ವಿಶ್ವದ ಅತಿದೊಡ್ಡ ವಿಮಾನ ಹಾರಾಟ ಪರೀಕ್ಷೆ ಯಶಸ್ವಿ

ವಾಷಿಂಗ್ಟನ್: ಜಗತ್ತಿನ ಅತಿದೊಡ್ಡ ವಿಮಾನ ಎಂಬ ಹೆಗ್ಗಳಿಕೆಯ ‘ಸ್ಟ್ರಾಟೋಲಾಂಚ್ ಬೆಹೆಮಾಥ್’ ಮೊದಲ ಬಾರಿಗೆ ಅಂದಾಜು ಎರಡೂವರೆ ಗಂಟೆ ಹಾರಾಟ ನಡೆಸಿ, ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ.

ಕ್ಯಾಲಿಫೋರ್ನಿಯಾದಿಂದ ಟೇಕ್​ಆಫ್ ಆದ ವಿಮಾನ ಮೊಜಾವೆ ಮರಳುಗಾಡಿನ ಮೇಲ್ಭಾಗದಲ್ಲಿ ಸಂಚರಿಸಿತು.

ರಾಕೆಟ್​ಗಳನ್ನು ಬಾಹ್ಯಾಕಾಶಕ್ಕೆ ಒಯ್ದು, ಅಲ್ಲಿಂದ ಉಡಾವಣೆ ಮಾಡುವ ಮೂಲಕ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸುವ ವಿನೂತನ ಯತ್ನವನ್ನು ಸ್ಟ್ರಾಟೋಲಾಂಚ್ ಮೂಲಕ ನಡೆಸಲು ನಿರ್ಧರಿಸಲಾಗಿದೆ.

ಈಗಿರುವ ರಾಕೆಟ್ ಉಡಾವಣೆ ಪದ್ಧತಿಯಲ್ಲಿ ಬಾಹ್ಯಾ ಕಾಶಕ್ಕೆ ರಾಕೆಟ್ ತಲುಪಲು ಹೆಚ್ಚು ದೂರ ಕ್ರಮಿಸಬೇಕು. ಆದರೆ ಸ್ಟ್ರಾಟೋಲಾಂಚ್​ನಲ್ಲಿ ರಾಕೆಟ್ ಉಡಾವಣೆ ಸಮಯ

ದಲ್ಲಿಯೇ ಬಾಹ್ಯಾಕಾಶದಲ್ಲಿರುತ್ತದೆ. ಇಷ್ಟು ದಿನ ವಿಮಾನವನ್ನು ನೆಲದ ಮೇಲೆ ಸಂಚರಿಸಿ ಹಲವು ಪರೀಕ್ಷೆಗಳನ್ನು ನಡೆಸಲಾಗಿತ್ತು. ಇದೇ ಮೊದಲ ಬಾರಿಗೆ ವಿಮಾನ ಹಾರಾಟ ನಡೆಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸ್ಟ್ರಾಟೋಲಾಂಚ್ ಎಂಬ ಖಾಸಗಿ ಕಂಪನಿ ಈ ವಿಮಾನ ಅಭಿವೃದ್ಧಿಪಡಿಸಿದೆ.

ಇದರ ವಿನ್ಯಾಸದ ಹೊಣೆಯನ್ನು ಸ್ಕೇಲ್ಡ್ ಕಾಂಪೊಸೀಟ್ಸ್ ಎಂಬ ಇಂಜಿನಿಯರಿಂಗ್ ಕಂಪನಿ ಹೊತ್ತಿದೆ.

ಭೂಮಿಯಿಂದ ಉಪಗ್ರಹ ಉಡಾವಣೆಗೆ ಪರ್ಯಾಯ ವ್ಯವಸ್ಥೆ ನೀಡುವ ನಮ್ಮ ಉದ್ದೇಶವನ್ನು ಬೃಹತ್ ವಿಮಾನದ ಯಶಸ್ವಿ ಹಾರಾಟ ಈಡೆರಿಸಿದೆ. ಶೀಘ್ರದಲ್ಲೇ ರಾಕೆಟ್ ಉಡಾವಣೆ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ರಚನೆಯಾಗಲಿದೆ.

| ಜೀನ್ ಫ್ಲಾಯ್್ಡ ಸ್ಟ್ರಾಟೋಲಾಂಚ್ ಕಂಪನಿ ಸಿಇಒ

ಕಂಪನಿ ಭವಿಷ್ಯ ಅತಂತ್ರ!

ಸ್ಟ್ರಾಟೋಲಾಂಚ್​ಗೆ ಅಗತ್ಯ ಹಣಕಾಸು ನೆರವು ನೀಡುವ ಮೂಲಕ ಉದ್ಯಮಿ ಪಾಲ್ ಅಲ್ಲೆನ್ ಕಂಪನಿಗೆ ಪ್ರಮುಖ ಆಧಾರಸ್ತಂಭ ವಾಗಿದ್ದರು. ಅಲ್ಲೆನ್ ಮೈಕ್ರೋಸಾಫ್ಟ್​ನ ಸಹ ಸಂಸ್ಥಾಪಕರು ಕೂಡ ಹೌದು. ಆದರೆ ಕಳೆದ ಅಕ್ಟೋಬರ್​ನಲ್ಲಿ ಅಲ್ಲೆನ್ ನಿಧನರಾದ ಹಿನ್ನೆಲೆಯಲ್ಲಿ ಸದ್ಯ ಕಂಪನಿ ಸ್ಥಿತಿ ಅತಂತ್ರವಾಗಿದೆ. ಹಾಗಿದ್ದೂ ಬೃಹತ್ ವಿಮಾನದ ಪರೀಕ್ಷೆಯನ್ನು ಕಂಪನಿ ಯಶಸ್ವಿಗೊಳಿಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.