ಬೀದರ್: ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಲ್ಲೇ ಹೆಚ್ಚು ಸಂತೃಪ್ತಿ ಕೊಡುತ್ತದೆ ಎಂದು ಸಾಹಿತಿ, ಪ್ರೌಢಶಾಲಾ ಶಿಕ್ಷಕಿ ಶ್ರೀದೇವಿ ವಿ. ಪಾಟೀಲ ಹೇಳಿದರು.
ಅಕ್ಕ ಮಹಾದೇವಿ ಮಹಿಳಾ ಸ್ವ ಸಹಾಯ ಸಂಘದ ವತಿಯಿಂದ ನಗರದ ಗುಮ್ಮೆ ಕಾಲೊನಿಯಲ್ಲಿ ಈಚೆಗೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರಪತಿಯಂತಹ ಅತ್ಯುನ್ನತ ಹುದ್ದೆ ಅಲಂಕರಿಸಿದ್ದ ರಾಧಾಕೃಷ್ಣನ್ ಅವರು ಪತ್ರಕರ್ತರೊಬ್ಬರ ಪ್ರಶ್ನೆಗೆ, ತಮಗೆ ಶಿಕ್ಷಕ ಹುದ್ದೆ ಎಲ್ಲಕ್ಕಿಂತ ಸಂತೃಪ್ತಿ ಹಾಗೂ ಸಮಾಧಾನ ನೀಡಿದೆ ಎಂದು ಉತ್ತರಿಸಿದ್ದರು ಎಂದು ತಿಳಿಸಿದರು.
ಶಿಕ್ಷಕ ಹುದ್ದೆ ಬಹಳ ಪವಿತ್ರವಾದದ್ದು. ಹೀಗಾಗಿ ಮನಃಪೂರ್ವಕ ಸೇವೆ ಸಲ್ಲಿಸ ಬಯಸುವವರಷ್ಟೇ ಈ ಹುದ್ದೆಗೆ ಬರಬೇಕು ಎಂದು ಹೇಳಿದರು.
ಶಿಕ್ಷಕಿಯರಾದ ವಿಜಯಲಕ್ಷ್ಮಿ ಪರಸಾಣೆ, ಚಂದ್ರಕಲಾ ಮೇತ್ರೆ ಹಾಗೂ ಕರುಣಾ ಕ್ಯಾಸಾ ಅವರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷೆ ಸುರೇಖಾ ಫುಲೇಕರ್ ಅಧ್ಯಕ್ಷತೆ ವಹಿಸಿದ್ದರು. ಚಿಟಗುಪ್ಪದ ಗೌರಿಬಾಯಿ ಅಗ್ರವಾಲ್ ಪದವಿಪೂರ್ವ ಕಾಲೇಜು ಪ್ರಾಚಾರ್ಯ ವಿಜಯಕುಮಾರ ಕೆ. ಪಾಟೀಲ, ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ಗುಂಡಪ್ಪ ಫುಲೆಕರ್, ಶಿಕ್ಷಕ ವೆಂಕಟರಾವ್ ಸಿಂಧೆ, ನಿವೃತ್ತ ಶಿಕ್ಷಕರಾದ ಶಿವಕುಮಾರ ನಾವದಗೆ, ಕಾಶೀನಾಥ ತಂಗಾ ಇದ್ದರು.
ಗೀತಾ ಮಹಾಂತೇಶ ಸ್ವಾಗತಿಸಿದರು. ವೈಜಿನಾಥ ಪಾಟೀಲ ನಿರೂಪಿಸಿದರು. ಶಿಲ್ಪಾ ಮಜಗೆ ವಂದಿಸಿದರು.
ಸಂತೃಪ್ತಿ ಕೊಡುವ ಶಿಕ್ಷಕ ವೃತ್ತಿ
ದೀರ್ಘ ಕಾಲದ ಬೆನ್ನು ನೋವು ನಿಯಂತ್ರಣಕ್ಕೆ ಮಾರ್ಜಾಲಾಸನ | Back Pain
ಪ್ರ: ಮಾರ್ಜಾಲಾಸನದ ಬಗ್ಗೆ ಮಾಹಿತಿ, ಅಭ್ಯಾಸದ ಕ್ರಮ ತಿಳಿಸಿ (Back Pain). ಉ: ಈ ಆಸನಕ್ಕೆ…
ಎಳನೀರನ್ನು ಹೀಗೆ ಕುಡಿದರೆ ಸಾಕು ಹೊಟ್ಟೆಯ ಸುತ್ತ ಸೇರಿಕೊಂಡಿರುವ ಬೊಜ್ಜು ಬೇಗನೆ ಕರಗುತ್ತೆ..!
ಪ್ರತೀ ಊರಿನಲ್ಲಿ ಎಳನೀರು ಸಿಗುತ್ತದೆ. ಇದನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ತೂಕವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ…
Weight Loss: ಊಟ ಬಿಟ್ಟರೆ ತೂಕ ಕಡಿಮೆಯಾಗುತ್ತಾ? ಈ ವಿಷಯಗಳನ್ನು ನಂಬಬೇಡಿ!
ಬೆಂಗಳೂರು: ಹೆಚ್ಚಿನವರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ತೂಕ ಇಳಿಸಿಕೊಳ್ಳಲು (Weight Loss) ಹಲವು…