ಪೌರ ಕಾರ್ಮಿಕರಿಗೆ ಸನ್ಮಾನ

ಬೀದರ್: ಇಲ್ಲಿಯ ಕುಂಬಾರವಾಡದ ನವೀನ್ ಪಬ್ಲಿಕ್ ಶಾಲೆಯು ಪೌರ ಕಾರ್ಮಿಕರನ್ನು ಸನ್ಮಾನಿಸುವ ಮೂಲಕ ವಿಶ್ವ ಕಾರ್ಮಿಕರ ದಿನವನ್ನು ವಿಶಿಷ್ಟವಾಗಿ ಆಚರಿಸಿತು.
ಶಾಲೆಯ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ ಅವರು ಪೌರ ಕಾರ್ಮಿಕರಿಗೆ ಶಾಲು ಹೊದಿಸಿ ಸತ್ಕರಿಸಿ, ಸಿಹಿ ತಿನ್ನಿಸಿದರು.
ಸ್ವಚ್ಛ, ಸುಂದರ ಹಾಗೂ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದರು.
ದೇಶದ ಪ್ರತಿಯೊಂದು ಕ್ಷೇತ್ರದ ಬೆಳವಣಿಗೆಯಲ್ಲೂ ಕಾರ್ಮಿಕರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಪೌರ ಕಾರ್ಮಿಕರು ಸೇರಿದಂತೆ ಎಲ್ಲ ಕಾರ್ಮಿಕರನ್ನು ಗೌರವದಿಂದ ಕಾಣಬೇಕು. ಅವರನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ, ಶಾಲೆಯ ಪ್ರಾಚಾರ್ಯ ರಾಜಪ್ಪ ಬಿರಾದಾರ, ಆಡಳಿತಾಧಿಕಾರಿ ಗಣೇಶ, ಸುಧಾರಾಣಿ, ದೀಪಾ, ಪಂಚಶೀಲಾ, ನಗರಸಭೆಯ ವಿಠ್ಠಲ, ಬಾಬುರಾವ್ ಇದ್ದರು.

Share This Article

ಮಳೆ ಬಂದಾಗ ಸ್ನಾನ ಮಾಡುವುದು ಅಪಾಯಕಾರಿ! ಮೊದಲು ಈ ಕುರಿತು ತಿಳಿದುಕೊಳ್ಳಿ… lifestyle

lifestyle : ಮಳೆ ಬಂದಾಗ   ಗುಡುಗು ಮತ್ತು ಮಿಂಚಿನೊಂದಿಗೆ ಬಂದರೆ, ನಾವು ಜಾಗರೂಕರಾಗಿರಬೇಕು. ಮಳೆ ಬರುತ್ತಿರುವಾಗ…

ಮಳೆಗಾಲದಲ್ಲಿ ಪಪ್ಪಾಯಿ ಉತ್ತಮ; ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲ ಪ್ರಯೋಜನ ಗೊತ್ತೇ? ಇಲ್ಲಿದೆ ಮಾಹಿತಿ | Papaya

Papaya Benefits: ನಾವು ತಿನ್ನುವ ಹಣ್ಣುಗಳಲ್ಲಿ ಪಪ್ಪಾಯಿ ಕೂಡ ಬಹಳ ವಿಶೇಷವಾದುದು. ಈ ಹಣ್ಣಿನ ಬಗ್ಗೆ…