ಕುಸ್ತಿ ಪಂದ್ಯಾವಳಿಗೆ ಅಖಾಡ ಸಜ್ಜು

ಹೊಸಪೇಟೆ: ಮಾ.2 ಮತ್ತು 3ರಂದು ನಡೆಯುವ ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಕ್ರೀಡಾಸಕ್ತರಿಗೆ ಕುಸ್ತಿ, ಕಬಡ್ಡಿ ಸೇರಿ ವಿವಿಧ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಂಪಿ ಉತ್ಸವ ಸಮಿತಿಯ ಕ್ರೀಡಾ ವಿಭಾಗದ ನೋಡಲ್ ಅಧಿಕಾರಿ ಕೆ.ರೆಹಮತ್ ವುಲ್ಲಾ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿದ್ದು, ಹೊಸ ಮಲಪನಗುಡಿಯ ವಿದ್ಯಾರಣ್ಯ ಪ್ರೌಢಶಾಲೆಯ ಮೈದಾನದಲ್ಲಿ ಮಾ.2ರಂದು ಪುರುಷರು ಮತ್ತು ಮಹಿಳೆಯರಿಗೆ ಕಬಡ್ಡಿ ಹಾಗೂ ಕಮಲಾಪುರದ ವಾಲಿಬಾಲ್ ಮೈದಾನದಲ್ಲಿ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಮಾ.3ರಂದು ಹೊಸ ಮಲಪನಗುಡಿ ಗ್ರಾಮದ ವಿದ್ಯಾರಣ್ಯ ಪ್ರೌಢಶಾಲೆಯ ಆವರಣದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಕುಸ್ತಿ ಪಂದ್ಯಾವಳಿ ಜರುಗಲಿದೆ. ಬಳಿಕ ಪವರ್ ಲಿಫ್ಟಿಂಗ್, ಗುಂಡು ಎತ್ತುವ ಸ್ಪರ್ಧೆಗಳು ನಡೆಯಲಿವೆ. ಜಿಲ್ಲೆ ಸೇರಿ ಹೊರ ಜಿಲ್ಲೆಯ ಕ್ರೀಡಾಸಕ್ತರು ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು. ಮಾಹಿತಿಗೆ ಮೊಬೈಲ್ 7829612786ಗೆ ಸಂಪರ್ಕಿಸುವಂತೆ ನೋಡಲ್ ಅಧಿಕಾರಿ ತಿಳಿಸಿದ್ದಾರೆ.