ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ನಗರದ ರಾಂಪುರೆ ಕಾಲೊನಿಯಲ್ಲಿ ಈಚೆಗೆ ಸಾರ್ವಜನಿಕರಿಗೆ 80 ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಕಾಲೊನಿಯ ವಿವಿಧೆಡೆ ಸಸಿಗಳನ್ನು ಸಹ ನೆಡಲಾಯಿತು. ‘ಒಂದು ಸಸಿ ತಾಯಿಯ ಹೆಸರಲ್ಲಿ ನೆಟ್ಟು ಬೆಳೆಸಿ’ ಅಭಿಯಾನ ಅಂಗವಾಗಿ ಸಾರ್ವಜನಿಕರಿಗೆ ವಿವಿಧ ಬಗೆಯ ಸಸಿಗಳನ್ನು ವಿತರಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಶಿವಕುಮಾರ ಪಾಖಾಲ್ ತಿಳಿಸಿದರು.
ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ಕ್ಲಬ್ ಕಾರ್ಯದರ್ಶಿ ಪ್ರಭು ತಟ್ಟಪಟ್ಟಿ, ಸದಸ್ಯರಾದ ನಿತಿನ್ ಕರ್ಪೂರ, ರಾಹುಲ್ ಅಟ್ಟಲ್, ಡಾ. ಕಪಿಲ್ ಪಾಟೀಲ, ಡಾ. ಲೋಕೇಶ ಹಿರೇಮಠ, ಸತೀಶ್ ಸ್ವಾಮಿ, ಆರ್.ಎಫ್.ಒ. ಪ್ರೇಮಶೇಖರ್, ಜೈ ಹನುಮಾನ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ರಮೇಶ ಇಟಗಿಕರ್, ಕಾರ್ಯದರ್ಶಿ ಬಾಬುರಾವ್ ಗೊಂಡ, ಖಜಾಂಚಿ ಆರ್.ಎಸ್. ಬಿರಾದಾರ, ಸದಸ್ಯರಾದ ಲಕ್ಷ್ಮಿಕಾಂತ ಜೋಳಗಿಕರ್, ಆನಂದ ಕುಲಕರ್ಣಿ, ಕೀರ್ತಿರಾಜ ಪೋಸ್ತೆ ಇದ್ದರು.
ಯೋಧರಿಗೆ ಸನ್ಮಾನ: ಕಾರ್ಗಿಲ್ ವಿಜಯೋತ್ಸವ ದಿನದ ಅಂಗವಾಗಿ ಕ್ಲಬ್‍ನಿಂದ ಐ.ಎಂ.ಎ. ಹಾಲ್‍ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುದ್ಧದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಸೈನಿಕರಾದ ದುಬಲಗುಂಡಿಯ ಮಚ್ಚೇಂದ್ರನಾಥ ಡಾಯಿಜೋಡೆ ಹಾಗೂ ಅಮೂಲ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ಕ್ಲಬ್ ಅಧ್ಯಕ್ಷ ಶಿವಕುಮಾರ ಪಾಖಾಲ್, ಕಾರ್ಯದರ್ಶಿ ಪ್ರಭು ತಟ್ಟಪಟ್ಟಿ, ಡಾ. ರಘು ಕೃಷ್ಣಮೂರ್ತಿ, ಡಾ. ಕಪಿಲ್ ಪಾಟೀಲ, ನಿತಿನ್ ಕರ್ಪೂರ, ಸತೀಶ್ ಸ್ವಾಮಿ, ಸೋಮಶೇಖರ ಪಾಟೀಲ, ಹಾವಶೆಟ್ಟಿ ಪಾಟೀಲ, ಬಸವರಾಜ ಧನ್ನೂರ, ಗುಂಡಪ್ಪ ಘೋಡೆ, ನಾಗರಾಜ ಕರ್ಪೂರ, ಆದೀಶ್ ವಾಲಿ ಮತ್ತಿತರರು ಇದ್ದರು.
ರೋಟರಿ ಕ್ಲಬ್‍ನಿಂದ ಸಸಿ ವಿತರಣೆ
ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?
ಬೆಂಗಳೂರು: ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?
ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…
ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು
ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…