ಬೇಡಿಕೆಯಂತೆ ಸೋಯಾಬೀನ್ ಬಿತ್ತನೆ ಬೀಜ

ಬೀದರ್: ಜಿಲ್ಲೆಯ ರೈತರ ಬೇಡಿಕೆಗೆ ಅನುಗುಣವಾಗಿ ಸೋಯಾಬೀನ್ ಬಿತ್ತನೆ ಬೀಜ ಪೂರೈಕೆ ಮಾಡಲು ಕ್ರಮ ವಹಿಸಲಾಗಿದ್ದು, ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ.
ಈ ಬಾರಿ ವಾಡಿಕೆಗಿಂತಲೂ ಉತ್ತಮ ಮಳೆಯಾಗಿರುವ ಕಾರಣ ಸೋಯಾಬಿನ್ ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ. ಪ್ರಸಕ್ತ ಸಾಲಿನಲ್ಲಿ 102500 ಕ್ವಿಂಟಾಲ್ ಸೋಯಾಬೀನ್ ಬಿತ್ತನೆ ಬೀಜ ಮಂಜೂರಾಗಿದ್ದು, ಈಗಾಗಲೇ 87500 ಕ್ವಿಂಟಾಲ್ ವಿತರಣೆ ಮಾಡಲಾಗಿದೆ. 15000 ಕ್ವಿಂಟಾಲ್ ಸೋಯಾಬೀನ್ ಬಿತ್ತನೆ ಬೀಜ ಬೀದರ್ ಗೆ ರವಾನೆ ಆಗಿದ್ದು 2-3 ದಿನಗಳಲ್ಲಿ ರೈತರಿಗೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಜಿಲ್ಲೆಯಲ್ಲಿ 112000 ಕ್ವಿಂಟಾಲ್ ಸೋಯಾಬಿನ್ ಬಿತ್ತನೆ ಬೀಜಗಳ ವಿತರಣೆ ಮಾಡಲಾಗಿತ್ತು. ಈ ಬಾರಿ ಉತ್ತಮ ಪೂರ್ವ ಮುಂಗಾರು ಮಳೆಯಿಂದ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಯಾದಗಿರಿಯಲ್ಲಿಂದು ನಡೆದ ಆರೋಗ್ಯ ಆವಿಷ್ಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗೆ ಈ ಸಂಬಂಧ ಮನವಿ ಸಲ್ಲಿಸಿದ್ದು, 15000 ಕ್ವಿಂಟಾಲ್ ಸೋಯಾಬೀನ್ ಬಿತ್ತನೆ ಬೀಜವನ್ನು ಮಾರುಕಟ್ಟೆಯಲ್ಲಿ ಖರೀದಿಸಿ ಹಚ್ಚುವರಿಯಾಗಿ ವಿತರಿಸಲು ಸಮ್ಮತಿಸಿದ್ದಾರೆ ಎಂದು ಈಶ್ವರ ಖಂಡ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೀಘ್ರವೇ ಹೆಚ್ಚುವರಿ ಬಿತ್ತನೆ ಬೀಜವೂ ಬೀದರ್ ಗೆ ಆಗಮಿಸಲಿದ್ದು, ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜ ವಿತರಿಸಲಾಗುವುದು. ಯಾರೂ ಆತಂಕ ಪಡುವುದು ಬೇಡ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

Share This Article

ನೀರು, ಸೋಪು ಇಲ್ಲದೆ ಕೊಳಕಾದ ಸ್ವಿಚ್‌ಬೋರ್ಡ್‌ನ್ನು ಹೊಸದರಂತೆ ಮಾಡಲು ಇಲ್ಲಿದೆ ಸೂಪರ್‌ ಟಿಪ್ಸ್‌ | Switchboard

Switchboard: ಸಾಮಾನ್ಯವಾಗಿ ಮನೆಗಳಲ್ಲಿರುವ ವಿದ್ಯುತ್ ಸ್ವಿಚ್‌ಬೋರ್ಡ್‌ಗಳು ದಿನ ಕಳೆದಂತೆ ಕೊಳಕಾಗುತ್ತದೆ. ವಿಶೇಷವಾಗಿ ಅಡುಗೆಮನೆಯಲ್ಲಿರುವ ಸ್ವಿಚ್‌ಬೋರ್ಡ್‌ಗಳು ಬಹಳ…

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…