More

  ಸಿದ್ಧಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಯೋಗಮಯ ವಾತಾವರಣ

  ಕಲಬುರಗಿ: ನಗರದ ಕೋಟನೂರ (ಡಿ)ಯಲ್ಲಿನ ಶ್ರೀ ಸಿದ್ಧಶ್ರೀ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಶುಕ್ರವಾರ ವಿಶ್ವ ಯೋಗ ದಿನ ಆಚರಿಸಲಾಯಿತು.

  ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ್ ಅವರು ಯೋಗ ದಿನ ಉದ್ಘಾಟಿಸಿದರು. ಸಿದ್ಧಶ್ರೀ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಬಸವರಾಜ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ವಿಜಯವಾಣಿ ಸ್ಥಾನಿಕ ಸಂಪಾದಕ ಬಾಬುರಾವ್ ಯಡ್ರಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು‌.

  ಭಾರತ ಸ್ವಾಭಿಮಾನ ಟ್ರಸ್ಟ್, ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಶಿವಾನಂದ ಸಾಲಿಮಠ ಯೋಗ ತರಬೇತಿ ನೀಡಿದರು.

  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಕ್ರೆಪ್ಪಗೌಡ ಬಿರಾದಾರ, ಮಕ್ಕಳ ಸಾನ್ನಿಧ್ಯವೇ ಖುಷಿ ನೀಡುತ್ತದೆ, ಅದೇ ನಮಗೆ ಪುಣ್ಯದ ತಾಣವಾಗಿದೆ. ಕೋಟನೂರದ ಶ್ರೀ ಮಠ ಮಹಾತ್ಮರ ಪಾದ ಸ್ಪರ್ಶಿಸಿದ ಪುಣ್ಯದ ನೆಲವಾಗಿದೆ. ಇಂತಹ ಸ್ಥಳದಲ್ಲಿ ಯೋಗ ಮಾಡುವ ಸಂದೇಶ ಹೊತ್ತು ಸಾಗಿ, ಭವಿಷ್ಯದಲ್ಲಿ ನಿತ್ಯ ರೂಢಿ ಮಾಡಿಕೊಳ್ಳಬೇಕು ಎಂದು ಹೇಳಿದರು.

  ವಿಜಯವಾಣಿ ಸ್ಥಾನಿಕ ಸಂಪಾದಕ ಬಾಬುರಾವ್ ಯಡ್ರಾಮಿ ಪ್ರಾಸ್ತಾವಿಕ ಮಾತನಾಡಿ, ಯೋಗದ ಶಕ್ತಿ ಅಪಾರ. ಯಶಸ್ವಿ, ಮಾದರಿ ಉದ್ಯಮಿದಾರರಾದ ವಿಜಯಸಂಕೇಶ್ವರ ಅವರ ಸಾಮಾಜಿಕ ಕಾಳಜಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಸೂಚನೆಯಂತೆ ಇಡೀ ರಾಜ್ಯಾದ್ಯಂತ 250ಕ್ಕೂ ಸ್ಥಳಗಳಲ್ಲಿ ವಿಜಯವಾಣಿ ಸಹಯೋಗದಲ್ಲಿ ವಿಶ್ವ ಯೋಗ ದಿನ ಆಚರಿಸಲಾಗುತ್ತಿದೆ. ಸದೃಢ, ಸ್ವಸ್ಥ ದೇಶ ಕಟ್ಟುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.

  ಯೋಗ ಗುರು, ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್ ಜಿಲ್ಲಾಧ್ಯಕ್ಷ ಶಿವಾನಂದ ಸಾಲಿಮಠ ಮಾತನಾಡಿ, ಸ್ತ್ರೀ ಸಬಲೀಕರಣಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಪ್ರಸಕ್ತ ವರ್ಷದ ವಿಶ್ವ ಯೋಗ ದಿನ ಆಚರಿಸಲಾಗುತ್ತಿದೆ. ಹೆಣ್ಣೊಬ್ಬಳು ಯೋಗ ಕಲಿತರೆ ಇಡೀ ಮನೆ ಯೋಗಮಯವಾಗುತ್ತದೆ. ಮನೆಯವರೆಲ್ಲರಿಗೂ ಸಂಸ್ಕಾರ ಬರುತ್ತದೆ ಎಂದು ಹೇಳಿದರು‌.

  See also  ಉದ್ಯೋಗ ಖಾತ್ರಿ ಮಾಹಿತಿ ಕೊರತೆಯಿಂದ ವಲಸೆ, ಶೇ.100 ಸಾಧನೆಗೆ ಸಂಸದ ಬಚ್ಚೇಗೌಡ ಸೂಚನೆ

  ಮುಖ್ಯಗುರು ರುದ್ರಯ್ಯ ಮಠಪತಿ ನಿರೂಪಣೆ ಮಾಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts