ರೇವತಗಾಂವ: ಚಡಚಣ ತಾಲೂಕಿನ ರೇವತಗಾಂವದಲ್ಲಿ ಸಿಂಹಗಢ ಮಹಾರಾಜರ 55ನೇ ಪುಣ್ಯಾರಾಧನೆ ಡಿ.30 ರಿಂದ ಜ.5 ರವರೆಗೆ ನಡೆಯಲಿದೆ.
30 ರಂದು ಎಳ್ಳ ಅಮಾವಾಸ್ಯೆ ರಾತ್ರಿ 9ಕ್ಕೆ ವೀಣೆ ನಿಲ್ಲಿಸುವುದು ಹಾಗೂ ಹರಿನಾಮ ಜಪಯಜ್ಞ, ಮರಾಠಾ ಭಜನೆ ನಡೆಯಲಿದೆ.
ಜ.1ರಂದು ರಾತ್ರಿ 7ಕ್ಕೆ ಕಲಬುರಗಿಯ ಸಿದ್ಧಾರೂಢ ಮಠದ ನೀಲಾಂಬಿಕಾ ತಾಯಿ, ಬರೂರದ ಆನಂದ ಶಾಸಿಗಳಿಂದ ಪ್ರವಚನ ಜರುಗಲಿದೆ. ಆ.2 ರಂದು ಸಂಜೆ 6ಕ್ಕೆ ನೀಲಾಂಬಿಕಾ ತಾಯಿ ಹಾಗೂ ಚಿಕ್ಕರೂಗಿಯ ಈರಣ್ಣ ಶಾಸಿ ಅವರಿಂದ ಪ್ರವಚನ ನಡೆಯಲಿದೆ. 3 ರಂದು ಸಂಜೆ 6ಕ್ಕೆ ಗದಗ ಶಾಖಾ ಮಠದ ಮೈತ್ರಾದೇವಿ ಹಾಗೂ ಕಾತ್ರಾಳದ ಅಮೃತಾನಂದ ಸ್ವಾಮೀಜಿ ಅವರಿಂದ ಪ್ರವಚನ ನಡೆಯಲಿದೆ.
4ರಂದು ಸಂಜೆ 6ಕ್ಕೆ ಕಕಮರಿಯ ಅಭಿನವ ಗುರುಲಿಂಗ ಜಂಗಮ ಮಹಾರಾಜರ ಅಧ್ಯಕ್ಷತೆಯಲ್ಲಿ ಪ್ರವಚನ ಹಾಗೂ ಕಿರ್ತನೆ ಜರುಗಲಿದೆ. ಹುನ್ನೂರದ ಪರಶುರಾಮ ವನಮೋರೆ, ನೀಲಾಂಬಿಕಾ ತಾಯಿ ಅಸುಂಡಿ, ಮೈತ್ರಾದೇವಿ, ಅಭಿನವ ಕೊಳಗೇರಿ ಮಹಾರಾಜರಿಂದ ಪ್ರವಚನ ಹಾಗೂ ಮರವೇಡಾದ ಸ್ವಾಮಿ ಮಹಾರಾಜರಿಂದ ಮರಾಠಿ ಭಜನೆ, ರಾತ್ರಿ 10.45ಕ್ಕೆ ಶ್ರೀಸದ್ಗುರುವಿಗೆ ರುದ್ರಾಭಿಷೇಕ ಮತ್ತು ಪುಷ್ಪಾರ್ಚನೆ, ನಂತರ ಚಡಚಣದ ಚಂದ್ರಕಾಂತ ಕಾಮಗೊಂಡ ಮತ್ತು ಗುರುರಾಜ ಹಳ್ಳಿಖೇಡ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
5 ರಂದು ಮುತ್ತೈದೆಯರಿಂದ ಆರತಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸದ್ಗುರುವಿನ ಭಾವಚಿತ್ರ ಮೆರವಣಿಗೆ ನಡೆದು ಸಿಂಹಗಢ ಮಹಾರಾಜರ ಮುಖ್ಯ ವೇದಿಕೆ ತಲುಪುವುದು.
ಬೆಳಗ್ಗೆ 10.45ಕ್ಕೆ ಕಕಮರಿಯ ಅಭಿನವ ಗುರುಲಿಂಗ ಜಂಗಮ ಮಹಾರಾಜರ ಅಧ್ಯಕ್ಷತೆಯಲ್ಲಿ ಧರ್ಮಸಭೆ ನಡೆಯಲಿವೆ. ಪರಶುರಾಮ ವನಮೋರೆ, ನೀಲಾಂಬಿಕಾ ತಾಯಿ, ಮೈತ್ರಾದೇವಿ, ಅಭಿನವ ಕೊಳಗೇರಿ ಮಹಾರಾಜರು, ಗುರುಪಾದೇಶ್ವರ ಶ್ರೀಗಳು, ವಿಜಯಮಹಾಂತೇಶ್ವರ ಶ್ರೀಗಳ ನೇತೃತ್ವದಲ್ಲಿ ಹೂ ಬೀಳುವ ಕಾರ್ಯಕ್ರಮ, ನಂತರ ಪ್ರಸಾದ ವಿತರಣೆ, ರಾತ್ರಿ 9ಕ್ಕೆ ಜಮಖಂಡಿಯ ಶ್ರೀ ಬಸವೇಶ್ವರ ಕೃಪಾ ಪೋಷಿತ ಕಲಾ ನಾಟ್ಯ ಸಂಘದಿಂದ ಧರ್ಮದ ದಾರಿಯಲ್ಲಿ ಕರ್ಮದ ಬಿರುಗಾಳಿ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.