ಬೀದರ್: ಅಕ್ರಮ, ಹಗರಣ ಎಂಬ ಪದ ಬಿಜೆಪಿಯವರಿಂದ ಸ್ಥಾಪಿತವಾಗಿದ್ದು, ಅದು ಕೇಸರಿ ಕಲಿಗಳಿಗೆ ಮಾತ್ರ ಗೊತ್ತಿದೆ ಎಂದು ಗೊಂಡ ಸಮಾಜದ ಹಿರಿಯ ಮುಖಂಡ, ಗ್ಯಾರಂಟಿ ಯೋಜನೆಗಳ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೊಡೆ ಟಾಂಗ್ ನೀಡಿದರು.
ಬಿಜೆಪಿಯವರು ತಲೆ, ಬುಡ ಇಲ್ಲದ ಮುಡಾ ಹಗರಣ ಸೃಷ್ಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಕೆಸರು ಎರೆಚಲು ಪ್ರಯತ್ನಿಸುತ್ತಿರುವುದು ಮುರ್ಖತನದ ಪರಮಾವಧಿ. ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಶುದ್ಧ ಹಸ್ತರು. ಅವರ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಬಸವಣ್ಣನವರ ತತ್ವ ಪಾಲಿಸಿಕೊಂಡು ಜನ ಕಲ್ಯಾಣವೇ ಧ್ಯೇಯವಾಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲಬುರಗಿ-ಬೀದರ್, ಯಾದಗಿರಿ ಹಾಲು ಒಕ್ಕೂಟ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ್ ಮಾತನಾಡಿ, ಬಿಜೆಪಿಯು ಕೇಂದ್ರ ಸಕರ್ಾರದ ಮೂಲಕ ಇಲ್ಲಿನ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ಕೊಡುವಂತೆ ಮಾಡಿ, ಪ್ರಜಾಪ್ರಭುತ್ವ ಕಗ್ಗೊಲೆ ಮಾಡಲು ಹೊರಟಿದೆ. ಇದನ್ನು ಖಂಡಿಸಿ ಜಿಲ್ಲೆಯ ಗೊಂಡ (ಕುರುಬ) ಸಮಾಜದ ವಿವಿಧ ಸಂಘಟನೆಗಳ ವತಿಯಿಂದ ಆ.5ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯುವ ಕೆಲಸ ತಕ್ಷಣ ಕೈಬಿಡಬೇಕು. ಜನನಾಯಕನ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಬಿಜೆಪಿಗೆ ಪಾಠ ಕಲಿಸುವ ಕಾಲ ಒದಗಿಬಂದಿದೆ. ಬಿಜೆಪಿ ಕುತಂತ್ರ ಖಂಡಿಸಿ ಆ.5ರಂದು ಬೀದರ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷ ಬಸವರಾಜ ಹೇಡೆ, ಮುಖಂಡರಾದ ಹಣಮಂತ ಮಲ್ಕಾಪುರ, ನರಸಪ್ಪ ಯಾಕತಪುರ, ಗಣಪತಿ ಕಮಠಾಣ, ಅಮರ ವಡಗಾಂವೆ, ರಾಜು ಚಿಟ್ಟಾವಾಡಿ, ಬಾಲಾಜಿ ಜಬಾಡೆ, ಸಚಿನ್ ಕಲ್ಲೂರ್ ಇತರದ್ದರು.
ಹಗರಣ ಪದ ಬಿಜೆಪಿಗೆ ಮಾತ್ರ ಗೊತ್ತು
ಹದ್ದಿನ ಕಣ್ಣಿನಂಥ ದೃಷ್ಟಿ ನಿಮ್ಮದಾಗಬೇಕಾ? ಇವು ನಿಮ್ಮ ಆಹಾರದಲ್ಲಿ ಇವೆಯೇ? ಚೆಕ್ ಮಾಡಿಕೊಳ್ಳಿ
ಬೆಂಗಳೂರು: ಮಾನವನ ಅಂಗಾಂಗಗಳಲ್ಲಿ ಎಲ್ಲವೂ ಮುಖ್ಯವೇ ಆದರೂ ಕಣ್ಣುಗಳು ಪ್ರಮುಖ ಸ್ಥಾನ ಪಡೆದುಕೊಂಡಿವೆ. ಹೀಗಾಗಿಯೇ ಕಣ್ಣುಗಳು…
ಇವುಗಳನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದ್ರೆ ಸಾಕು! ಚೆನ್ನಾಗಿ ನಿದ್ದೆ ಜತೆ, ಶ್ರೀಮಂತರಾಗೋದು ಪಕ್ಕಾ!
ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಹಣ ಅಥವಾ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈಗ ಹೇಳಿರುವ ಸರಳ ಪರಿಹಾರಗಳನ್ನು…
ಮನೆಯಲ್ಲಿ ಗುಲಾಬಿ ಗಿಡ ಬೆಳೆಸುತ್ತಿದ್ದೀರಾ? ಈ ವಾಸ್ತು ನಿಯಮಗಳು ಕಡ್ಡಾಯ!
ಬೆಂಗಳೂರು: ಸಾಮಾನ್ಯವಾಗಿ ನಮ್ಮ ಹಿತ್ತಲಿನಲ್ಲಿ ಹಲವು ಬಗೆಯ ಗಿಡಗಳನ್ನು ಬೆಳೆಸುತ್ತೇವೆ. ಗುಲಾಬಿ ಗಿಡಗಳನ್ನು ಇಷ್ಟಪಡದವರೇ ಇಲ್ಲ.…