More

    ಕಿವೀಸ್​ ವಿರುದ್ಧ ಗೆಲುವಿನ ಬಳಿಕ ಪಾಕ್​ ಸೆಮೀಸ್​ ಆಸೆಗೆ ಮರುಜೀವ; ಹೀಗಿದೆ ಲೆಕ್ಕಾಚಾರ…

    ಬೆಂಗಳೂರು: ಎಡಗೈ ಆರಂಭಿಕ ಫಖರ್​ ಜಮಾನ್​ ಸ್ಫೋಟಕ ಶತಕ ಮತ್ತು ಮಳೆಯ ನೆರವಿನಿಂದ ಪಾಕಿಸ್ತಾನ ತಂಡ ಏಕದಿನ ವಿಶ್ವಕಪ್​ನಲ್ಲಿ ಹಾಲಿ ರನ್ನರ್​ಅಪ್​ ನ್ಯೂಜಿಲೆಂಡ್​ ತಂಡವನ್ನು ಡಕ್ವರ್ತ್​-ಲೂಯಿಸ್ ನಿಯಮದನ್ವಯ ಸೋಲಿಸಿತು. ಈ ಗೆಲುವಿನಿಂದ ಪಾಕ್​ ಸೆಮೀಸ್​ ಆಸೆಗೆ ಮರುಜೀವ ಬಂದಿದೆ.

    ಭಾರತ ವಿರುದ್ಧದ ಸೋಲಿನ ಬಳಿಕ ಸತತ 4 ಸೋಲಿನೊಂದಿಗೆ ಸೆಮಿಫೈನಲ್​ ಆಸೆಯನ್ನು ಬಹುತೇಕ ಕೈಚೆಲ್ಲಿದ್ದ ಪಾಕಿಸ್ತಾನ ತಂಡ ಇದೀಗ ಸತತ 2ನೇ ಜಯದೊಂದಿಗೆ ಮತ್ತೆ ರೇಸ್​ಗೆ ಬಂದಿದೆ. ಆದರೂ ಈ ಹಾದಿ ಜಟಿಲವಾಗಿಯೇ ಇದೆ.

    ಅಫ್ಘಾನಿಸ್ತಾನ ಮುಂದಿನ ಎರಡೂ ಪಂದ್ಯ ಸೋತು, ನ್ಯೂಜಿಲೆಂಡ್​ ಕೂಡ ಕೊನೇ ಪಂದ್ಯದಲ್ಲಿ ಲಂಕಾ ವಿರುದ್ಧ ಸೋತರೆ ಪಾಕ್​ ಸೆಮಿಫೈನಲ್​ಗೇರಲಿದೆ. ಆದರೆ ಲಂಕಾ ವಿರುದ್ಧ ಕಿವೀಸ್​ 1 ರನ್​ನಿಂದ ಗೆದ್ದರೂ, ಪಾಕ್​ ಕನಿಷ್ಠ 131 ರನ್​ಗಳಿಂದ ಇಂಗ್ಲೆಂಡ್​ ವಿರುದ್ಧದ ಕೊನೇ ಲೀಗ್​ ಪಂದ್ಯದಲ್ಲಿ ಗೆದ್ದರಷ್ಟೇ ಸೆಮೀಸ್​ ಪ್ರವೇಶಿಸಬಹುದು. ರನ್​ರೇಟ್​ ಲೆಕ್ಕಾಚಾರದಲ್ಲಿ ಕಿವೀಸ್​ ಹಿಂದಿಕ್ಕುವುದು ಪಾಕ್​ಗೆ ಕಠಿಣವೆನಿಸಿದೆ. ಆದರೆ ಬೆಂಗಳೂರಿನಲ್ಲಿ ಗುರುವಾರ ನಡೆಯಲಿರುವ ಕಿವೀಸ್​-ಲಂಕಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡು ಉಭಯ ತಂಡಗಳು ಅಂಕ ಹಂಚಿಕೊಂಡರೆ ಆಗ ಪಾಕ್​ ಆಂಗ್ಲರ ಎದುರು ಗೆದ್ದು ಸೆಮೀಸ್​ಗೆ ಏರುವ ಸುಲಭ ಅವಕಾಶ ಪಡೆಯಲಿದೆ.

    ಏಷ್ಯನ್​ ಚಾಂಪಿಯನ್ಸ್​ ಟ್ರೋಫಿ ಹಾಕಿ ಟೂರ್ನಿಯಲ್ಲಿ ಫೈನಲ್​ಗೇರಿದ ಭಾರತದ ಮಹಿಳೆಯರು

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts