ಮೂಡಲಗಿ: ಒಳ ಮೀಸಲಾತಿಯ ಜಾತಿಗಣತಿ ಸಮೀೆಯಲ್ಲಿ ವೀರಶೆವ ಲಿಂಗಾಯತ ಜಂಗಮರು, ಬೇಡಜಂಗಮರೆಂದು ಹಾಗೂ ಇನ್ನು ಕೆಲವು ಮೇಲ್ಜಾತಿಯವರು ಪರಿಶಿಷ್ಟ ಜಾತಿಯ ಕೆಲವು ಜಾತಿಯ ಹೆಸರು ಹೇಳಿ ಸುಳ್ಳು ಮಾಹಿತಿ ನೀಡುತ್ತಿದ್ದು, ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಪಟ್ಟಣದ ಕಲ್ಮೇಶ್ವರ ವತ್ತದಲ್ಲಿ ಶುಕ್ರವಾರ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ವಿವಿಧ ಸಂಟನೆಗಳು ಪ್ರತಿಭಟಿಸಿ ತಹಸೀಲ್ದಾರ್ ಶಿವಾನಂದ ಬಬಲಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಮೇ 5ರಿಂದ ಸಮೀೆ ನಡೆಯುತ್ತಿದ್ದು, ಪರಿಶಿಷ್ಟ ಜಾತಿಯ ಹೆಸರು ಹೇಳಿಕೊಂಡು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಮೂಲ ಅಸ್ಪಶ್ಯರು ಮೀಸಲಾತಿಯಿಂದ ವಂಚಿತರಾಗಿ ಮೇಲ್ವರ್ಗದರು ಪರಿಶಿಷ್ಟರ ಮೀಸಲಾತಿಯ ಲಾನುಭವಿಗಳಾಗಿ ಮೀಸಲಾತಿ ವಂಚಿಸುವ ಯತ್ನವಾಗುತ್ತಿದೆ. ಕಾರಣ ಕೂಡಲೇ ಸರ್ಕಾರ ಎಚ್ಚೆತ್ತು ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಸತ್ಯಪ್ಪ ಕರವಾಡಿ, ರಮೇಶ ಸಣ್ಣಕ್ಕಿ, ರಮೇಶ ಮಾದರ, ಶಾಬಪ್ಪ ಸಣ್ಣಕ್ಕಿ, ರವೀಂದ್ರ ಸಣ್ಣಕ್ಕಿ, ಬಸವರಾಜ ಕಾಡಪ್ಪಪುರ, ಅಶೋಕ ಶಿದ್ದಿಲಿಂಗಪ್ಪಗೋಳ, ಮಹಾದೇವ ಮಸಣ್ಣವರ, ಯಶವಂತ ಮಂಟೂರ, ಸುರೇಶ ಸಣ್ಣಕ್ಕಿ, ತುಕಾರಾಮ ಸುಣದೋಳಿ, ವಿಜಯ ಮೇತ್ರಿ, ಬಸು ಬಡಿಗಿವಾಡ ಇತರರಿದ್ದರು.