ಸಹಕಾರ ಆಸ್ಪತ್ರೆಗೆ ಅವಿರೋಧ ಆಯ್ಕೆ

ಬೀದರ್: ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಡಳಿತ ಮಂಡಳಿಯ 21 ಸದಸ್ಯ (ನಿರ್ದೇಶಕರು) ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಎಲ್ಲ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಿಸಲಾಯಿತು. ಸೂರ್ಯಕಾಂತ ನಾಗಮಾರಪಳ್ಳಿ, ಶಿವಕುಮಾರ ಭಾಲ್ಕೆ, ಸಂಜು ಸಿದ್ಧಾಪುರ, ಭೀಮರಾವ ಪಾಟೀಲ್, ನರಸಾರಡ್ಡಿ ಬೇಮಳಖೇಡ, ರಾಚಪ್ಪ ಬಸವಣಪ್ಪ, ಗೋವಿಂದ ವಿಶ್ವನಾಥ, ರಾಘವೇಂದ್ರ ಮೇಹಕರ್, ಆಕಾಶ ನಾಗಮಾರಪಳ್ಳಿ, ಡಾ.ರಜನೀಶ್ ವಾಲಿ, ಸಂತೋಷಕುಮಾರ ತಾಳಂಪಳ್ಳಿ, ಸಿದ್ರಾಮ ಧುಳಪ್ಪ, ಸೈಯದ್ ಖೈಜುರುಲ್ಲಾ ರೇಕುಳಗಿ, ತರುಣ ನಾಗಮಾರಪಳ್ಳಿ, ಡಾ.ವಿಜಯಕುಮಾರ ಕೋಟೆ, ರಾಜೇಶ್ವರ ನಿಟ್ಟೂರೆ, ಅಶೋಕ ರೇಜಂತಲ್, ಡಾ.ಚಂದ್ರಕಾಂತ ಗುದಗೆ, ಶಕುಂತಲಾ ಬೆಲ್ದಾಳೆ, ವಿಜಯಲಕ್ಷ್ಮೀ ಹೂಗಾರ, ರಾಮದಾಸ ತುಳಸಿರಾಮ ಐದು ವರ್ಷದ ಅವಗೆ ಆಯ್ಕೆಯಾಗಿದ್ದಾರೆ.
ರೈತರು, ಜಿಲ್ಲೆಯ ಜನರ ಹಿತದೃಷ್ಟಿಯಿಂದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ನಗರದಲ್ಲಿ 2012ರಲ್ಲಿ ಸಹಕಾರ ಆಸ್ಪತ್ರೆ ಆರಂಭಿಸಿದ್ದರು. ಇದರ ಪ್ರಥಮ ಅಧ್ಯಕ್ಷರಾಗಿದ್ದ ಗುರುಪಾದಪ್ಪ ನಿಧನ ಹೊಂದಿದ ನಂತರ ಸಾರಥ್ಯವನ್ನು ಅವರ ಪುತ್ರ ಸೂರ್ಯಕಾಂತ ವಹಿಸಿಕೊಂಡರು. ಕರೊನಾದಲ್ಲಿ ಕೇವಲ ಒಂದು ರೂಪಾಯಿಗೆ ಚಿಕಿತ್ಸೆ ಸೇರಿ ಆಸ್ಪತ್ರೆ ಮೂಲಕ ನಾನಾ ಸೇವೆಗಳನ್ನು ಸೂರ್ಯಕಾಂತ ನಾಗಮಾರಪಳ್ಳಿ ನೇತೃತ್ವದ ಆಡಳಿತ ಮಾಡಿಕೊಂಡು ಬರುತ್ತಿದೆ. ಇದೀಗ ಮತ್ತೆ ಅವರ ತಂಡ ಅವಿರೋಧ ಆಯ್ಕೆಯಾಗಿದೆ. ಶೀಘ್ರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಸೂರ್ಯಕಾಂತ ಮತ್ತೆ ಅಧ್ಯಕ್ಷರಾಗುವುದು ಖಚಿತ.

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…