15 ಕೋಟಿ ಜನರಿಗೆ ಮಾನಸಿಕ ಅನಾರೋಗ್ಯ: ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿಕೆ

World Mental Health Day Mandya

ಮಂಡ್ಯ: ದೇಶದಲ್ಲಿ ಶೇ.10ರಷ್ಟು ಜನರು ಮಾನಸಿಕ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ನ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿದರು.
ನಗರದ ಸೇವಾಕಿರಣ ಸಭಾಂಗಣದಲ್ಲಿ ಪರಿಸರ ಅಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಸುಮಾರು 15 ಕೋಟಿ ಜನರು ಮಾನಸಿಕ ಕಾಯಿಲೆಗೆ ಒಳಗಾಗಿದ್ದಾರೆ. ಈ ಪೈಕಿ ಶೇ.1ರಷ್ಟು ಜನರು ತೀವ್ರತರವಾಗಿ ನರಳುತ್ತಿದ್ದು, 1.5 ಕೋಟಿ ಜನರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ. 100 ಜನ ಮಾನಸಿಕ ರೋಗಿಗಳಲ್ಲಿ ಶೇ.30ರಷ್ಟು ಜನರು ಚಿಕಿತ್ಸೆ ಪಡೆಯುತ್ತಿದ್ದರೆ, ಶೇ.70ರಷ್ಟು ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿಲ್ಲ. ವೈದ್ಯರ ಮಾರ್ಗದರ್ಶನ, ಸಲಹೆ ಪಡೆಯದೆ ಬಳಲುತ್ತಿದ್ದಾರೆ ಎಂದು ವಿವರಿಸಿದರು.
ಪ್ರಸ್ತುತ ಬದಲಾಗುತ್ತಿರುವ ಜೀವನಶೈಲಿಯಿಂದ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮಾನಸಿಕ ಆರೋಗ್ಯ ಹದಗೆಟ್ಟರೆ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಅನೇಕ ರೀತಿಯ ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಹಾಗಾಗಿ ಆದಷ್ಟು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಎಂದರು.
ಮಿಮ್ಸ್‌ನ ಮಾನಸಿಕ ರೋಗಗಳ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ವಿದ್ಯಾ ಮಾತನಾಡಿ, ಮನುಷ್ಯನಿಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮಾನಸಿಕ ಆರೋಗ್ಯವೂ ಅವಶ್ಯಕ. ಉತ್ತಮ ಹವ್ಯಾಸ, ಅಭ್ಯಾಸಗಳು ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿ ಇರಿಸುತ್ತವೆ. ಅತಿಯಾದ ಬೇಸರ, ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸುವುದು, ಒತ್ತಡ ಕೆಲಸಗಳು, ನಿದ್ರಾಹೀನತೆ, ಅನಗತ್ಯ ಚಿಂತೆ, ವಿಪರೀತ ತಲೆನೋವು ಮಾನಸಿಕ ಕಾಯಿಲೆಯಾಗಿ ಪರಿಣಾಮ ಬೀರುತ್ತವೆ. ಸಮತೋಲನ ಆಹಾರ, ನಿದ್ರೆ, ಉಲ್ಲಾಸದಿಂದ ಇರುವುದು. ವ್ಯಾಯಾಮ, ಪ್ರಾಣಾಯಾಮ, ಧ್ಯಾನ, ಓದುವುದು ಇಂತಹ ಹವ್ಯಾಸ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತವೆ. ಆದ್ದರಿಂದ ಇಂತಹ ಅಭ್ಯಾಸವನ್ನು ಜೀವನದಲ್ಲಿ ರೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಸೇವಾಕಿರಣ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಜಿ.ವಿ.ನಾಗರಾಜು, ಅಲಯನ್ಸ್‌ನ ಜಿಲ್ಲಾ ಉಪ ಪ್ರಾಂತಪಾಲ ಶಶಿಧರ ಈಚಗೆರೆ, ಕೃಷಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಮಂಜುನಾಥ, ಜಿಲ್ಲಾ ಸಚಿವ ಸಂಪುಟದ ಕಾರ್ಯದರ್ಶಿ ಚಂದ್ರಶೇಖರ್, ಡಾ.ಶಿವಕುಮಾರ್, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ಗಾಯಕರಾದ ಸಂತೆಕಸಲಗೆರೆ ಬಸವರಾಜು, ಹನಿಯಂಬಾಡಿ ಶೇಖರ್, ಹೊನ್ನೇಶ್, ಆಶ್ರಮದ ರಾಜಣ್ಣ ಇತರರಿದ್ದರು.

Share This Article

Skin Care | ಚಳಿಗಾಲದಲ್ಲಿ ನಿಮ್ಮ ತ್ವಚೆಯು ಹಾಳಾಗದಂತೆ ಎಚ್ಚರವಹಿಸಿ; ಈ ಫೇಸ್​ಪ್ಯಾಕ್ ಟ್ರೈ ಮಾಡಿ ಫಲಿತಾಂಶ ನೀವೇ ನೋಡಿ..

ಚಳಿಗಾಲ ಆರಂಭವಾಯಿತು ಎಂದರೆ ಸಾಕು ತ್ವಚೆಯಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಳ್ಳುವುದನ್ನು ನಾವು ನೊಡಬಹುದು. ಇನ್ನು ಮುಖದ…

ಈ ಆಹಾರ ಪದಾರ್ಥದಲ್ಲಿದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ; Health Tips ನಿಮಗಾಗಿ

ಕ್ಯಾನ್ಸರ್​​ನಂತಹ ಗಂಭೀರ ಕಾಯಿಲೆಯನ್ನು ತಡೆಗಟ್ಟಲು ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.…

ಚಳಿಗಾಲದಲ್ಲಿ ಕೈ&ಕಾಲ್ಬೆರಳುಗಳ ಊತಕ್ಕೆ ಕಾರಣ ಈ ಕಾಯಿಲೆ; ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ… | Health Tips

ಚಳಿಗಾಲದಲ್ಲಿ ನೆಗಡಿ ಮಾತ್ರವಲ್ಲದೆ ಹಲವಾರು ಕಾಯಿಲೆಗಳು ಸಮಸ್ಯೆಯನ್ನು ಹೆಚ್ಚಿಸುತ್ತವೆ. ಅದರಲ್ಲಿ ಚಿಲ್ಬ್ಲೈನ್ಸ್ ರೋಗವು ಒಂದಾಗಿದೆ. ಬಹುಶಃ…