ಕೋವಿಡ್ -19 ಶೀಘ್ರ ಪತ್ತೆ ಹಚ್ಚಲು ಬರಲಿದೆ ಮದ್ರಾಸ್ ಐಐಟಿಯ ರಿಸ್ಟ್ ಟ್ರ್ಯಾಕರ್

blank

ಚೆನ್ನೈ: ಆರಂಭಿಕ ಹಂತದ COVID-19 ರೋಗಲಕ್ಷಣಗಳನ್ನು ಪತ್ತೆಹಚ್ಚಲು ಧರಿಸಬಹುದಾದ ರಿಸ್ಟ್ ಟ್ರ್ಯಾಕರ್ ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿದೆ.
ಐಐಟಿ ಮದ್ರಾಸ್ ನ ಇನ್ಕ್ಯುಬೇಟೆಡ್ ಸ್ಟಾರ್ಟ್ ಅಪ್‌ ಇದನ್ನು ಡೆವಲಪ್​ ಮಾಡಲಾಗಿದ್ದು. ಈ ಉದ್ದೇಶಕ್ಕಾಗಿ 22 ಕೋಟಿ ರೂ. ಸಂಗ್ರಹಿಸಿದೆ. ಎನ್‌ಐಟಿ ವಾರಂಗಲ್ ಹಳೆಯ ವಿದ್ಯಾರ್ಥಿಗಳ ತಂಡ ಜೊತೆಗೆ ಐಐಟಿ ಮದ್ರಾಸ್‌ ಹಳೆಯ ವಿದ್ಯಾರ್ಥಿಗಳ ಗುಂಪು ಪ್ರಾರಂಭಿಸಲಾದ “ಮ್ಯೂಸ್ ವೇರ್‌ಬೇಲ್ಸ್” 70 ದೇಶಗಳಲ್ಲಿ ಟ್ರ್ಯಾಕರ್‌ಗಳನ್ನು ಮಾರುಕಟ್ಟೆಗೆ ತರಲು ಯೋಜಿಸುತ್ತಿದೆ.

ರಿಸ್ಟ್ (ಮಣಿಕಟ್ಟು) ಆಧಾರಿತ ಟ್ರ್ಯಾಕರ್ ಚರ್ಮದ ಉಷ್ಣತೆ, ಹೃದಯ ಬಡಿತ ಮತ್ತು SpO2 (ರಕ್ತ ಆಮ್ಲಜನಕ ಶುದ್ಧತ್ವ) ಗಾಗಿ ಸಂವೇದಕಗಳನ್ನು ಹೊಂದಿದ್ದು, COVID-19 ರೋಗಲಕ್ಷಣಗಳ ಆರಂಭಿಕ ರೋಗನಿರ್ಣಯಕ್ಕೆ ಸಹಾಯ ವಾಗುವಂತೆ ಈ ದೇಹದ ಜೀವಕೋಶಗಳನ್ನು ದೂರದಿಂದಲೇ ಟ್ರ್ಯಾಕ್ ಮಾಡಬಹುದು.

ಇದನ್ನೂ ಓದಿ: Video] ನಾಲ್ಕರ ನಗುಮೊಗದ ಪೋರಿಯ ಹುಟ್ಟುಹಬ್ಬಕ್ಕೆ ತಂದೆ ನೀಡಿದ ಗಿಫ್ಟ್ ನೋಡಿದರೆ ನೀವೂ ಫುಲ್ ಖುಷ್

ಈ ಟ್ರ್ಯಾಕರ್ ನಲ್ಲಿ ಬ್ಲೂಟೂತ್ ಇರಲಿದ್ದು, ಮ್ಯೂಸ್ ಹೆಲ್ತ್ ಅಪ್ಲಿಕೇಶನ್ ಮೂಲಕ ಮೊಬೈಲ್ ಫೋನ್‌ಗೆ ಸಂಪರ್ಕಿಸಬಹುದು. ಬಳಕೆದಾರರ ಜೀವಕೋಶಗಳು ಮತ್ತು ಚಟುವಟಿಕೆಯ ಡೇಟಾವನ್ನು ಫೋನ್‌ನಲ್ಲಿ ಮತ್ತು ರಿಮೋಟ್ ಸರ್ವರ್‌ನಲ್ಲಿ ಸಂಗ್ರಹಿಸಲಾಗುತ್ತದೆ.
ಟ್ರ್ಯಾಕರ್ ಆರೋಗ್ಯ ಸೇತು ಆ್ಯಪ್​​ನಿಂದ ಅಧಿಸೂಚನೆಗಳನ್ನು ಪಡೆಯಬಹುದು ಮತ್ತು ಆ ವ್ಯಕ್ತಿ COVID ಕಂಟೇನ್ಮೆಂಟ್ ವಲಯಕ್ಕೆ ಪ್ರವೇಶಿಸಿದಾಗ ಬಳಕೆದಾರರನ್ನು ಎಚ್ಚರಿಸುತ್ತದೆ. ಬಳಕೆದಾರರು ಯಾವುದೇ ತೊಂದರೆಯಲ್ಲಿದ್ದಾಗ ತುರ್ತು ಎಚ್ಚರಿಕೆ (ಎಸ್‌ಒಎಸ್) ಅನ್ನು ತಿಳಿಸುತ್ತದೆ. ದೇಹದ ಉಷ್ಣತೆಯು ಮಿತಿಗಿಂತ ಹೆಚ್ಚಾದಾಗ ಎಚ್ಚರಿಕೆ ವಹಿಸಲು ಸಹಾಯವಾಗುತ್ತದೆ. SpO2 ಮಟ್ಟ ತೀರಾ ಕಡಿಮೆ ಇರುವಾಗ ಅಥವಾ ಬಳಕೆದಾರರು COVID ಕಂಟೇನ್ಮೆಂಟ್ ಜೋನ್ ಪ್ರವೇಶಿಸುವಾಗ ಅಪ್ಲಿಕೇಶನ್ ಜನರನ್ನು ಎಚ್ಚರಿಸುತ್ತದೆ.
“ಈ ವರ್ಷ ಎರಡು ಲಕ್ಷ ಉತ್ಪನ್ನ ಮಾರಾಟದ ಗುರಿ ಇದೆ, ಜಗತ್ತಿನಾದ್ಯಂತ 2022 ರ ವೇಳೆಗೆ 10 ಲಕ್ಷ ಉತ್ಪನ್ನ ಮಾರಾಟವನ್ನು ಸಾಧಿಸುವ ಯೋಜನೆ ಇದೆ. ಹೂಡಿಕೆದಾರರು ನಮ್ಮ ಆವಿಷ್ಕಾರಗಳನ್ನು ನಂಬುತ್ತಾರೆ ಮತ್ತು ಗ್ರಾಹಕ ತಂತ್ರಜ್ಞಾನ ವಲಯದಲ್ಲಿ ಭಾರಿ ವ್ಯತ್ಯಾಸವನ್ನು ಸೃಷ್ಟಿಸುವ ನಂಬಿಕೆ ನಮಗಿದೆ. ಇದರಿಂದಾಗಿಯೇ 22 ಕೋಟಿ ರೂ.ಸಂಗ್ರಹಿಸಲು ನಮಗೆ ಸಾಧ್ಯವಾಗಿದೆ ”ಎಂದು ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ ಕೆಎಲ್ಎನ್ ಸಾಯಿ ಪ್ರಸಾಂತ್ ಹೇಳಿದ್ದಾರೆ.

ಇದನ್ನೂ ಓದಿ:  ಶ್ರೀನಗರದಲ್ಲಿ ಎನ್​​ಕೌಂಟರ್, ಇಬ್ಬರು ಉಗ್ರರ ಹತ್ಯೆ

ಅಂದಾಜು 3500 ರೂ. ಬೆಲೆಯ ಈ ಹೊಸ ಉತ್ಪನ್ನವು ಆಗಸ್ಟ್ ವೇಳೆಗೆ 70 ದೇಶಗಳಲ್ಲಿ ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. “ಈ ಟ್ರ್ಯಾಕರ್ ಉತ್ಪಾದಿಸುವ ನಮ್ಮ ಮುಖ್ಯ ಉದ್ದೇಶವೆಂದರೆ COVID, ನ್ಯುಮೋನಿಯಾ ರೋಗಿಗಳಲ್ಲಿ ಶೀಘ್ರವೇ ರೋಗ ನಿರ್ಣಯವಾಗುವಂತೆ ಅನುಕೂಲ ಕಲ್ಪಿಸುವುದು. ಇದರಿಂದ ಅವರಿಗೆ ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು ಎಂದು ವಾರಂಗಲ್ ಎನ್ಐಟಿ ಪದವೀಧರ ಕೆ.ಪ್ರತ್ಯುಷಾ ತಿಳಿಸಿದ್ದಾರೆ. ಚರ್ಮ ಮತ್ತು ಅದರ ಸುತ್ತಲಿನ ತಾಪಮಾನ, ಹೃದಯ ಬಡಿತ ಮತ್ತು ಚಲನೆಯ ಸಂವೇದನೆಯಿಂದ ದೇಹದ ಉಷ್ಣತೆಯನ್ನು ಅಂದಾಜು ಮಾಡಲು ನಾವು ಅಲ್ಗರಿದಮ್​​ಗಳನ್ನು ಅಭಿವೃದ್ಧಿಪಡಿಸಿದ್ದೇವೆ. “ನಿರಂತರ ತಾಪಮಾನ ಮತ್ತು SpO2 ನಿರ್ವಹಣೆಯೊಂದಿಗೆ, ಆರಂಭಿಕ ಹಂತದಲ್ಲಿ ನಾವು ತೀಕ್ಷ್ಣ ಹೈಪೋಕ್ಸಿಯಾವನ್ನು (ಲಕ್ಷಣರಹಿತ ರೋಗಿಗಳಲ್ಲಿಯೂ ಸಹ ಕರೊನಾವೈರಸ್ ಸೋಂಕಿನ ಆರಂಭಿಕ ಲಕ್ಷಣ) ಪತ್ತೆ ಮಾಡಲು ಸಾಧ್ಯವಾಗುತ್ತದೆ. ದೈಹಿಕ ಸದೃಢತೆ ಮತ್ತು ನಿದ್ರೆಯ ಮಟ್ಟದ ಜತೆಗೆ ಪೂರ್ವಭಾವಿಯಾಗಿ ಆರೋಗ್ಯ ಮೇಲ್ವಿಚಾರಣೆ ಮಾಡಲು ಇದು ಜನಸಾಮಾನ್ಯರಿಗೂ ಕೂಡ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಧರ್ಮ ಮುಚ್ಚಿಟ್ಟು ಪ್ರೀತಿ ನಾಟಕ; ಲವ್​ ಜಿಹಾದ್​ಗೆ ಮಹಿಳೆ- ಮಗಳು ಬಲಿ; ಇಬ್ಬರನ್ನೂ ಕೊಂದು ಮನೆಯಲ್ಲಿ ಹೂತು ಹಾಕಿದ ಪಾಪಿ

Share This Article

Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…

ಚಳಿಗಾಲದಲ್ಲಿ ಸೀಬೆಹಣ್ಣನ್ನು ಹೇಗೆ ತಿಂದರೆ ಆರೋಗ್ಯಕ್ಕೆ ಪ್ರಯೋಜನಕಾರಿ; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಸೀಬೆಹಣ್ಣು ತಿನ್ನುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ತಲೆಯಿಂದ ಕಾಲ್ಬೆರಳು ಉಗುರುಗಳವರೆಗೆ ಆರೋಗ್ಯಕರವಾಗಿರಲು ಇದು ಕಿತ್ತಳೆಗಿಂತ ಹೆಚ್ಚು…

ಕಾಂತಿಯುತ ತ್ವಚೆ ನಿಮ್ಮದಾಗಬೇಕೇ?; ಮಲಗುವ ಮುನ್ನ ಈ ಟಿಪ್ಸ್​ ಫಾಲೋ ಮಾಡಿ | Health Tips

ಸುಂದರ, ಆಕರ್ಷಣಿಯ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಹಗಲಿನಲ್ಲಿ ಮಾತ್ರವಲ್ಲ ರಾತ್ರಿ ವೇಳೆಯು ಚರ್ಮದ ಕಾಳಜಿ…