ಮುದಗಲ್: ಕೆಕೆಆರ್‌ಡಿಬಿ ಅನುದಾನದಡಿ ನಾಗಲಾಪುರ ಗ್ರಾಪಂ ವ್ಯಾಪ್ತಿ ಹಾಗೂ ಮುದಗಲ್ ಪಟ್ಟಣದ ವಾರ್ಡ್ ನಂ.19,20ರಲ್ಲಿ ವಿವಿಧ ಕಾಮಗಾರಿಗಳಿಗೆ ಲಿಂಗಸುಗೂರು ಶಾಸಕ ಡಿ.ಮಾನಪ್ಪ ವಜ್ಜಲ್ ಭಾನುವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ವಜ್ಜಲ್ ಮಾತನಾಡಿ, ಕೆಕೆಆರ್‌ಡಿಬಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಾಗಲಾಪುರದಲ್ಲಿ 25 ಲಕ್ಷ ರೂ. ವೆಚ್ಚದ ಗ್ರಂಥಾಲಯ ನಿರ್ಮಾಣ, ಗೊಲ್ಲರಹಟ್ಟಿ, ತೊಡಕಿ, ಕುಮಾರಖೇಡ, ಛತ್ತರ, ರಾಮಜಿನಾಯ್ಕ ತಾಂಡಾ, ಛತ್ತರ ತಾಂಡಾ ಮತ್ತು ಹೆಗ್ಗಾಪುರ ತಾಂಡಾದ ಎಸ್ಸಿ-ಎಸ್ಟಿ ಕಾಲನಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲಾಗುವುದು.
ಪಟ್ಟಣದ ವಾರ್ಡ್ ನಂ.19 ಮತ್ತು 20ರಲ್ಲಿ ಕೆಕೆಆರ್‌ಡಿಬಿಯ ಮೈಕ್ರೋ ಅನುದಾನದಲ್ಲಿ 45.54 ಲಕ್ಷ ರೂ. ಮೊತ್ತದಲ್ಲಿ
ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲಾಗುವುದು ಎಂದ ಅವರು, ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳು, ಗುತ್ತಿಗೆದಾರರಿಗೆ ಸೂಚಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವೀರನಗೌಡ ಲೆಕ್ಕಿಹಾಳ, ಮುದಗಲ್ ಮಂಡಲ ಅಧ್ಯಕ್ಷ ಹುಲ್ಲೇಶ ಸಾಹುಕಾರ, ನಾಗಲಾಪುರ ಗ್ರಾಪಂ ಅಧ್ಯಕ್ಷ ಮೇಘಾನಾಯ್ಕ, ನಗರ ಘಟಕ ಅಧ್ಯಕ್ಷ ಕರಿಯಪ್ಪ ಯಾದವ, ಪ್ರಮುಖರಾದ ನಾಗಭೂಷಣ ಲಿಂಗಸುಗೂರು, ಜೀವಲೆಪ್ಪ ನಾಯ್ಕ, ಮಂಜುನಾಥ ನಂದವಾಡಗಿ ಇತರರಿದ್ದರು.