More

  ಅಭ್ಯರ್ಥಿ ಗೆಲುವಿಗೆ ಒಟ್ಟಾಗಿ ಶ್ರಮಿಸಿ

  ವಿಜಯವಾಣಿ ಸುದ್ದಿಜಾಲ ಧಾರವಾಡ
  ದೇಶ ಇನ್ನಷ್ಟು ಅಭಿವೃದ್ಧಿ ಕಾಣಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು. ಹೀಗಾಗಿ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಬಿಜೆಪಿ ಅಭ್ಯಥಿರ್ ಪ್ರಲ್ಹಾದ ಜೋಶಿ ಗೆಲುವಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಜೆಡಿಎಸ್​ ಹು&-ಧಾ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಕಾರ್ಯಕರ್ತರಿಗೆ ಕರೆ ನೀಡಿದರು.
  ನಗರದ ಭಗಿನಿ ಸಮಾಜ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಜೆಡಿಎಸ್​&-ಬಿಜೆಪಿ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಕಂಡಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಮೋದಿ ಮತ್ತೆ ಪ್ರಧಾನಿ ಆಗಬೇಕಿದೆ. ಹೀಗಾಗಿ ಅವರ ಕೈ ಬಲಪಡಿಸಲು ಪ್ರಲ್ಹಾದ ಜೋಶಿ ಅವರನ್ನು ಗೆಲ್ಲಿಸಬೇಕು ಎಂದರು.
  ಮಾಜಿ ಮೇಯರ್​ ಈರೇಶ ಅಂಚಟಗೇರಿ ಮಾತನಾಡಿ, ಏ.15ರಂದು ಪ್ರಲ್ಹಾದ ಜೋಶಿ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಬೇಕು. ಅಂದು ಶಿವಾಜಿ ಮಹಾರಾಜ್​ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿದ ಬಳಿಕ ಮೆರವಣಿಗೆ ಆರಂಭವಾಗಲಿದೆ. ಜೆಡಿಎಸ್​&-ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಿದರೆ, ಪ್ರಲ್ಹಾದ ಜೋಶಿ ಸುಮಾರು 4 ಲಕ್ಷ ಮತಗಳ ಅಂತರದ ಗೆಲುವು ದಾಖಲಿಸಲಿದ್ದಾರೆ ಎಂದರು.
  ರ್ಪೂಣಿಮಾ ಸವದತ್ತಿ, ಕಾಂಗ್ರೆಸ್​ ಅಧಿಕಾರದ ಗದ್ದುಗೆ ಏರಿಲು ಗ್ಯಾರಂಟಿ ಮೂಲಕ ಹೆಣ್ಣು ಮಕ್ಕಳನ್ನು ಖರೀದಿಸಿದೆ. ಗ್ಯಾರಂಟಿ ಜನರ ಜೀವಕ್ಕೆ ಮಾರಕವಾಗಿವೆ. ಹೀಗಾಗಿ ಗ್ಯಾರಂಟಿಗೆ ತಕ್ಕ ಉತ್ತರ ನೀಡುವ ಸಮಯ ಇದೀಗ ಬಂದಿದೆ. ಮಹಿಳೆಯರು ಈ ಬಾರಿ ಪ್ರಲ್ಹಾದ ಜೋಶಿ ಅವರಿಗೆ ಬೆಂಬಲ ನೀಡುವ ಮೂಲಕ ಅವರ ಗೆಲುವಿಗೆ ಶ್ರಮಿಸಬೇಕು ಎಂದರು.
  ಜೆಡಿಎಸ್​ ಮಹಿಳಾ ಟಕದ ಅಧ್ಯಕ್ಷೆ ರೇಖಾ ನಾಯ್ಕರ್​, ಬಿಜೆಪಿ ಮುಖಂಡ ಮೋಹನ ರಾಮದುರ್ಗ ಮಾತನಾಡಿದರು. ಮಾಜಿ ಶಾಸಕ ಕೆ.ಎನ್​.ಗಡ್ಡಿ, ಜೆಡಿಎಸ್​ ಗ್ರಾಮೀಣಾಧ್ಯಕ್ಷ ಗಂಗಾಧರ ಮಠ, ಮಂಜುನಾಥ ಹೆಗೇದಾರ, ಮಾರುತಿ ಹಿಂಡಸಗೇರಿ, ಸೈಯದ್​ ನದಾಫ್​, ಸಿದ್ದಣ್ಣ, ಗೌಸಸಾಬ್​ ನದಾಫ್​, ಚಿದಂಬರ ನಾಡಗೌಡ, ನವೀನ ಮಡಿವಾಳ, ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts