ವಿಜಯವಾಣಿ ಸುದ್ದಿಜಾಲ ಧಾರವಾಡ
ರೋಗಿಗಳಿಗೆ ಸಹಾನುಭೂತಿಯ ಆರೈಕೆ ಒದಗಿಸುವ ಸಮರ್ಪಿತ ವೃತ್ತಿಪರರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದ್ದಾರೆ. ದಾದಿಯರು ಇಲ್ಲದೆ ಆಸ್ಪತ್ರೆಯ ಕೆಲಸಗಳು ಅಪೂರ್ಣ ಎಂದು ಶ್ರೀಯಾ ಕಾಲೇಜಿನ ಶೈಕ್ಷಣಿಕ ನಿರ್ದೇಶಕಿ ಡಾ. ವಾಣಿ ಇರಕಲ್ ಹೇಳಿದರು.
ನಗರದ ಶ್ರೀಯಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಅಮೃತ್ ಬಸವ ಮಾತನಾಡಿ, ದಣಿದವರಿಯದೆ ಆರೈಕೆ ಮಾಡುವ ದಾದಿಯರ ಕಾರ್ಯ ಶ್ಲಾಘನೀಯ ಎಂದರು.
ಪ್ರಾಚಾರ್ಯೆ ಡಾ. ರೋಡಾ ಜೇಸುರಾಜ್ ಮಾತನಾಡಿದರು. ವಿವಿಧ ಆಸ್ಪತ್ರೆಗಳ ದಾದಿಯರಾದ ಲೀಲಾವತಿ ಕಳಸಪ್ಪನವರ, ದೊಂಡಿಬಾ, ಪಾರ್ವತಿ, ಪ್ರಿಯಾ0ಕಾ ಕುರುಡೇಕರ, ಪ್ರಶಾಂಶ ಅವರನ್ನು ಸನ್ಮಾನಿಸಲಾಯಿತು.
ಬ್ಯೂಲಾ ನಿರೂಪಿಸಿದರು. ರಾಜಶ್ರೀ ಆಲದಕಟ್ಟಿ ಸ್ವಾಗತಿಸಿದರು. ದೀಪಾ ವಂದಿಸಿದರು.

TAGGED:World Nurses Day program