Wednesday, 21st November 2018  

Vijayavani

ಕಬ್ಬು ಬೆಳೆಗಾರರ ಹೋರಾಟಕ್ಕೆ ಕೇಸರಿ ಬಲ - ರಾಜ್ಯಾದ್ಯಂತ ಇಂದು ಬಿಜೆಪಿ ಬೃಹತ್ ಪ್ರತಿಭಟನೆ        ಗದಗಿನ ಕದಡಿ ಬಳಿ ಒಡೆದ ಕಾಲುವೆ- ಜಮೀನುಗಳಿಗೆ ನುಗ್ಗಿದ ಅಪಾರ ನೀರು - ಅಧಿಕಾರಿಗಳ ವಿರುದ್ಧ ಆಕ್ರೋಶ        ದ್ರಾಕ್ಷಿ ತೋಟದಲ್ಲಿ ಕರೆಂಟೂ, ನೆಲದಲ್ಲೂ ಕರೆಂಟು - ಚಿಕ್ಕಬಳ್ಳಾಪುರದ ಪವರ್​ ಗ್ರಿಡ್ ಕಂಟಕ        ಮದ್ದೂರು ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ - ಒಬ್ಬ ಲ್ಯಾಬ್ ಟೆಕ್ನೀಷಿಯನ್ ಸ್ಥಿತಿ ಗಂಭೀರ-        ಸ್ಯಾಂಡಲ್​ವುಡ್​​ನಲ್ಲಿ ಮತ್ತೊಂದು ಗಟ್ಟಿಮೇಳ - ಡಿ.11, 12ರಂದು ಹಸೆಮಣೆ ಏರುತ್ತೆ ಐಂದ್ರಿತಾ, ದಿಗಂತ್ ಜೋಡಿ       
Breaking News

ಪೈಜಾಮಾ ಧರಿಸಿ ಬೋರ್ಡ್​ ಮೀಟಿಂಗ್​ಗೆ ಬಂದ ಜಗತ್ತಿನ ಆಗರ್ಭ ಶ್ರೀಮಂತ!

Thursday, 13.09.2018, 10:39 PM       No Comments

ವಾಷಿಂಗ್ಟನ್​: ಆನ್​ಲೈನ್ ರಿಟೇಲ್ ದಿಗ್ಗಜ ಅಮೆಜಾನ್ ಕಂಪನಿ ಸಿಇಒ ಜೆಫ್ ಬೆಜೋಸ್ ಆಡಳಿತ ಮಂಡಳಿಯ ಸಭೆಗೆ ಮನೆಯಲ್ಲಿ ರಾತ್ರಿ ವೇಳೆ ಧರಿಸುವ ಪೈಜಾಮಾ ಮತ್ತು ಚಪ್ಪಲಿ ಧರಿಸಿ ಆಗಮಿಸಿದ್ದರು.

ಹೌದು ಬುಧವಾರ ನಡೆದ ಸಭೆಯಲ್ಲಿ ಪೈಜಾಮಾ ಧರಿಸಿದ್ದ ಜೆಫ್​ ಬೆಜೋಸ್​ ಪಾಲ್ಗೊಂಡಿದ್ದರು. ಆದರೆ ಅವರು ಹೀಗೆ ಪೈಜಾಮಾದಲ್ಲಿ ಆಫೀಸ್​ಗೆ ಬಂದಿದ್ದಕ್ಕೆ ಬಲವಾದ ಕಾರಣವೊಂದಿದೆ. ಮಕ್ಕಳ ಕ್ಯಾನ್ಸರ್​ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅವರು ಹೀಗೆ ಬಂದಿದ್ದರು.

ಜೆಫ್​ ಅಮೆರಿಕದ ಮಕ್ಕಳ ಕ್ಯಾನ್ಸರ್​ ಸಂಸ್ಥೆಯೊಂದಿಗೆ ಸೇರಿ ಮಕ್ಕಳ ಕ್ಯಾನ್ಸರ್​ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮಕ್ಕಳು ಕ್ಯಾನ್ಸರ್​ ಚಿಕಿತ್ಸೆ ಪಡೆಯುವಾಗ ಹಲವು ತಿಂಗಳುಗಳವರೆಗೆ ಅವರು ಪೈಜಾಮಾದಲ್ಲೇ ಇರಬೇಕಾಗುತ್ತದೆ. ಇತರ ಬಟ್ಟೆಗಳನ್ನು ಧರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹಲವೆಡೆ ಪೈಜಾಮಾ ಕಾರ್ಯಕ್ರಮವನ್ನು ಆಯೋಜಿಸಿ ಸಂಸ್ಥೆಗೆ ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂದು ಕ್ಯಾನ್ಸರ್​ ಸಂಸ್ಥೆ ತಿಳಿಸಿದೆ.

ಜೆಫ್​ ತಾವು ಪೈಜಾಮಾ ಧರಿಸಿ ಕಚೇರಿಗೆ ತೆರಳಿರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದು, ಕ್ಯಾನ್ಸರ್​ನಿಂದ ಬಳಲುತ್ತಿರುವ ಮಕ್ಕಳ ನೆರವಿಗೆ ನಿಲ್ಲುವಂತೆ ಮನವಿ ಮಾಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top