ಕಾನಹೊಸಹಳ್ಳಿ: ಬಡಜನರ ಸ್ವಾವಲಂಬಿ ಬದುಕಿಗೆ ನರೇಗಾ ನೆರವಾಗಿದ್ದು, ಕ್ರಿಯಾಯೋಜನೆ ರೂಪಿಸಲು ಸರ್ವಸದಸ್ಯರು ಕೈಜೋಡಿಸಬೇಕೆಂದು ಪಿಡಿಒ ಕೆಂಚಪ್ಪ ಹೇಳಿದರು.
ಇದನ್ನೂ ಓದಿ: ನರೇಗಾ ಅನುದಾನದಲ್ಲಿ ಅಭಿವೃದ್ಧಿಗೆ ಯೋಜನೆ
ಸಮೀಪದ ನೆಲಬೊಮ್ಮನಹಳ್ಳಿಯಲ್ಲಿ ಗುಂಡುಮುಣುಗು ಗ್ರಾಪಂ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಶುಕ್ರವಾರ ಮಾತನಾಡಿದರು. 2025-26ನೇ ಸಾಲಿನ ನರೇಗಾ ಯೋಜನೆಯ ಕ್ರಿಯಾಯೋಜನೆ ರೂಪಿಸುವ ಮತ್ತು ಮಾಡಬೇಕಿರುವ ಕಾಮಗಾರಿ ಪಟ್ಟಿ ನೀಡುವಂತೆ ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ.
ಅಲ್ಲದೆ, ಗುಂಪು ಕಾಮಗಾರಿ ಮತ್ತು ವೈಯಕ್ತಿಕ ಹಾಗೂ ಶಾಲಾ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಗರ ಪ್ರದೇಶಕ್ಕೆ ಕೂಲಿ ಕೆಲಸಕ್ಕೆ ಹೋಗುವ ಬದಲಾಗಿ ನರೇಗಾದಲ್ಲಿ ಕೆಲಸ ಮಾಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಗ್ರಾಪಂ ಎಲ್ಲ ಸದಸ್ಯರು ಗ್ರಾಮದಲ್ಲಿ ಅಗಬೇಕಿರುವ ಕಾಮಗಾರಿ ಹೆಸರಿನೊಂದಿಗೆ ಪಟ್ಟಿ ನೀಡುವಂತೆ ಮನವಿ ಮಾಡಿದರು.
ಗುಂಡುಮುಣುಗು ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಅಂಜಿನಪ್ಪ, ಸದಸ್ಯರಾದ ಜೀವಪ್ರಕಾಶ್, ಸಾರಪ್ಪ, ಮಂಜುನಾಥ, ರವಿಕುಮಾರ್, ಮಾರಕ್ಕ, ಸಿಬ್ಬಂದಿ ಚಿತ್ತರಂಜನ್, ತಿಪ್ಪೇಸ್ವಾಮಿ, ವಿಜಯಕುಮಾರ್, ತಿಪ್ಪೇಶಿ, ಚಂದ್ರಪ್ಪ ಇತರರಿದ್ದರು.