್ದಲ್, ಡಾ.ಅಜಯಸಿಂಗ್, ಮಾಜಿ ಶಾಸಕರಾದ ಡಾ.ಎ.ಬಿ.ಮಾಲಕರಡ್ಡಿ, ಡಾ.ವೀರಬಸವಂತರಡ್ಡಿ ಮುದ್ನಾಳ ಸೇರಿದಂತೆ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *