ಐಸಿಸಿ ವಿಶ್ವಕಪ್​: ಇಂಗ್ಲೆಂಡ್​​​ ಎದುರು ಪಂದ್ಯ ಸೋತರೂ ದಾಖಲೆ ಸೃಷ್ಟಿಸಿದ ಕ್ರಿಸ್​​ ಗೇಲ್​​​​​

ಸೌಂಥಾಪ್ಟನ್​: ವೆಸ್ಟ್​​​ ಇಂಡೀಸ್​​ ತಂಡದ ಸ್ಫೋಟಕ ಬ್ಯಾಟ್ಸ್​​ಮನ್​​ ಕ್ರಿಸ್​ಗೇಲ್​ ಅವರು ಇಂಗ್ಲೆಂಡ್​ ವಿರುದ್ಧ ಅದ್ಭುತ ಪ್ರದರ್ಶನ ತೋರುವ ಮೂಲಕ ದಾಖಲೆ ಬರೆದಿದ್ದಾರೆ.

ಶುಕ್ರವಾರ ಇಲ್ಲಿನ ದಿ ರೋಸ್​​ ಬೌಲ್​​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​​ ತಂಡ ವೆಸ್ಟ್​​​ ಇಂಡೀಸ್​​​​ ಎದುರು 8 ವಿಕೆಟ್​ಗಳಿಂದ ಸೋತರು ವಿಂಡೀಸ್​ ಆರಂಭಿಕ ಕ್ರಿಸ್​ ಗೇಲ್​ ಅವರು ಉತ್ತಮ ಬ್ಯಾಟಿಂಗ್​ನೊಂದಿಗೆ ಸಾಧನೆ ಮಾಡಿದ್ದಾರೆ.

ಗೇಲ್​ ಎದುರಿಸಿದ 41 ಎಸೆತಗಳಲ್ಲಿ ಒಂದು ಸಿಕ್ಸ್​​ ಹಾಗೂ 5 ಬೌಂಡರಿಗಳೊಂದಿಗೆ 36 ರನ್​ ಗಳಿಸಿ ಔಟಾದರು. ಈ ಮೂಲಕ ಇಂಗ್ಲೆಂಡ್​​ ವಿರುದ್ಧ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್​​ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್​​ಮನ್​​ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಶ್ರೀಲಂಕಾದ ಕುಮಾರ ಸಂಗಾಕ್ಕರ ಮತ್ತು ವಿಂಡೀಸ್​ನ ಮಾಜಿ ಆಟಗಾರ ವಿವಿಯನ್ ರಿಚರ್ಡ್ಸ್​ ಈ ದಾಖಲೆ ಮಾಡಿದ್ದರು.

ಗೇಲ್​​ 1,632 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದರೆ, ಕುಮಾರ ಸಂಗಾಕ್ಕರ 1,625, ವಿವಿಯನ್​ ರಿಚರ್ಡ್ಸ್​ 1,619, ರಿಕಿ ಪಾಂಟಿಂಗ್​​​ 1,598 ಮತ್ತು ಮಹೇಲಾ ಜಯವರ್ಧನೆ 1,562 ಅಂಕಗಳೊಂದಿಗೆ ಎರಡು, ಮೂರು, ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿದ್ದಾರೆ. (ಏಜೇನ್ಸೀಸ್​)

Leave a Reply

Your email address will not be published. Required fields are marked *