ಆಲ್ದೂರು: ಆಲ್ದೂರಿನಲ್ಲಿ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಕಾಫಿ ಬೆಳೆಗಾರರು, ರೈತರು ಕಾಫಿ ಮತ್ತು ಭತ್ತದ ರಾಶಿಗೆ ಪೂಜೆ ಸಲ್ಲಿಸಿ ಸಂಕ್ರಾಂತಿ ಹಬ್ಬ ಆಚರಿಸಿದರು. ಮಕ್ಕಳು ಸ್ನೇಹಿತರ ಜತೆಗೆ ಅಕ್ಕ ಪಕ್ಕದ ಮನೆಗಳಿಗೆ ಎಳ್ಳು-ಬೆಲ್ಲ ಹಂಚಿ ಸಂಭ್ರಮಿಸಿದರು.
ಸಂಕ್ರಾಂತಿ ಹಬ್ಬವನ್ನು ಸುಗ್ಗಿ ಹಬ್ಬವೆಂದೇ ಕರೆಯಲಾಗುತ್ತದೆ. ರೈತರು ತಾವು ಬೆಳೆದ ಬೆಳೆಗಳನ್ನು ಪೂಜಿಸಿ ಮನೆ ತುಂಬಿಸಿಕೊಳ್ಳುವ ಕಾಲ. ಕಾಫಿ ಬೆಳೆಗಾರರು ಕಾಫಿ ಬೀಜದ ರಾಶಿಗೆ ಪೂಜೆ ಸಲ್ಲಿಸಿದರೆ, ಭತ್ತ ಬೆಳೆದ ಕೃಷಿಕರು ಭತ್ತದ ರಾಶಿಯನ್ನು ಪೂಜಿಸಿ ಭೂಮಿ ತಾಯಿಗೆ ಕೃತಜ್ಞಾತೆ ಸಲ್ಲಿಸಿದರು.
ಕೆಲವು ವರ್ಷಗಳ ಹಿಂದೆ ಮಲೆನಾಡಿನಲ್ಲಿ ಭತ್ತದ ಕೃಷಿ ಹೆಚ್ಚಾಗಿತ್ತು. ರೈತರು ತಾವು ಬೆಳೆದ ಭತ್ತದ ಸಲನ್ನು ಮನೆಗೆ ತಂದು ಪೂಜಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಭತ್ತ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ ಭತ್ತದ ಗದ್ದೆಯಲ್ಲೇ ಯಂತ್ರಗಳ ಮೂಲಕ ಒಕ್ಕಲಾಟ ಮಾಡಿ ಅಲ್ಲಿಯೇ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಹಿಂದಿನ ಸಂಕ್ರಾಂತಿ ಸಂಭ್ರಮ ಮರೆಯಾಗುತ್ತಿದೆ. ಭತ್ತ, ಕಾಫಿಗೆ ಪೂಜೆ ಸಲ್ಲಿಸಿ ಬೆಳೆಯನ್ನು ಕಣಜಕ್ಕೆ ತುಂಬುತ್ತಿದ್ದರು. ಆ ಸಂಪ್ರದಾಯದ ದಿನಗಳು ಕಣ್ಮರೆಯಾಗುತ್ತಿವೆ.
ಕಾಫಿ, ಭತ್ತದ ಬೆಳೆಗೆ ಪೂಜೆ ಸಲ್ಲಿಕೆ

ಕ್ಯಾರೆಟ್ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್ ವಿಧಾನ | Recipe
ಕ್ಯಾರೆಟ್ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…
ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…
ಕಣ್ಣಿನಪೊರೆ ಸಮಸ್ಯೆಗೆ ಪರಿಹಾರ ಏನೆಂದು ಆಲೋಚಿಸುತ್ತಿದ್ದೀರಾ?; ಇಲ್ಲಿದೆ ಸೂಕ್ತ ಮನೆಮದ್ದಿನ ಮಾಹಿತಿ | Health Tips
ಪ್ರಸ್ತುತ ಕಾರ್ಯನಿರತ ಜೀವನ ಮತ್ತು ಕಳಪೆ ಜೀವನಶೈಲಿಯಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಅದರಲ್ಲಿನ ಪ್ರಮುಖ ಸಮಸ್ಯೆಗಳಲ್ಲಿ…