ವಿಶ್ವದ ಮೊದಲ ಸಶಸ್ತ್ರ ಡ್ರೋನ್ ಬೋಟ್ ಸಿದ್ಧ: ಚೀನಾದಿಂದ ಯಶಸ್ವಿ ಪರೀಕ್ಷೆ

<<2 ಮಷಿನ್ ಗನ್, ಕ್ಷಿಪಣಿ ನಿರೋಧಕ ಲಾಂಚಿಂಗ್ ಸಿಸ್ಟಂ>>

ಬೀಜಿಂಗ್: ನೀರು ಮತ್ತು ಭೂಮಿ ಎರಡರಲ್ಲೂ ಕಾರ್ಯನಿರ್ವಹಿಸುವ ಉಭಯಚರ ಡ್ರೋನ್ ಬೋಟ್​ನ್ನು ಚೀನಾ ಅಭಿವೃದ್ಧಿಸಿದೆ. ಇದರ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆಸಿದ್ದು, ಇದು ವಿಶ್ವದ ಮೊದಲ ಸಶಸ್ತ್ರ ಡ್ರೋನ್ ಬೋಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚೀನಾ ಶಿಪ್​ಬಿಲ್ಡಿಂಗ್ ಇಂಡಸ್ಟ್ರಿ ಕಾರ್ಪೆರೇಷನ್ (ಸಿಎಸ್​ಐಸಿ) ಮಾರ್ಗದರ್ಶನದಲ್ಲಿ ವುಚಾಂಗ್ ಶಿಪ್​ಬಿಲ್ಡಿಂಗ್ ಇಂಡಸ್ಟ್ರಿ ಗ್ರೂಪ್ ಇದನ್ನು ಅಭಿವೃದ್ಧಿ ಪಡಿಸಿದೆ. ‘ಮರೀನ್ ಲಿಜರ್ಡ್’ ಎಂದು ಇದಕ್ಕೆ ಹೆಸರಿಡಲಾಗಿದೆ. ಈ ಡ್ರೋನ್ ಎಲ್ಲ ಪರೀಕ್ಷೆಗಳನ್ನು ಪೂರೈಸಿ ಏಪ್ರಿಲ್ 8ರಂದು ಹುಬೈ ಪ್ರಾಂತ್ಯದ ರಾಜಧಾನಿ ವುಹಾನ್​ನ ಕಾರ್ಖಾನೆಯಿಂದ ಹೊರಬಂದಿದೆ ಎಂದು ಗ್ಲೋಬಲ್ ಟೈಮ್್ಸ ಪತ್ರಿಕೆ ವರದಿ ಮಾಡಿದೆ. ಈ ಡ್ರೋನ್ ಭೂಮಿಯಲ್ಲಿ ಕಾರ್ಯನಿರ್ವಹಿಸುವಾಗ ನಾಲ್ಕು ಘಟಕಗಳನ್ನು ತನ್ನ ಉದರದೊಳಗೆ ಸೇರಿಸಿಕೊಳ್ಳುತ್ತದೆ. ನೀರಿನಲ್ಲಿ ಕಾರ್ಯನಿರ್ವಹಿಸುವಾಗ ಇವು ತೆರೆದುಕೊಳ್ಳಲಿವೆ. -ಏಜೆನ್ಸೀಸ್

ಡ್ರೋನ್ ಬೋಟ್ ವಿಶೇಷ

* 1,200 ಕಿ.ಮೀ. ಗರಿಷ್ಠ ದೂರವರೆಗೆ ಕಾರ್ಯಾಚರಣೆ *ಸ್ಯಾಟಲೈಟ್​ ಮೂಲಕ ಡ್ರೋನ್ ನಿಯಂತ್ರಣ* 12 ಮೀಟರ್ ಉದ್ದ* ಡೀಸೆಲ್ ಚಾಲಿತ * ನೀರಲ್ಲಿ ಗರಿಷ್ಠ ವೇಗ ಗಂಟೆಗೆ 50 ನಾಟಿಕಲ್ ಮೈಲಿ (92.6 ಕಿ.ಮೀ.) *ಭೂಮಿ ಮೇಲೆ ಗರಿಷ್ಠ ವೇಗ ಗಂಟೆಗೆ 20 ಕಿ.ಮೀ. * ಎಲೆಕ್ಟ್ರೊ-ಆಪ್ಟಿಕಲ್ ಮತ್ತು ರೇಡಾರ್ ವ್ಯವಸ್ಥೆ *ಎರಡು ಮಷಿನ್ ಗನ್, ಕ್ಷಿಪಣಿ ನಿರೋಧಕ ವರ್ಟಿಕಲ್ ಲಾಚಿಂಗ್ ಸಿಸ್ಟಂ