ಬೀದರ್: ನಗರದಿಂದ ಭಂಗೂರ ಗ್ರಾಮಕ್ಕೆ ಬಸ್ ಸಂಚಾರ ಸೇವೆ ಬುಧವಾರ ಆರಂಭಗೊಂಡಿತು.
ಇಲ್ಲಿನ ಹಳೆಯ ಬಸ್ ನಿಲ್ದಾಣ ಆವರಣದಲ್ಲಿ ಬಸ್ಗೆ ವಿಶೇಷ ಪೂಜೆ ಸಲ್ಲಿಸಿ ಸಂಚಾರಕ್ಕೆ ಚಾಲನೆ ನೀಡಿದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಬಸ್ ಸೌಕರ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ನಗರದಿಂದ ಹೊರಡುವ ಬಸ್ ಅಮಲಾಪುರ, ನಾಗೂರಾ, ಯಾಕತಪುರ, ಮನ್ನಳ್ಳಿ, ಹೊಕ್ರಾಣಾ, ರಾಜಗೀರಾ, ಸಿಂದೋಲ್ ಮೂಲಕ ಭಂಗೂರ ತಲುಪಲಿದ್ದು, ನಿತ್ಯ ಐದು ಟ್ರಿಪ್ ಸೇವೆ ಒದಗಿಸಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಶಕ್ತಿ ಯೋಜನೆ ಮೂಲಕ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಬಸ್‌ಗಳ ಸಂಖ್ಯೆ ಕಡಿಮೆಯಾಗಿ ವಿದ್ಯಾರ್ಥಿಗಳು, ವೃದ್ಧರು, ಅಂಗವಿಕಲರಿಗೆ ಸೀಟು ಸಿಗದೆ ಅನನುಕೂಲವಾಗುತ್ತಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬಸ್ಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್, ಸಂಚಾರಿ ಅಕಾರಿ ಇಂದ್ರಶೇನ್ ಬಿರಾದಾರ್, ಕಾರ್ಮಿಕ ಅಧಿಕಾರಿ ರಾಜಶೇಖರ, ಘಟಕ ವ್ಯವಸ್ಥಾಪಕ ವಿಠ್ಠಲರಾವ ಕದಮ, ಪ್ರಮುಖರಾದ ನಾಗೇಶ ಪಾಟೀಲ್, ಸದಾನಂದ ಜೋಶಿ, ಶೇಖರ ನೌಬಾದೆ, ಸೂರ್ಯಕಾಂತ ಇತರರಿದ್ದರು. ಶಾಸಕ ಬೆಲ್ದಾಳೆ ಅವರು ಬಸವೇಶ್ವರ ವೃತ್ತದವರೆಗೆ ಬಸ್ನಲ್ಲಿ ಪ್ರಯಾಣಿಸಿದರು.
ಬೀದರ್-ಭಂಗೂರ ಬಸ್ ಸಂಚಾರ ಆರಂಭ

ನಿಮ್ಮ ಮಕ್ಕಳನ್ನು ಸ್ಮಾರ್ಟ್‌ಫೋನ್‌ಗಳಿಂದ ದೂರವಿಡುವುದು ಹೇಗೆ? Child Care Tips
Child Care Tips: ನೀವು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಫೋನ್ ಕೊಡಬಾರದು. ನಿಮ್ಮ ಮಗು ನಿಮ್ಮೊಂದಿಗೆ…
ಈ 3 ರಾಶಿಯ ಮಹಿಳೆಯರು ಹುಟ್ಟಿನಿಂದಲೇ ಅಪಾರ ಬುದ್ಧಿಶಕ್ತಿ ಹೊಂದಿರುತ್ತಾರಂತೆ! ನಿಮ್ಮದೂ ಇದೇ ರಾಶಿನಾ? Zodiac Signs
Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ…
ಬೇಸಿಗೆ ತಂಪಾಗಿರಲು ಹಾಲು ಹಾಕದ ಮಿಲ್ಕ್ ಶೇಕ್
ಬೇಸಿಗೆಯಲ್ಲೂ ನಮ್ಮನ್ನು ತಂಪಾಗಿಟ್ಟು, ಸಾಮಾನ್ಯವಾಗಿ ಆಗುವ ಸುಸ್ತನ್ನು ಕಡಿಮೆ ಮಾಡುವ ವಿಶೇಷ ಮಿಲ್ಕ್ ಶೇಕ್ ಬಗ್ಗೆ…