ಶಾಸಕ ಚವ್ಹಾಣ ನೇತೃತ್ವದಲ್ಲಿ ರಕ್ತದಾನ ಶಿಬಿರ

ಔರಾದ: ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ತ ಶಾಸಕರಾದ ಪ್ರಭು.ಬಿ ಚವ್ಹಾಣ ಅವರ ನೇತೃತ್ವದಲ್ಲಿ ಸೆ.17ರಂದು ಪಟ್ಟಣದ ಶಾಸಕರ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ 76 ಜನ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಸಾರ್ಥಕತೆ ಮೆರೆದರು.
ಪಕ್ಷದ ಕಾರ್ಯಕರ್ತರು, ಪ್ರಧಾನಿಯವರ ಅಭಿಮಾನಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಸಾಲು ಸಾಲಾಗಿ ಆಗಮಿಸಿ ರಕ್ತದಾನ ಮಾಡುವುದು ಗಮನ ಸೆಳೆಯಿತು. ಶಾಸಕರು ರಕ್ತದಾನ ಮಾಡಿದ ಎಲ್ಲರಿಗೂ ಶಾಲು ಹೊದಿಸಿ, ಪ್ರಮಾಣ ಪತ್ರ ಮತ್ತು ಅಭಿನಂದನಾ ಪತ್ರಗಳನ್ನು ನೀಡಿ ಗೌರವಿಸಿದರು. ಶಿಬಿರದ ಕೊನೆವರೆಗೂ ಶಿಬಿರದಲ್ಲಿಯೇ ಕುಳಿತು ಪ್ರತಿಯೊಬ್ಬರ ಬಳಿಗೆ ತೆರಳಿ ಮಾತನಾಡಿದರು.
ಈ ವೇಳೆ ಶಾಸಕರು ಮಾತನಾಡಿ, ರಕ್ತದಾನ ಎಲ್ಲ ದಾನಗಳಲ್ಲಿ ಶ್ರೇಷ್ಠ ದಾನವಾಗಿದೆ. ರಕ್ತದ ಕೊರತೆಯಿಂದಾಗಿ ಪ್ರತಿದಿನ ಸಾಕಷ್ಟು ರೋಗಿಗಳು ಸಾವನಪ್ಪುತ್ತಾರೆ. ರಕ್ತದಾನವು ಜೀವ ಉಳಿಸುವ ಕೆಲಸ ಮಾಡುತ್ತದೆ. ಹಾಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 74ನೇ ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರ ಏರ್ಪಡಿಸಲಾಗಿದ್ದು, ಕನಿಷ್ಠ 74 ಜನರಿಂದ ರಕ್ತದಾನ ಮಾಡಿಸುವ ಗುರಿಯಿತ್ತು. ಆದರೆ ಪಕ್ಷದ ಕಾರ್ಯಕರ್ತರು, ಮುಖಂಡರು, ಪ್ರಧಾನಿಯವರ ಅಭಿಮಾನಿಗಳು ಸ್ವಯಂ ಪ್ರೇರಣೆಯಿಂದ ಆಗಮಿಸಿ ಗುರಿಗಿಂತ ಹೆಚ್ಚು 76 ಜನ ರಕ್ತದಾನ ಮಾಡಿರುವುದು ಸಂತೋಷ ನೀಡಿದೆ ಎಂದರು
ರಕ್ತದಾನದ ಕುರಿತು ಜನರಲ್ಲಿ ಸಾಕಷ್ಟು ಮೂಢನಂಬಿಕೆಗಳಿವೆ. ಈ ಕುರಿತು ಜನಗಾಗೃತಿ ಮೂಡಿಸುವ ಅಗತ್ಯವಿದೆ. ರಕ್ತದಾನವು ಜೀವ ಉಳಿಸಲು ನೆರವಾಗುವುದಲ್ಲದೇ ರಕ್ತ ಶುದ್ದೀಕರಣಗೊಳಿಸಲು ಸಹಕಾರವಾಗುತ್ತದೆ. ಉತ್ತಮ ಆರೋಗ್ಯಕ್ಕೆ ರಕ್ತದಾನ ಅವಶ್ಯಕವಾಗಿದ್ದು, ಆರೋಗ್ಯವಂತರಿರುವ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಗಾಯತ್ರಿ, ಮುಖಂಡರಾದ ವಸಂತ ಬಿರಾದಾರ, ಮಾರುತಿ ಚವ್ಹಾಣ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸರಸ್ವತಿ ವೈಜಿನಾಥ ಘೂಳೆ, ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಪ್ರತೀಕ್ ಚವ್ಹಾಣ, ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ರಾಧಾಬಾಯಿ ಕೃಷ್ಣ ನರೋಟೆ, ಮಂಡಲ ಪ್ರಭಾರಿ ಮಹೇಶ್ವರ ಸ್ವಾಮಿ, ರಮೇಶ ಉಪಾಸೆ, ಶಿವಾಜಿರಾವ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಖಂಡೋಬಾ ಕಂಗಟೆ, ಬಸವರಾಜ ಪಾಟೀಲ, ಡಾ.ವೈಜಿನಾಥ ಬುಟ್ಟೆ, ಸಂತೋಷ ಪೋಕಲವಾರ, ಶಿವರಾಜ ಅಲ್ಮಾಜೆ, ಈರಾರೆಡ್ಡಿ, ಶೇಷರಾವ ಕೋಳಿ, ಸಾಗರ ಪಾಟೀಲ, ಸಚಿನ ರಾಠೋಡ್, ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಅಬ್ಜಲ್ ಪಠಾಣ್, ಬಾಬುರಾವ ವಾಡಿ, ಬಸವರಾಜ ಹಳ್ಳೆ, ಜಾಖೀರ್ ಶೇಖ್, ಸಂದೀಪ ಪಾಟೀಲ, ನಾಗಶೆಟ್ಟಿ ಗಾದಗೆ, ಗೋವಿಂದ ರೆಡ್ಡಿ, ಖಾಜಾಮಿಯ್ಯಾ, ಲಕ್ಷö್ಮಣ ರಾಠೋಡ್, ಕಲ್ಲಪ್ಪ ವಗ್ಗೆ, ಗೀತಾ ಗೌಡ, ಪ್ರವೀಣ ಕಾರಬಾರಿ, ಶ್ರೀನಿವಾಸ ಖೂಬಾ, ರಾಮ್ ನರೋಟೆ, ಅನೀತಾ ಸುಜಿತ ರಾಠೋಡ್, ಅಂಬಿಕಾ ಕೇರಬಾ ಪವಾರ್, ಶಕುಂತಲಾ ಮುತ್ತಂಗೆ, ಕೋಮಲ್ ಪಾಟೀಲ, ಪ್ರಕಾಶ ಜೀರ್ಗಾ, ರವೀಂದ್ರ ಜೀರ್ಗಾ, ಪ್ರೇಮಾ ಬಾಬು, ಸಚಿನ್ ಬಿರಾದಾರ, ಸಂಜು ಮೂರ್ಕೆ, ರಾಜಕುಮಾರ ಸೋರಳ್ಳಿ, ರಮೇಶ ಗೌಡ, ಉದಯ ಸೋಲಾಪೂರೆ, ಮೃತ್ಯುಂಜಯ್ ಬಿರಾದಾರ, ಸಂಗೀತಾ ಯಾದು ಮೇತ್ರೆ, ಸಿದ್ರಾಮಪ್ಪ ನಿಡೋದೆ, ಶರತ ಧನಗೆ ಸೇರಿದಂತೆ ಇತರರಿದ್ದರು.

ಸೇವಾ ಪಾಕ್ಷಿಕ ಅಭಿಯಾನ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ತ ಸೇವಾ ಪಾಕ್ಷಿಕ ಅಭಿಯಾನದಡಿ ಬಿಜೆಪಿ ಔರಾದ(ಬಿ) ಮಂಡಲ ವತಿಯಿಂದ ಪಟ್ಟಣದಲ್ಲಿ ವಿವಿಧ ಸೇವಾ ಚಟುವಟಿಕೆಗಳು ನಡೆದವು.
ಬೆಳಗ್ಗೆ ಮಹಿಳಾ ಮೋರ್ಚಾ ಪದಾಧಿಕಾರಿಗಳ ನೇತೃತ್ವದಲ್ಲಿ ಉದ್ಭವಲಿಂಗ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಏರ್ಪಡಿಸಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಆರೋಗ್ಯ ಕಾಪಾಡುವಂತೆ ಬೇಡಿಕೊಳ್ಳಲಾಯಿತು. ರೈತ ಮೋರ್ಚಾ ಮುಖಂಡರು ಹಾಗೂ ಪದಾಧಿಕಾರಿಗಳು ದೇವಸ್ಥಾನದ ಆವರಣದಲ್ಲಿ ಗೋಪೂಜೆ ನೆರವೇರಿಸಿದರು.
ಯುವ ಮೋರ್ಚಾ ಮುಖಂಡರು ಹಾಗೂ ಪದಾಧಿಕಾರಿಗಳು ಪಟ್ಟಣದ ಪಶುವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಮೈನಾರಿಟಿ, ಎಸ್ಸಿ ಹಾಗೂ ಎಸ್ಟಿ ಮೋರ್ಚಾ ಪದಾಧಿಕಾರಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು.

Share This Article

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…

ನೀವಿದನ್ನು ನಿತ್ಯವೂ ಚಾಚೂ ತಪ್ಪದೇ ಅನುಸರಿಸಿದರೆ ನೀವು ಖಂಡಿತ ಶ್ರೀಮಂತರಾಗ್ತೀರಿ! Rich Person

ಇಂದು ಪ್ರತಿಯೊಬ್ಬರು ಶ್ರೀಮಂತರಾಗಲು ( Rich Person ) ಬಯಸುತ್ತಾರೆ. ತಾವು ದುಡಿದ ಹಣವನ್ನು ಸರಿಯಾದ…