ಬೀದರ್: ವಚನ ವಿಜಯೋತ್ಸವ ನಿಮಿತ್ತ ಇಲ್ಲಿನ ವಾಲಿಶ್ರೀ ಆಸ್ಪತ್ರೆಯು 23 ದಿನ (ಫೆ.12ರವರೆಗೆ)ದ ಉಚಿತ ಚಿಕಿತ್ಸೆ ಶಿಬಿರ ಏರ್ಪಡಿಸಿದೆ.
ಶಿಬಿರಕ್ಕೆ ಚಾಲನೆ ನೀಡಿದ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಮಾತನಾಡಿ, ಫೆ.10ರಿಂದ ಮೂರು ದಿನದ ವಚನ ವಿಜಯೋತ್ಸವ ನಿಮಿತ್ತ ಏರ್ಪಡಿಸಿರುವ ಈ ಶಿಬಿರದ ಸದುಪಯೋಗ ಜನರು ಪಡೆದುಕೊಳ್ಳಬೇಕು ಎಂದು ಕೋರಿದರು. ವಾಲಿ ಗ್ರೂಪ್ ಆಫ್ ಕಂಪನಿ ನಿರ್ದೇಶಕ ಆದೀಶ್ ಆರ್. ವಾಲಿ ಮಾತನಾಡಿ, ಫೆ.12ರವರೆಗೆ ಉಚಿತ ಒಪಿಡಿ, ಡಯಾಲಿಸಿಸ್ ಹಾಗೂ ದೀರ್ಘಕಾಲಿಕ ನೋವುಗಳಿಂದ ಬಳಲುತ್ತಿರುವ ರೋಗಿಗಳಿಗಾಗಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
