ಭಕ್ತ ಸಾಗರದ ಮಧ್ಯೆ ಮೌನೇಶ್ವರ ರಥೋತ್ಸವ

ವಿಜಯವಾಣಿ ಸುದ್ದಿಜಾಲ ಕಕ್ಕೇರಾ
ಹಿಂದೂ-ಮುಸ್ಲಿಂರ ಭಾವೈಕ್ಯತೆ ತಿಂಥಣಿಯ ಜಗದ್ಗುರು ಶ್ರೀ ಮೌನೇಶ್ವರ ರಥೋತ್ಸವ ಸೋಮವಾರ ಸಂಜೆ 5.50ರ ಸುಮಾರಿಗೆ ಲಕ್ಷಾಂತರ ಭಕ್ತ ಜನಸಮೂಹದ ಜಯಘೋಷ ಹಾಗೂ ವಾದ್ಯಮೇಳಗಳೊಂದಿಗೆ ಅದ್ದೂರಿಯಾಗಿ ಜರುಗಿತು.

ಏಕ ಲಾಕ್ ಐಂಸಿ ಹಜಾರ್ ಪಾಚೋಪೀರ ಪೈಗಂಬರ್ ಜೀತಾ ಪೈಗಂಬರ್ ಮೌನೋದ್ದೀನ್ ಕಾಶಿಪತಿ ಗಂಗಾಧರ ಹರಹರ ಮಹಾದೇವ…. ಎನ್ನುವ ಮಂತ್ರಘೋಷ ಎಲ್ಲೆಡೆ ಮೊಳಗಿದವು. ಭಕ್ತರ ಹಷರ್ೋದ್ಗಾರ, ಕರತಾಡನ ಮುಗಿಲು ಮುಟ್ಟಿತ್ತು.

ಭಕ್ತರು ಸುತ್ತಲಿನ ಬೆಟ್ಟಗುಡ್ಡಗಳ ಮೇಲೆ ನಿಂತು ದೂರದಿಂದ ರಥೋತ್ಸವವನ್ನು ವೀಕ್ಷಿಸಿದರು. ರಥ ಚಲಿಸುವ ರಾಜ ಮಾರ್ಗದುದ್ದಕ್ಕೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ನಂತರ ಪಲ್ಲಕ್ಕಿ ಮಹಾಸೇವೆ ಕಾರ್ಯಕ್ರಮಗಳು ಜರುಗಿದವು.

ಸುರಪೂರ ಅರಸು ಸಂಸ್ಥಾನದ ಯುವರಾಜ ರಾಜಾ ಲಕ್ಷ್ಮೀನಾರಾಯಣ ನಾಯಕ ರಥಕ್ಕೆ ಪೂಜೆ ಸಲ್ಲಿಸಿ ತೆಂಗಿನಕಾಯಿ ಅರ್ಪಿಸಿದರು. ಪೂಜ್ಯ ಶ್ರೀ ಗಂಗಾಧರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.
ದೇವಸ್ಥಾನ ಶ್ರೀ ಗಂಗಾಧರ ಸ್ವಾಮೀಜಿ, ಮೌನೇಶ್ವರ ಸ್ವಾಮೀಜಿ ವಿವಿಧ ಮಠಗಳ ಪೂಜ್ಯರುಗಳು, ತಹಸೀಲ್ದಾರ್ ಸುರೇಶ ಅಂಕಲಗಿ, ಗ್ರಾಪಂ ಅಧ್ಯಕ್ಷ ಸಂಜೀವನಾಯಕ ಕವಾಲ್ದಾರ್, ಉಪಾಧ್ಯಕ್ಷ ಇಮಾಮಸಾಬ್ ಹವಾಲ್ದಾರ್, ದೇವಸ್ಥಾನ ಸಮಿತಿ ಸದಸ್ಯರಾದ ಗಂಗಾಧರ ಸ್ವಾಮೀಜಿ, ಚಿನ್ನಪ್ಪ ಗುಡಗುಂಟಿ, ಸಣ್ಣಮಾನಯ್ಯ ಬಂಡೋಳ್ಳಿ, ದೇವೆಕ್ಕೆಮ್ಮ ಕವಾಲ್ದಾರ, ಹಣಮಂತಿ ಅಂಬಿಗೇರ, ನಿಂಗಣ್ಣಾಚಾರ್ಯ ಜೋಶಿ, ಹಣಮಂತ್ರಾಯ ಹೊಸಪೇಟ, ಬಸವರಾಜ ದೊಡ್ಮನಿ, ಈರಣ್ಣ ಹಳಿಸಗರ, ಪ್ರಮುಖರಾದ ಮಾನಯ್ಯಗೌಡ ದಳಪತಿ, ಭೀಮಣ್ಣ ಕವಾಲ್ದಾರ್, ದೇವಿಂದ್ರಪ್ಪ ಅಂಬಿಗೇರ, ಗಂಗಾಧರನಾಯಕ್, ತಿಪ್ಪಣ್ಣ ಕುಲಕರ್ಣಿ, ದೇವಾಲಯದ ಶಿರೆಸ್ತದಾರ ಪ್ರವೀಣಕುಮಾರ, ಕಕ್ಕೇರಾ ಕಂದಾಯ ನಿರೀಕ್ಷ ವಿಠಲ್ ಬಂದಾಳ್, ಗ್ರಾಮಲೆಕ್ಕಾಧಿಕಾರಿ ಮುಬಿನ್, ಪಿಡಿಒ ದೇವಿಂದ್ರಪ್ಪ ಹಳ್ಳಿ, ಫಕ್ರುದ್ದೀನ ಹವಾಲ್ದಾರ, ದೇವಸ್ಥಾನ ಮೇಲ್ವಿಚಾರಕ ಶಿವಾನಂದಯ್ಯ ಮಠ್, ಬಸವರಾಜ ಮ್ಯಾನೇಜರ್, ಭೀಮಣ್ಣ ಮೇಟಿ, ಗ್ರಾಪಂ ಸದಸ್ಯರುಗಳು, ಗ್ರಾಮದ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಮತ್ತು ನಾಗರಿಕರು ಉಪಸ್ಥಿತರಿದ್ದರು.

ಸುರಪುರ ಸರ್ಕಲ್ ಇನ್ಸ್ಪೆಕ್ಟರ್ ಆನಂದರಾವ್ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಭಾನುವಾರ ರಾತ್ರಿ ಕಕ್ಕೇರಾದ ಸೋಮನಾಥ ಸಂಗೀತ ಪಾಠಶಾಲಾ ಹಾಗೂ ಅಮರಲಿಂಗೇಶ್ವರ ಸಂಗೀತ ಪಾಠಶಾಲೆ ಮಕ್ಕಳಿಂದ ಸಂಗೀತ ಕಾರ್ಯಕ್ರಮ ಜರುಗಿದವು.

ಭಕ್ತರಿಗೆ ದರ್ಶನಕ್ಕಾಗಿ ಮೌನೇಶ್ವರ ಮೂರ್ತಿ ಹೊರಗಿಡಲಾಗಿದ್ದು, ಭಕ್ತರು ಭಕ್ತಿ, ಶ್ರದ್ದಾ-ಭಕ್ತಿಯಿಂದ ನಮಿಸಿ ದೇವರ ಕೃಪೆಗೆ ಪಾತ್ರರಾದರು. ದೇವಾಲಯದ ಮುಂದಿನ ಎತ್ತರದ ಗುಡ್ಡದ ಪ್ರದೇಶದಲ್ಲಿ ಭಕ್ತರು ಭೂಮಿಯನ್ನು ಅಗೆದು ಮುತ್ತುರತ್ನಗಳು ಸಿಗುತ್ತವೆ ಎಂಬ ದೈವ ನಂಬಿಕೆಯಿಂದ ಹುಡುಕಾಡಿದರು.