ಕಲಾವಿದರನ್ನು ಗುರುತಿಸುವ ಹೊಣೆ ಸರ್ಕಾರದ್ದು

ವಿಜಯವಾಣಿ ಸುದ್ದಿಜಾಲ ಕಕ್ಕೇರಾ
ಕಲಾವಿದರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಗುರುತರವಾದ ಜವಾಬ್ದಾರಿ ಸರ್ಕಾರ ಮತ್ತು ಸಂಘ ಸಂಸ್ಥೆಗಳ ಮೇಲೆ ಇದೆ ಎಂದು ಮುದನೂರಿನ ಕಂಠಿಮಠದ ಶ್ರೀ ಸಿದ್ಧಚನ್ನಮಲ್ಲಿಕಾಜರ್ುನ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಸ್ಥಳೀಯ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಪಟ್ಟಣದ ಹಿರಿಯ ಸಂಗೀತಗಾರ ಬಸಣ್ಣ ಗುರಿಕಾರ ಗವಾಯಿಗಳ ಜೀವನ ಆಧಾರಿತ ಸಾಕ್ಷ್ಯಚಿತ್ರ ಲೋಕಾರ್ಪಣೆ ಕಾರ್ಯಕ್ರತಮದಲ್ಲಿ ಮಾತನಾಡಿದ ಅವರು, ಬಸಣ್ಣ ಗವಾಯಿಗಳು 36 ವರ್ಷದಿಂದ ನಿರಂತರವಾಗಿ ಪಟ್ಟಣದ ಬಡಮಕ್ಕಳಿಗೆ ಯಾವುದೇ ಫಲಾಪೇಕ್ಷೆಯಿಲ್ಲದೇ ಉಚಿತ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ. ಗವಾಯಿಗಳಿಗೆ ಶಾರದೆಮಾತೆ ಅವರಿಗೆ ಒಲಿದಿದ್ದಾಳೆ. ಇವರ ಗರುಡಿಯಲ್ಲಿ ಪಳಗಿದ ಅದೆಷ್ಟೋ ವಿದ್ಯಾರ್ಥಿಗಳು ರಾಜ್ಯದ ಎಲ್ಲೆಡೆ ತಮ್ಮ ಸಂಗೀತದ ಕಂಪು ಪಸರಿಸಿ ಪಟ್ಟಣದ ಕೀತರ್ಿ ಮೆರೆದಿದ್ದಾರೆ. ಕೆಲವರು ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿದ್ದಾರೆ ಎಂದು ಹೇಳಿದರು.

ಯಡ್ರಾಮಿ ಕನ್ಯಾ ಪ್ರೌಢಶಾಲೆ ಶಿಕ್ಷಕ ಬಸಯ್ಯಸ್ವಾಮಿ ವಿಶೇಷ ಉಪನ್ಯಾಸ ನೀಡಿ, ಸಮಾಜದಲ್ಲಿ ಎಲೆ-ಮರೆ ಕಾಯಿಯಂತೆ ಇದ್ದ ಕಲಾವಿದ ಬಸಣ್ಣ ಗುರಿಕಾರ ಅವರನ್ನು ಸರ್ಕಾರ ಗುರುತಿಸಿ ಅವರ ಜೀವನ ಆಧಾರಿತ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಮಾತನಾಡಿ, ಬಸಣ್ಣ ಗುರಿಕಾರ ಅವರ ಉಚಿತ ಸಂಗೀತ ಸೇವೆ ಜಿಲ್ಲೆಗೆ ಮಾದರಿಯಾಗಿದೆ. ಅವರ ಅನುಪಮ ಸೇವೆ ಗುರುತಿಸಿ ನಮ್ಮ ಇಲಾಖೆವತಿಯಿಂದ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸುತ್ತಿದ್ದೇವೆ. ಜಿಲ್ಲೆಯಲ್ಲಿನ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಇಲಾಖೆ ಮಾಡುತ್ತಿದೆ ಎಂದು ಹೇಳಿದರು.

ಪಟ್ಟಾಭೀಷೇಕ ನಂತರ ಮೊದಲ ಬಾರಿ ಪಟ್ಟಣಕ್ಕೆ ಆಗಮಿಸಿದ ಮುದನೂರಿನ ಶ್ರೀ ಸಿದ್ಧಚನ್ನಮಲ್ಲಿಕಾರ್ಜುನ ಶಿವಾಚಾರ್ಯರಿಗೆ ಪಟ್ಟಣದ ನಾಗರೀಕರಿಂದ ಭವ್ಯ ಸ್ವಾಗತ ಕೋರಿ ಅಭಿನಂದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಅಯ್ಯಣ್ಣಪ್ಪ ಪೂಜಾರಿ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ದಶರಥ ಆರೇಶಂಕರ ಅಧ್ಯಕ್ಷತೆ ವಹಿಸಿದ್ದರು. ಪೂಜ್ಯ ವರದಾನೇಶ್ವರ ಸ್ವಾಮೀಜಿ ಮಾತನಾಡಿದರು. ಪ್ರಮುಖರಾದ ಭೀಮನಗೌಡ ಹಳ್ಳಿ, ಗಂಗಾಧರನಾಯಕ ತಿಂಥಣಿ, ಲಕ್ಷ್ಮಣ ಲಿಂಗದಳ್ಳಿ, ಬಸವರಾಜ ಕಮತಗಿ, ಬಸವರಾಜ ಭಂಟನೂರ, ಪರಮಣ್ಣ ವಡಿಕೇರಿ, ಯಮುನೇಶ ಯಾಳಗಿ, ಮಲ್ಲಿಕಾಜರ್ುನ ಲಿಂಗಸೂರ, ನಿಂಗಣ್ಣ ಪತ್ತಾರ್, ಈಶ್ವರ ಬಡಿಗೇರ, ಜೆಟ್ಟೆಪ್ಪ ಯಲಗಟ್ಟಿ, ತಿಮ್ಮಯ್ಯ ಗವಾಯಿ, ಆಮಯ್ಯಸ್ವಾಮಿ ಇತರರಿದ್ದರು.

ಸೋಮನಾಥ ಸಂಗೀತ ಪಾಠಶಾಲಾ ಮಕ್ಕಳು ಪ್ರಾಥರ್ಿಸಿದರು. ಕೆ.ಗವಿಸಿದ್ದೇಶ ಹೊಗರಿ ಸ್ವಾಗತಿಸಿದರು. ಚಂದ್ರು ವಜ್ಜಲ್ ಪ್ರಾಸ್ತಾವಿಕ ನುಡಿದರು. ರಹೀಮ ಹವಾಲ್ದಾರ ನಿರೂಪಣೆ ಮಾಡಿದರು. ವೆಂಕಟೇಶ ದೊರೆ ವಂದಿಸಿದರು.

ಫೂಜ್ಯರ, ಗಣ್ಯರ ಭವ್ಯ ಮೆರವಣಿಗೆ: ಪೂಜ್ಯರು, ಸಾಕ್ಷ್ಯಚಿತ್ರದ ರೂವಾರಿ ಬಸಣ್ಣ ಗುರಿಕಾರ, ಹಾಗೂ ಅತಿಥಿ ಮಹೋದಯರನ್ನು ವಾಲ್ಮೀಕಿ ವೃತ್ತದಿಂದ ವೇದಿಕೆವರೆಗೆ ವಾಧುಮೇಳದೊಂದಿಗೆ ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಮೈಸೂರ ದಸರಾ ಖ್ಯಾತಿಯ ಬೀರಲಿಂಗೇಶ್ವರ ಡೊಳ್ಳಿನ ಕಲಾತಂಡದಿಂದ ವೈವಿದ್ಯಮಯವಾದ ಡೊಳ್ಳುಕುಣಿತ, ಡೊಳ್ಳಿನ ಪದಗಳು, ಹನ್ಮಂತ್ರಾಯ ಗುರಿಕಾರ ಸಂಗಡಿಗರಿಂದ ಮೊಹರಂ ಪದಗಳು ಹಾಗೂ ಸೋಮನಾಥ ಸಂಗೀತ ಪಾಠಶಾಲೆ ಮಕ್ಕಳಿಂದ ಸಂಗೀತ ಕಾರ್ಯಕ್ರಮ ನೋಡುಗರ ಕಣ್ಮನಸೆಳೆಯಿತು. ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾಥರ್ಿಗಳಿಗಾಗಿ ಪ್ರಬಂಧ, ರಂಗೋಲಿ, ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.