ಮೊಳಕಾಲ್ಮೂರು: ಪ್ರಜಾಪ್ರಭುತ್ವದ ಮಹತ್ವ ಸಾರಲು ರಾಜ್ಯ ಕಾಂಗ್ರೆಸ್ ಸರ್ಕಾರ ಆಯೋಜಿಸಿರುವ ಮಾನವ ಸರಪಳಿ ವಿಶ್ವದಲ್ಲಿಯೇ ವಿಶೇಷ, ಪ್ರಥಮವಾಗಿದ್ದು, ವಿಶ್ವದಾಖಲೆ ಪಡೆಯಲಿದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.
ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಶಾಲಾ ಮಕ್ಕಳು ಸಂಭ್ರಮದಿಂದ ಪಾಲ್ಗೊಂಡಿದ್ದಾರೆ. ಅಧಿಕಾರಿಗಳು, ಪೊಲೀಸರು ಹೆಚ್ಚು ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮ ಗಿನ್ನೆಸ್ ಪುಟ ಸೇರಲಿದ್ದು, ಭಾರತ ಅದರಲ್ಲೂ ರಾಜ್ಯದ ಜನರಿಗೆ ಹೆಮ್ಮೆ ವಿಷಯ ಆಗಿದೆ. ಈ ಕಾರ್ಯಕ್ರಮದ ಮೂಲಕ ಜನರಲ್ಲಿ ಭ್ರಾತೃತ್ವ ಗಟ್ಟಿಗೊಳಿಸುವ ಕೆಲಸ ರಾಜ್ಯ ಸರ್ಕಾರ ಮಾಡಿದೆ. ಇದೊಂದು ಮಾದರಿ ಕಾರ್ಯ ಎಂದರು.