ವಚನ ವಿಜಯೋತ್ಸವ ಅದ್ದೂರಿ

ಬೀದರ್: ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರ ಅನುಭಾವದಿಂದ ರಚಿತ ವಚನಗಳನ್ನು 21ನೇ ಶತಮಾನದಲ್ಲಿ ಉಳಿಸಿಕೊಳ್ಳಬೇಕಾಗಿದೆ. ಶರಣರು ಜೀವ ಕೊಟ್ಟು ನಮಗೆ ನೀಡಿರುವ ವಚನ ಸಾಹಿತ್ಯದ ಸಂರಕ್ಷಣೆಯ ಇತಿಹಾಸದ ಬಗ್ಗೆ ಯುವ ಜನಾಂಗಕ್ಕೆ ತಿಳಿಹೇಳಲು ವಚನ ವಿಜಯೋತ್ಸವ ಅದ್ದೂರಿ ಜತೆ ಅರ್ಥಪೂರ್ಣವಾಗಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಬಸವ ಸೇವಾ ಪ್ರತಿಷ್ಠಾನ ಅಧ್ಯಕ್ಷೆ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಹೇಳಿದರು.
ನಗರದ ಶರಣ ಉದ್ಯಾನದಲ್ಲಿ ವಚನ ವಿಜಯೋತ್ಸವ-2025 ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಫೆ.10ರಿಂದ ಮೂರು ದಿನ ನಗರದ ಬಸವಗಿರಿ ಪರಿಸರದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಿಕೊಂಡು ಮನೆ ಕಾರ್ಯಕ್ರಮದಂತೆ ಕಾರ್ಯನಿರ್ವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ ಮಾತನಾಡಿ, ವಚನ ವಿಜಯೋತ್ಸವ ದಸರಾ ಮಾದರಿಯಲ್ಲಿ ಆಚರಿಸಬೇಕು. ಬಸವ ಸಂಸ್ಕೃತಿ ಪುನರುತ್ಥಾನಕ್ಕೆ ಸರ್ವರೂ ಸಮಯ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಕಾಜಿ ಮಾತನಾಡಿ, ವಚನ ವಿಜಯೋತ್ಸವ ನಿಮಿತ್ತ ಕೈಕಾಲು ಜೋಡಣೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಇಲ್ಲಿನ ಶರಣ ಉದ್ಯಾನದಲ್ಲಿ ಹೆಸರು ನೋಂದಣಿ ಮಾಡಿ ಫೆ.5ರಂದು ನಡೆಯುವ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂದರು.
ಮೆರವಣಿಗೆ ಸಮಿತಿ ಸಂಯೋಜಕ ಜೈರಾಜ ಖಂಡ್ರೆ, ಯದಲಾಪುರ ಪಿಕೆಪಿಎಸ್ ಅಧ್ಯಕ್ಷ ಸಂತೋಷ ಪಾಟೀಲ್, ಪತ್ರಕರ್ತ ಆದೀಶ್ ವಾಲಿ ಮಾತನಾಡಿದರು. ಪ್ರಮುಖರಾದ ಶಕುಂತಲಾ ಬೆಲ್ದಾಳೆ, ಉಷಾ ಮಿರ್ಚೆ, ಧನರಾಜ ಹಂಗರಗಿ, ರಾಜೇಂದ್ರಕುಮಾರ ಗಂದಗೆ, ರಾಜಕುಮಾರ ಮಣಿಗೇರೆ, ಸುರೇಶ ಸ್ವಾಮಿ, ಸಿದ್ರಾಮಪ್ಪ ಕಪಲಾಪುರೆ, ಸುವರ್ಣಾ ಚಿಮಕೋಡೆ, ವಿದ್ಯಾವತಿ ಬಿರಾದಾರ್, ಸಿದ್ದಯ್ಯ ಕಾವಡಿ, ರಾಜಮತಿ ಗಂಗು, ವೈಜಿನಾಥ ಸಾಲಿ, ಮಲ್ಲಿಕಾರ್ಜುನ ಪಂಚಾಕ್ಷರಿ, ಪ್ರೊ.ಸಂಗ್ರಾಮ ಎಂಗ್ಳೆ, ಅಶೋಕ ಗಂಗುಡಿ, ಶರಣಪ್ಪ ಚಿಮಕೋಡೆ, ಪ್ರಭಾವತಿ ನಂದಿ, ಭಾರತಿ ಪಾಟೀಲ್, ವೈಜಿನಾಥ ಸಜ್ಜನಶಟ್ಟಿ, ಪೂರ್ಣಚಂದ್ರ ಮೈನಾಳೆ, ಸಂಗಶೆಟ್ಟಿ ಮರಿಯಂಪುರ, ಯೋಗೇಂದ್ರ ಯದಲಾಪುರೆ, ಅನೀಲಕುಮಾರ ದೇಶಮುಖ, ಉದಯಕುಮಾರ ಲದ್ದೆ, ರಾಣಿ ಪಸಾರಗೆ, ಶರಣಪ್ಪ ಮಿಠಾರೆ, ಡಾ.ವಿಜಯಶ್ರೀ ಬಶೆಟ್ಟಿ ಇದ್ದರು. ಜ್ಞಾನದೇವಿ ಬಬಚಡೆ ಸ್ವಾಗತಿಸಿದರು. ರಾಚಪ್ಪ ಪಾಟೀಲ್ ನಿರೂಪಣೆ ಮಾಡಿದರು. ಶಿವರಾಜ ಮದಕಟ್ಟಿ ವಂದಿಸಿದರು.

Share This Article

ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಇಲ್ಲಿದೆ ಸುಲಭ ಮಾರ್ಗ.. ಒಮ್ಮೆ ಟ್ರೈ ಮಾಡಿ | Lizards

Lizards: ಹಲ್ಲಿಗಳು ಹೆಚ್ಚಾಗಿ ಮನೆಯ ಗೋಡೆಗಳ ಮೇಲೆ ಮತ್ತು ಅಡುಗೆಮನೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹಲ್ಲಿಗಳ ಬಗ್ಗೆ…

ಹನಿ-ಹನಿ ಮೂತ್ರ ಬರುತ್ತಿದ್ರೆ ಈ ಅಂಗಕ್ಕೆ ಹಾನಿಯಾಗಿದೆ ಎಂದರ್ಥ!; ಅನಿಯಂತ್ರಿತ ಮೂತ್ರದ ಸಮಸ್ಯೆಗೆ ಕಾರಣ ಏನು? | Urinary

Urinary : ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಮೂತ್ರ ಸಂಬಂಧಿತ ಸಮಸ್ಯೆಗಳು ಭಾಧಿಸುತ್ತವೆ. ಅನೇಕ ಜನರಿಗೆ ಮೂತ್ರ…