PHOTOS: ವಿಜಯವಾಣಿ, ದಿಗ್ವಿಜಯ ನ್ಯೂಸ್​ ಎಜುಕೇಷನ್​ ಎಕ್ಸ್​ಪೋಗೆ ಕಡೆಯ ದಿನವೂ ಉತ್ತಮ ಸ್ಪಂದನೆ

ಬೆಂಗಳೂರು: ವಿಜಯವಾಣಿ, ದಿಗ್ವಿಜಯ ನ್ಯೂಸ್​ ಬೆಂಗಳೂರಿನ ಬಸವನಗುಡಿ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ಎಜುಕೇಷನ್​ ಎಕ್ಸ್​ಪೋಗೆ ಉತ್ತಮ ಸ್ಪಂದನೆ ದೊರೆತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪಾಲಕರು ಆಗಮಿಸಿ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡರು.

ಇಂದು ನಡೆದ ವಿಚಾರ ಸಂಕಿರಣದಲ್ಲಿ ಐಟಿಐಇ ನಾಲೇಜ್​ ಸಲ್ಯೂಷನ್ಸ್ ಸಂಸ್ಥಾಪಕ ಸಂಜೀವ್ ಕುಬ್ಕಡಿ ತಾಂತ್ರಿಕ ಶಿಕ್ಷಣದ ಬಗ್ಗೆ ಮಾತನಾಡಿದರು. ನಂತರ ರೋಹಿಣಿ ರಾಮ್​ ಶಶಿಧರ್​ ಅವರು ವಿವಿಧ ಮಾಧ್ಯಮಗಳಲ್ಲಿ ಉದ್ಯೋಗ ಅವಕಾಶ ಕರಿತು ಮಾಹಿತಿ ನೀಡಿದರು. ಹಾಗೇ ಡಾ. ಕೆ.ಜಿ. ಮೋಹನ್ ಅವರು ಪ್ರಸಕ್ತ ಶೈಕ್ಷಣಿಕ ವ್ಯವಸ್ಥೆಯಲ್ಲಿನ ಟ್ರೆಂಡ್​ ಕುರಿತು ಮಾತನಾಡಿದರು.

ವಿವಿಧ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಹಲವು ಕೋರ್ಸ್​ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಎರಡು ದಿನಗಳ ಎಕ್ಸ್​ಪೋದಲ್ಲಿ ಭಾಗವಹಿಸಿದ್ದ ವಿವಿಧ ಕಾಲೇಜುಗಳ ಪ್ರತಿನಿಧಿಗಳಿಗೆ ವಿಆರ್​ಎಲ್​ ಮೀಡಿಯಾ ಜಾಹೀರಾತು ವಿಭಾಗದ ಉಪಾಧ್ಯಕ್ಷ ಕೆ. ಅರುಣ್ ಅವರು ನೆನಪಿನ ಕಾಣಿಕೆಗಳನ್ನು ವಿತರಿಸಿದರು. ಇಂದು ಸಂಜೆ ಎಕ್ಸ್​​ಪೋ ಮುಕ್ತಾಯಗೊಳ್ಳಲಿದೆ.

Leave a Reply

Your email address will not be published. Required fields are marked *