ಬೀದರ್: ಅಲ್ಲಮಪ್ರಭು ಪತ್ತಿನ ಸಹಕಾರ ಸಂಘದ ನೂತನ ಶಾಖೆಯನ್ನು ನಗರದ ಗುಂಪಾ ರಸ್ತೆಯಲ್ಲಿನ ಕೆ.ಆರ್.ಇ ಸಂಸ್ಥೆಯ ಕಾಂಪ್ಲೆಕ್ಸ್‍ನಲ್ಲಿ ಕೆ.ಆರ್.ಇ. ಸಂಸ್ಥೆ ಟ್ರಸ್ಟ್ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಅಷ್ಟೂರ ಉದ್ಘಾಟಿಸಿದರು.
ಸಂಘದ ನೂತನ ಶಾಖೆಯಿಂದ ರಾಂಪುರೆ ಕಾಲೊನಿ, ಕುಂಬಾರವಾಡ, ಕೃಷಿ ಕಾಲೊನಿ ಸೇರಿದಂತೆ ವಿವಿಧೆಡೆಯ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಅಲ್ಲಮಪ್ರಭು ಸಂಘ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ. ಸಾಲ ನೀಡಿಕೆ ಹಾಗೂ ವಸೂಲಾತಿಗೆ ಸಮಾನ ಆದ್ಯತೆ ನೀಡುತ್ತಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ತನ್ನ ಸೇವಾ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಹಕರ ಸಹಕಾರದಿಂದ ಸಂಘ ನಿರಂತರ ಲಾಭದಲ್ಲಿ ಮುನ್ನಡೆದಿದೆ. ಗ್ರಾಹಕರ ಹಿತರಕ್ಷಣೆಗೆ ಶ್ರಮಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ ಹೇಳಿದರು.
ಸಂಘದ ಮೊದಲ ಶಾಖೆ ಆರಂಭಗೊಂಡಿದ್ದು, ಬರುವ ದಿನಗಳಲ್ಲಿ ಇನ್ನೂ ಎರಡು- ಮೂರು ಶಾಖೆಗಳನ್ನು ತೆರೆಯುವ ಯೋಜನೆ ಇದೆ ಎಂದು ತಿಳಿಸಿದರು.
ಸಂಘದಲ್ಲಿ ಅಡವು ಸಾಲ, ಚಿನ್ನದ ಸಾಲ ಸೇರಿ ಹಲವು ಯೋಜನೆಗಳು ಇವೆ. ಗ್ರಾಹಕರು ಸಂಘದ ಸೇವೆಗಳ ಪ್ರಯೋಜನ ಪಡೆಯಬೇಕು ಎಂದು ಸಂಘದ ಉಪಾಧ್ಯಕ್ಷ ಸಂಜೀವಕುಮಾರ ಪಾಟೀಲ ಹೇಳಿದರು.
ಮಾಂಜ್ರಾ ಮಹಿಳಾ ಅರ್ಬನ್ ಬ್ಯಾಂಕ್ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಗಾಂಧಿ ಗಂಜ್ ಸಹಕಾರ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಸಂಘದ ನಿರ್ದೇಶಕರೂ ಆದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ, ಮುಖಂಡ ಈಶ್ವರಸಿಂಗ್ ಠಾಕೂರ್, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ ಮಾತನಾಡಿದರು.
ಸಂಘದ ನಿರ್ದೇಶಕರಾದ ಅಶೋಕ ಶೀಲವಂತ, ಬಸವಕುಮಾರ ಪಾಟೀಲ, ಅಪ್ಪಾರಾವ್ ಪಾಟೀಲ, ಪ್ರವೀಣ ಬುಡ್ಡನೋರ, ಮನೋಹರ ಸಿರೆನೋರ, ಸುಮನ್ ಪಾಟೀಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ ಸ್ವಾಮಿ, ಸಿಬ್ಬಂದಿ ಬಸಯ್ಯ ಸ್ವಾಮಿ, ಜಗನ್ನಾಥ ಪಾಟೀಲ, ಸೋಮಶೇಖರ ವಡಗಾಂವೆ, ದತ್ತುಕಾಂತ ಭಂಡಾರೆ, ಪಿಗ್ಮಿ ಏಜೆಂಟರಾದ ಸಿದ್ರಾಮ ಗಂದಿಗುಡೆ, ಶಾಂತಕುಮಾರ ಪಾಟೀಲ, ರಾಚಯ್ಯ ಸ್ವಾಮಿ, ಸಂದೀಪ ಪಾಟೀಲ, ಗಜಾನಂದ ಮಡಿವಾಳ ಇದ್ದರು.
ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶಕುಮಾರ ಸ್ವಾಮಿ ನಿರೂಪಿಸಿದರು. ನಿರ್ದೇಶಕ ವಿವೇಕಾನಂದ ಪಟ್ನೆ ವಂದಿಸಿದರು.
ಅಲ್ಲಮಪ್ರಭು ಸಂಘದ ಶಾಖೆ ಉದ್ಘಾಟನೆ
ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ನೋಡಿ… ಇದ್ರೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಎದುರಾಗಲ್ಲ | Palmistry
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Honey: ಜೇನಿನೊಂದಿಗೆ ಈ ಆರು ಆಹಾರ ಬೆರೆಸಿ ತಿನ್ನಬೇಡಿ..ಹಾಗೆ ಮಾಡಿದರೆ ವಿಷವಾಗುತ್ತದೆ!
ಜೇನು(Honey) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವು ಪದಾರ್ಥಗಳೊಂದಿಗೆ ಬೆರೆಸಿ ಸೇವಿಸಬಾರದು. ಈ 6 ಪದಾರ್ಥಗಳೊಂದಿಗೆ…
ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ನೀರಿನಿಂದ ದೇಹದ ತೂಕ ಇಳಿಸಿಕೊಳ್ಳಬಹುದು! Interesting information
ಬೆಂಗಳೂರು: ಅಕ್ಕಿ ತೊಳೆದರೆ ಬರುವ ನೀರನ್ನು ( rice washed water) ಅನೇಕರು ಬಿಸಾಡುತ್ತಾರೆ. ಆದರೆ…