ದಿ ಮಿಥಿಕ್ ಸೊಸೈಟಿಯಿಂದ ಫೆ.17ಕ್ಕೆ ಪ್ರಾಚೀನ ಕನ್ನಡ ಲಿಪಿ ಕಲಿಕೆಗೆ ಕಾರ್ಯಾಗಾರ

blank

ಬೆಂಗಳೂರು: ನಗರದ ದಿ ಮಿಥಿಕ್ ಸೊಸೈಟಿಯ ‘ಅಕ್ಷರ ಭಂಡಾರ’ ಸಾಫ್ಟ್‌ವೇರ್ ಬಳಸಿ ಬೋಧಕರಿಗೆ ಪ್ರಾಚೀನ ಕನ್ನಡ ಲಿಪಿಗಳನ್ನು ಕಲಿಸುವ ಉಚಿತ ತರಬೇತಿ ಕಾರ್ಯಾಗಾರ ಭಾನುವಾರ (ಫೆ.17) ನಿಗದಿಯಾಗಿದೆ. ಅಂದು ಬೆಳಿಗ್ಗೆ 9.30ಕ್ಕೆ ಸಂಸ್ಥೆಯ ಶತಮಾನೋತ್ಸವ ಸಭಾಂಗಣದಲ್ಲಿ ಕಾರ್ಯಾಗಾರವನ್ನು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಉದ್ಘಾಟಿಸಲಿದ್ದಾರೆ.

ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದ ವಿದ್ಯಾರ್ಥಿಗಳಿಗೆ ಪ್ರಾಚೀನ ಕನ್ನಡ ಲಿಪಿಗಳನ್ನು ಪರಿಣಾಮಕಾರಿಯಾಗಿ ಕಲಿಸಲು, ಶಿಕ್ಷಕರಿಗೆ ಅವಶ್ಯಕವಾದ ಜ್ಞಾನ ಮತ್ತು ಕೌಶಲ ಒದಗಿಸಲಾಗುತ್ತದೆ. ಇತ್ತೀಚಿಗೆ ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ಈ ಸಾಫ್ಟ್​​​ವೇರ್ ಬಗ್ಗೆ ಹಲವರಿಂದ ಕಲಿಕೆಗೆ ಇಚ್ಛೆ ವ್ಯಕ್ತವಾಗುತ್ತಿದೆ. ಜತೆಗೆ ಪ್ರಪಂಚದಾದ್ಯಂತ ಕಡಿಮೆ ಅವಧಿಯಲ್ಲೇ ಹೆಚ್ಚು ಬಳಕೆದಾರರನ್ನು ಸಂಪಾದಿಸಿದೆ. 5ರಿಂದ 17ನೇ ಶತಮಾನದವರೆಗಿನ 30,000ಕ್ಕೂ ಹೆಚ್ಚು ಪ್ರಾಚೀನ ಕನ್ನಡ ಅಕ್ಷರಗಳ ಡಿಜಿಟಲ್ ದತ್ತಾಂಶ ಈ ಸಾಫ್ಟ್‌ವೇರ್‌ನಲ್ಲಿದೆ.

ಈಗಾಗಲೇ 100ಕ್ಕೂ ಹೆಚ್ಚು ಶಿಕ್ಷಕರು ಹೆಸರು ನೋಂದಾಯಿಸಿಕೊಂಡಿದ್ದು, ಕೆಲವೇ ಸೀಟು ಮಾತ್ರ ಲಭ್ಯವಿವೆ (ಒಟ್ಟು – 125 ಸೀಟುಗಳು) ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

Share This Article

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips

Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…