ಹುಬ್ಬಳ್ಳಿ: ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಲಕ್ಷ ಅಕಾಡೆಮಿ ವತಿಯಿಂದ ಎಸ್ಎಸ್ಎಲ್ಸಿ ವಿಜ್ಞಾನ ಹಾಗೂ ಗಣಿತ ವಿಷಯದ ಕುರಿತು ವಿಶೇಷ ಹಾಗೂ ಉಚಿತ ಉಪನ್ಯಾಸ ಕಾರ್ಯಾಗಾರವನ್ನು ಇಲ್ಲಿಯ ಉಣಕಲ್ಲ ಆರ್.ಕೆ. ಕೊಕಾಟೆ ಪ್ರೌಢಶಾಲೆಯಲ್ಲಿ ಜ. 17ರಂದು ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಕೊಕಾಟೆ ಪ್ರೌಢಶಾಲೆ ಪರೀಕ್ಷೆ ಕೇಂದ್ರಕ್ಕೆ ಟ್ಯಾಗ್ ಮಾಡಿರುವ 10ನೇ ತರಗತಿ ವಿದ್ಯಾರ್ಥಿಗಳು ಕಾರ್ಯಾಗಾರಕ್ಕೆ ಹಾಜರಾಗಲು ಸಂಬಂಧಪಟ್ಟ ಶಾಲೆ ಮುಖ್ಯ ಶಿಕ್ಷಕರು ಕ್ರಮ ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚಿಸಿದ್ದಾರೆ.
ಲಕ್ಷ ಅಕಾಡೆಮಿಯ ಲಕ್ಷ್ಮೀ ಹಿರೇಮಠ ಅವರು ಕಾರ್ಯಾಗಾರ ನಿರ್ವಹಣೆ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.