ಭಾರತೀಯರಂತೆ ಪಾಕ್​​​ ಅಭಿಮಾನಿಗಳು ಸ್ಮಿತ್​ರನ್ನು ಹೀಯಾಳಿಸುವುದಿಲ್ಲ: ಸರ್ಫರಾಜ್​​​

ಲಂಡನ್​​: ಇಂದು ನಡೆಯುವ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್​​ 17ನೇ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್​​ ಅಭಿಮಾನಿಗಳು ಸ್ಟೀವ್​​ ಸ್ಮಿತ್​​ ಅವರನ್ನು ಹೀಯಾಳಿಸಲ್ಲ ಎಂದು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್​​ ಅಹ್ಮದ್​​​​ ಹೇಳಿದ್ದಾರೆ.

ಈ ಹಿಂದೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಭಾರತ ಅಭಿಮಾನಿಗಳು ಸ್ಮಿತ್​ ಮತ್ತು ವಾರ್ನರ್​​ ಅವರನ್ನು ಕಿಚಾಯಿಸಿದ್ದರು. ಈ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ ಭಾರತೀಯ ಅಭಿಮಾನಿಗಳಿಗೆ ಬುದ್ಧಿ ಹೇಳಿದ್ದರು. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರ್ಫರಾಜ್​​​​​​​ ಪಾಕಿಸ್ತಾನ ಕ್ರಿಕೆಟ್​​ ಅಭಿಮಾನಿಗಳು ವಿಶ್ವದ ಎಲ್ಲ ಕ್ರೀಡಾ ಅಭಿಮಾನಿಗಳನ್ನು ಪ್ರೀತಿಸುತ್ತಾರೆ. ಉತ್ತಮ ಆಟಗಾರರನ್ನು ಬೆಂಬಲಿಸುತ್ತಾರೆ. ಆದರೆ ಬೇರೆಯವರಂತೆ ಹೀಯಾಳಿಸುವುದಿಲ್ಲ ಎಂದು ಹೇಳಿದ್ದಾರೆ.

ಆಸೀಸ್​​ ಎದುರಿನ ಇಂದಿನ ಪಂದ್ಯದಲ್ಲಿ ತಮ್ಮ ತಂಡ ಉತ್ತಮ ಪ್ರದರ್ಶನ ತೋರುವ ಮೂಲಕ ಗೆಲುವು ಸಾಧಿಸಿ ಎರಡು ಅಂಕಗಳನ್ನು ಗಳಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಸ್ಮಿತ್​​ ಬೌಂಡರಿ ಲೈನ್​​ ಬಳಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ವೇಳೆ ಭಾರತೀಯ ಅಭಿಮಾನಿಗಳು ಚೀಟರ್​​​​​​​, ಚೀಟರ್​ ಎಂದು ಕೂಗಿ ಛೇಡಿಸಿದ್ದರು. ಅದನ್ನು ಗಮನಿಸಿದ ಕೊಹ್ಲಿ ಈ ರೀತಿ ವರ್ತಿಸಬೇಡಿ, ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿ ಎಂದು ಸನ್ನೆ ಮಾಡಿದ್ದರು. (ಏಜೆನ್ಸೀಸ್​)

One Reply to “ಭಾರತೀಯರಂತೆ ಪಾಕ್​​​ ಅಭಿಮಾನಿಗಳು ಸ್ಮಿತ್​ರನ್ನು ಹೀಯಾಳಿಸುವುದಿಲ್ಲ: ಸರ್ಫರಾಜ್​​​”

Leave a Reply

Your email address will not be published. Required fields are marked *