More

    ವಿಶ್ವದ ಅತಿ ಚಿಕ್ಕ ಮನುಷ್ಯ ನೇಪಾಳದ ಖಗೇಂದ್ರ ಥಾಪ ಮಗರ್​ ಇನ್ನಿಲ್ಲ

    ಮುಂಬೈ: ವಿಶ್ವದ ಅತಿ ಚಿಕ್ಕ ಮನುಷ್ಯ ನೇಪಾಳದ ಖಗೇಂದ್ರ ಥಾಪ ಮಗರ್​ ಮೃತ ಪಟ್ಟಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಕಠ್ಮಂಡು ಸಮೀಪದ ಪೋಖ್ರಾ ಎಂಬಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ನ್ಯುಮೋನಿಯಾದಿಂದಾಗಿ ಅವರಿಗೆ ಪದೇಪದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇತ್ತು ಎಂದು ಥಾಪ ಅವರ ಸೋದರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಥಾಪ ಅವರು 67 ಸೆಂಟಿ ಮೀಟರ್​ (2.42 ಇಂಚು) ಎತ್ತರವಿದ್ದರು. 2010ರಲ್ಲಿ ಅವರ 18ನೇ ವರ್ಷದ ಹುಟ್ಟಹಬ್ಬದ ನಂತರ ವಿಶ್ವದ ನಡೆದಾಡುವ ಚಿಕ್ಕ ವ್ಯಕ್ತಿ ಎಂದು ಘೋಷಿಸಲಾಗಿತ್ತು.

    ಈ ಮುಂಚೆ ನೇಪಾಳದವರೇ ಆದ ಚಂದ್ರ ಬಹದ್ದೂರ್​ ಡಾಂಗಿ ಅವರು ವಿಶ್ವದ ಚಿಕ್ಕ (54 ಸೆಂಟಿ ಮೀಟರ್​ ) ವ್ಯಕ್ತಿಯಾಗಿದ್ದರು. 2015ರಲ್ಲಿ ಡಾಂಗಿ ಮೃತ ಪಟ್ಟ ನಂತರ ಥಾಪ ಅವರಿಗೆ ಈ ಸ್ಥಾನ ದೊರೆತಿತ್ತು.

    ಗಿನ್ನೆಸ್​ ರೆಕಾರ್ಡ್​ನ ಮುಖ್ಯ ಸಂಪಾದಕ ಕ್ರೇಗ್​ ಗ್ಲೆಂಡೆ, “ಸುದ್ದಿ ತಿಳಿದು ಬೇಸರವಾಯಿತು. ಸಾಮಾನ್ಯವಾಗಿ 6 ಕೆಜಿ ತೂಕ ವಿರುವ ವ್ಯಕ್ತಿಗಳಿಗೆ ಜೀವನ ಸಾಗಿಸುವುದು ಕಷ್ಟವಾಗುತ್ತದೆ. ಆದರೆ ಖಗೇಂದ್ರ ಥಾಪ ಅವರು ಚಿಕ್ಕ ಎತ್ತರದಲ್ಲೇ ದೊಡ್ಡದನ್ನು ಪಡೆದಿದ್ದರು” ಎಂದು ಪ್ರತಿಕ್ರಿಯಿಸಿದ್ದಾರೆ.

    ಥಾಪ ಅವರು ನೇಪಾಳ ಪ್ರವಾಸೋದ್ಯಮದ ಕೇಂದ್ರ ಬಿಂದುವಾಗಿದ್ದರು. ವಿಶ್ವದ ಎತ್ತರವಾದ ಮೌಟ್​ ಎವರೆಸ್ಟ್​ ಪ್ರದೇಶದಲ್ಲಿರುವ ಚಿಕ್ಕ ವ್ಯಕ್ತಿ ಎಂದು ಅವರನ್ನು ಹೆಸರಿಸಲಾಗಿತ್ತು.

    ಸದ್ಯದಲ್ಲಿ ಕೊಲಂಬಿಯಾದ ಎಡ್ವರ್ಡ್ ನಿನೊ ಹೆರ್ನಾಂಡೆಜ್ (70.21 ಸೆಂಟಿಮೀಟರ್) ಎತ್ತರದ ಜೀವಂತವಾಗಿರುವ ಮನುಷ್ಯ ಎಂದು ಗಿನ್ನೀಸ್​ ರೆಕಾರ್ಡ್​ ಪ್ರಕಾರ ತಿಳಿದು ಬಂದಿದೆ. (ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts