ಬೀದರ್: ಸಿಕಂದರಾಬಾದ್-ವಾರಾಣಸಿ-ದಾನಾಪುರ ಎಕ್ಸ್‍ಪ್ರೆಸ್ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್ ರೈಲನ್ನು ಬೀದರ್ ವರೆಗೆ ವಿಸ್ತರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಆಗ್ರಹಿಸಿದ್ದಾರೆ.
ಸದ್ಯ ಸಿಕಂದರಾಬಾದ್‍ನಿಂದ ನಾಗಪುರ, ಪ್ರಯಾಗರಾಜ್ ಮಾರ್ಗವಾಗಿ ವಾರಾಣಸಿಗೆ ತೆರಳಲು (ರೈಲು ಸಂಖ್ಯೆ 12791) ಹಾಗೂ ಅಲ್ಲಿಂದ ಸಿಕಂದರಾಬಾದ್‍ಗೆ ಮರಳಲು ಪ್ರತ್ಯೇಕ ರೈಲುಗಳಿವೆ. ಸಿಕಂದರಾಬಾದ್‍ನಿಂದ ಬೆಳಿಗ್ಗೆ 9:25ಕ್ಕೆ ಹೊರಡುವ ರೈಲು ಮರುದಿನ ಮಧ್ಯಾಹ್ನ 3:50ಕ್ಕೆ ವಾರಾಣಸಿಗೆ ಹಾಗೂ ಅಲ್ಲಿಂದ ಸಂಜೆ 5ಕ್ಕೆ ಬಿಡುವ ರೈಲು ಮರುದಿನ ರಾತ್ರಿ 10ಕ್ಕೆ ಸಿಕಂದರಾಬಾದ್‍ಗೆ ತಲುಪುತ್ತದೆ ಎಂದು ತಿಳಿಸಿದ್ದಾರೆ.
ಸಿಂದರಾಬಾದ್- ದಾನಾಪುರ ರೈಲಿನಲ್ಲಿ ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಯ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಅವರಿಗೆ ಸಿಕಂದರಾಬಾದ್‍ಗೆ ತೆರಳಿ ಅಲ್ಲಿಂದ ವಾರಾಣಸಿಗೆ ಹೋಗಲು ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.
ರೈಲು ಬೀದರ್ ವರೆಗೆ ವಿಸ್ತರಿಸಿದರೆ ಈ ಮೂರೂ ಜಿಲ್ಲೆಗಳ ವಾರಾಣಸಿ, ಪ್ರಯಾಗರಾಜ್, ಅಯೋಧ್ಯೆಗೆ ಹೋಗಿ ಬರುವವರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಪ್ರಯಾಣಿಕರ ಹಿತದೃಷ್ಟಿಯಿಂದ ರೈಲ್ವೆ ಇಲಾಖೆ ರೈಲು ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.
