ಮುಧೋಳ: ಉತ್ತರಾದಿ ಮಠದ ಹಿಂದಿನ ಶ್ರೀಗಳಾದ ಸತ್ಯ ಪ್ರಮೋದ ತೀರ್ಥರ ಆರಾಧನೆಯನ್ನು ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ರಾತ್ರಿ ಆಚರಿಸಲಾಯಿತು.
ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಅಧ್ಯಕ್ಷ ಪಂ. ಪ್ರಮೋದಾಚಾರ ಪೂಜಾರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮುಧೋಳದ ದಾಸಸಾಹಿತ್ಯ ಬಳಗದಿಂದ ಆಚಾರ್ಯರಿಗೆ ಗುರುವಂದನೆ ಸಲ್ಲಿಸಲಾಯಿತು. ವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಮುಧೋಳದ ಸೌರಭ ವಿದ್ಯಾಲಯದ ಅಧ್ಯಕ್ಷ ಪಾಂಡುರಂಗ ಆಚಾರ್ಯ ಜೋಶಿ ಅಧ್ಯಕ್ಷತೆ ವಹಿಸಿದ್ದರು.
ಸ್ಥಳೀಯ ವಿದ್ವಾಂಸರಾದ ಹೃಷಿಕೇಶಾಚಾರ್ಯ ಜೋಶಿ, ಮುಧೋಳ ಘಟಕದ ಸಂಚಾಲಕಿ ದಿವ್ಯಾ ದೇಸಾಯಿ, ಸೌರಭ ದಾಸಸಾಹಿತ್ಯ ವಿದ್ಯಾಲಯದ ಸದಸ್ಯರು ಹಾಗೂ ವಿಪ್ರ ಸಮಾಜದ ಪ್ರಮುಖರು ಇದ್ದರು. ಶ್ರೀಲತಾ ಕುಲಕರ್ಣಿ ಸ್ವಾಗತಿಸಿದರು. ಶೃದ್ಧಾ ಕಾಖಂಡಕಿ ನಿರೂಪಿಸಿದರು. ಸುನಿತಾ ದೇಶಪಾಂಡೆ ವಂದಿಸಿದರು.