More

  1 ರೂ.ಗೆ ‘ಯದಾ ಯದಾಹಿ’; ಮರ್ಡರ್ ಮಿಸ್ಟರಿಯಲ್ಲಿ ಸಿಂಹಪ್ರಿಯಾ ಜೋಡಿಯ ಮಿಂಚು

  ಬೆಂಗಳೂರು: ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ, ಹಾಡಿರುವ ಸಿನಿಮಾ ‘ಯದಾ ಯದಾಹಿ’. ಇದೊಂದು ಮರ್ಡರ್ ಮಿಸ್ಟರಿ ಚಿತ್ರವಾಗಿದ್ದು, ಶುಕ್ರವಾರ ತೆರೆಗೆ ಬರಲಿದೆ. ಹರಿಪ್ರಿಯಾ ಚಿತ್ರದಲ್ಲಿ ನೆಗಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಇಡೀ ಚಿತ್ರಕಥೆ ಅವರ ಪಾತ್ರದ ಸುತ್ತ ಹೆಣೆಯಲಾಗಿದೆ. ಇಂತಹ ಹಲವು ವಿಶೇಷತೆಗಳನ್ನು ಹೊಂದಿರುವ ಈ ಚಿತ್ರದ ಪ್ರೀಮಿಯರ್ ಶೋವನ್ನು ಕೇವಲ ಒಂದು ರೂಪಾಯಿಯಲ್ಲಿ ನೋಡಬಹುದಾಗಿದೆ.

  ಬುಧವಾರ (ಮೇ 31) ಸಂಜೆ ‘ಯದಾ ಯದಾಹಿ’ ಚಿತ್ರದ ಪ್ರೀಮಿಯರ್ ಶೋವನ್ನು ಬೆಂಗಳೂರಿನ ವೀರೇಶ ಚಿತ್ರಮಂದಿರ ಹಾಗೂ ಹುಬ್ಬಳ್ಳಿಯ ಸುಧಾ ಥಿಯೇಟರ್‌ಗಳಲ್ಲಿ 1 ರೂ. ಪ್ರವೇಶ ದರ ನೀಡಿ ವೀಕ್ಷಿಸಬಹುದು. ಕೆಲವು ದಿನಗಳ ಹಿಂದಷ್ಟೇ ‘ಡೇರ್‌ಡೆವಿಲ್ ಮುಸ್ತಾಾ’ ಚಿತ್ರತಂಡ ಸಹ ಇದೇ ರೀತಿ 1 ರೂ. ಪ್ರೀಮಿಯರ್ ಶೋ ಆಯೋಜಿಸಿತ್ತು.

  ‘ಯದಾ ಯದಾಹಿ’ ಚಿತ್ರದಲ್ಲಿ ಒಟ್ಟಿಗೆ ನಟಿಸುರುವುದು ಮಾತ್ರವಲ್ಲದೇ ವಸಿಷ್ಠ ಮತ್ತು ಹರಿಪ್ರಿಯಾ, ಒಟ್ಟಿಗೇ ಚಿತ್ರದ ಶೀರ್ಷಿಕೆ ಗೀತೆಗೆ ಧ್ವನಿಯಾಗಿದ್ದಾರೆ. ಶಾಲಿನಿ ಎಂಟರ್‌ಪ್ರೈಸಸ್ ಮೂಲಕ ಜಾಕ್ ಮಂಜು ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ. ಟಾಲಿವುಡ್ ಮೂಲದ ಅಶೋಕ ತೇಜ ನಿರ್ದೇಶಿಸಿರುವ ಈ ಚಿತ್ರವನ್ನು ಹೈದರಾಬಾದ್‌ನ ರಾಜೇಶ್ ಅಗರ್ವಾಲ್ ನಿರ್ಮಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts