21 C
Bengaluru
Thursday, January 23, 2020

ನೌಕಾಪಡೆಯಲ್ಲಿ ನೌಕರಿ; ಸೃಷ್ಟಿಯಾಗುತ್ತಿವೆ ಸಾವಿರಾರು ಉದ್ಯೋಗವಕಾಶಗಳು

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ನಮ್ಮ ದೇಶದ ರಕ್ಷಣೆಗಾಗಿ ನೌಕಾಪಡೆ ಇರುವಂತೆ, ಅಮದು- ರಫ್ತು ಸರಕು ಸಾಗಾಣಿಕೆ ಮತ್ತು ಪ್ರವಾಸಕ್ಕಾಗಿ ಮರ್ಚೆಂಟ್ ನೇವಿ ಬಳಸಲಾಗುತ್ತದೆ. ಈ ಎರಡೂ ಕ್ಷೇತ್ರಗಳಲ್ಲಿ ಸಾಮರ್ಥ್ಯವೃದ್ಧಿಗಾಗಿ ಭಾರತ ಸರ್ಕಾರ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದು, ನೇರವಾಗಿ ಮತ್ತು ಪರೋಕ್ಷವಾಗಿ ಸಾವಿರಾರು ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿವೆ.

ಭಾರತೀಯ ನೌಕಾಪಡೆ ಜಗತ್ತಿನ ಮೊದಲ ನೌಕಾಪಡೆ ಎಂಬ ಖ್ಯಾತಿಗೆ ಹೊಂದಿದೆ. ನೌಕೆ ನಿರ್ವಹಣೆಗೆ ಜಗತ್ತಿನಲ್ಲಿ ಒಂದು ಸಾವಿರ ವರ್ಷದ ಇತಿಹಾಸವಿದ್ದರೂ, ಭಾರತದಲ್ಲಿ ಏಳೂವರೆ ಸಾವಿರ ವರ್ಷಗಳ ಹಿಂದೆಯೇ ನೌಕೆಗಳ ನಿರ್ವಹಣೆ ಇತ್ತು ಎಂದು ದಾಖಲೆಗಳು ಹೇಳುತ್ತವೆ. ಜಗತ್ತಿನ ಹತ್ತು ಪ್ರಮುಖ ನೌಕಾಪಡೆಯಲ್ಲಿ ಭಾರತೀಯ ನೌಕಾಪಡೆಯೂ ಒಂದು ಎಂಬ ಹೆಮ್ಮೆ ನಮ್ಮದು.

ಭಾರತೀಯ ರಕ್ಷಣಾ ಪಡೆಗಳಲ್ಲಿ ಸುಮಾರು 55 ಸಾವಿರ ಜನರು ಕಾರ್ಯನಿರತರಾಗಿದ್ದು, ಅದರ ಅಂಗವಾಗಿರುವ ನೌಕಾಪಡೆಯಲ್ಲಿ ಸುಮಾರು 5 ಸಾವಿರ ಮಂದಿ ನೌಕಾ ವಾಯುಪಡೆಗೆ ಸೇರಿದವರಾಗಿದ್ದರೆ, ಸುಮಾರು 2 ಸಾವಿರ ಜನ ನೌಕಾ ಕಮಾಂಡೋಗಳಾಗಿದ್ದಾರೆ.

ಭಾರತದ ಕಡಲ ಗಡಿಗಳನ್ನು ಯಶಸ್ವಿಯಾಗಿ ರಕ್ಷಣೆ ಮಾಡುತ್ತಿರುವ ನಮ್ಮ ನೌಕಾಪಡೆಯಲ್ಲಿ, 10ನೇ ತರಗತಿ ಪಾಸಾದವರಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣ ಪಡೆದವರವರೆಗೂ ಉದ್ಯೋಗಗಳು ಲಭ್ಯವಿದೆ.

ಭಾರತಕ್ಕೆ ಸುಮಾರು 7,500 ಕಿ.ಮೀ ಕರಾವಳಿ ಪ್ರದೇಶವಿದ್ದರೆ, 20 ಲಕ್ಷ ಚದರ ಕಿ.ಮೀಗಳಿಗಿಂತ ಹೆಚ್ಚು ವಿಶೇಷ ಆರ್ಥಿಕ ವಲಯವಿದೆ. ಇದಲ್ಲದೆ ಸಾವಿರಾರು ದ್ವೀಪಗಳು, ಅಗಾಧ ಸಾಗರ ಸಂಪತ್ತನ್ನು ಭಾರತ ಹೊಂದಿದೆ. ಭಾರತದಲ್ಲಿ 12 ಪ್ರಮುಖ ಬಂದರು ಮತ್ತು 200 ಎರಡನೆಯ ಹಂತದ ಬಂದರುಗಳಿವೆ. ಭಾರತದ ಒಟ್ಟು ರಫ್ತು, ಆಮದು ವ್ಯವಹಾರದಲ್ಲಿ ಶೇಕಡಾ 97ಕ್ಕೂ ಹೆಚ್ಚು ನಡೆಯುವುದು ಸಮುದ್ರದ ಮೂಲಕವೇ ಆಗಿದೆ. ಇವೆಲ್ಲದರ ರಕ್ಷಣೆಯ ಜತೆಗೆ ಪ್ರಕೃತಿ ವಿಕೋಪದ ಸಮಯದಲ್ಲಿ ನೆರವು ನೀಡಲು ನೌಕಾಪಡೆಯ ಬಳಕೆಯಾಗುತ್ತದೆ. ಅತ್ಯಾಧುನಿಕ ಯುದ್ಧ ನೌಕೆಗಳು, ವಿಮಾನವಾಹಕ ಯುದ್ಧನೌಕೆಗಳು, ಜಲಾಂತರ್ಗಾಮಿಗಳು, ವಿಮಾನ ಮತ್ತು ಹೆಲಿಕಾಪ್ಟರ್​ಗಳು, ಕ್ಷಿಪಣಿಗಳು, ಹೀಗೆ ಸರ್ವಸನ್ನದ್ಧವಾಗಿ ವಾಯು ಮಾರ್ಗ, ಸಮುದ್ರ ಮಾರ್ಗ ಮತ್ತು ಸಮುದ್ರದಾಳದೊಳಗಿನಿಂದ ದೇಶದ ರಕ್ಷಣೆ ಮಾಡುವ ಸಾಮರ್ಥ್ಯ ಹೊಂದಿರುವ ವಿಶ್ವದ ಕೆಲವೇ ನೌಕಾಪಡೆಗಳಲ್ಲಿ ಭಾರತವೂ ಒಂದಾಗಿದೆ.

ಭಾರತದ ರಾಷ್ಟ್ರಪತಿಗಳು ಸವೋಚ್ಚ ದಂಡನಾಯಕರಾಗಿರುವ ಭಾರತದ ನೌಕಾಪಡೆ, ಆಡಳಿತ ದೃಷ್ಟಿಯಿಂದ ಮೂರು ನೌಕಾ ಕಮಾಂಡ್​ಗಳಾಗಿ ಕೆಲಸ ಮಾಡುತ್ತದೆ. ಮುಂಬೈನಲ್ಲಿರುವ ಪಶ್ಚಿಮ ನೌಕಾ ಕಮಾಂಡ್, ವಿಶಾಖಪಟ್ಟಣದಲ್ಲಿರುವ ಪೂರ್ವ ನೌಕಾ ಕಮಾಂಡ್​ಗಳು ನೌಕಾಪಡೆಯ ಕಾರ್ಯಾಚರಣೆಗಾಗಿ ಮೀಸಲಾದರೆ, ಕೊಚ್ಚಿಯಲ್ಲಿರುವ ದಕ್ಷಿಣ ನೌಕಾ ಕಮಾಂಡ್​ನಲ್ಲಿ ನೌಕಾಪಡೆಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕರ್ನಾಟಕದ ಕಾರವಾರ ಸೇರಿದಂತೆ ಗೋವಾ, ಮುಂಬೈ, ಕೊಚ್ಚಿ, ಚೆನೈ, ಕೋಲ್ಕತ್ತ ಮತ್ತು ಪೋರ್ಟ್​ಬ್ಲೇರ್​ನಲ್ಲಿ ನೌಕಾನೆಲೆಗಳನ್ನು ಸ್ಥಾಪಿಸಲಾಗಿದೆ. ಇದಲ್ಲದೆ ವಿವಿಧ ಕಡೆ ನೌಕಾಪಡೆಯ ಸ್ಥಳೀಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕೇರಳದ ಎಜಿಮಲಾದಲ್ಲಿರುವ ಭಾರತೀಯ ನೌಕಾಪಡೆಯ ಅಕಾಡೆಮಿಯಲ್ಲಿ (ಐಎನ್​ಎ) ನೌಕಾಪಡೆಯ ಅಧಿಕಾರಿ ಸ್ಥಾನಗಳಿಗೆ ಆಯ್ಕೆಯಾದವರಿಗೆ ತರಬೇತಿ ನೀಡಲಾಗುತ್ತದೆ. 4 ವರ್ಷ ಇಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು, ನಂತರ ಅವರು ಕೆಲಸ ಮಾಡುವ ಸ್ಥಳದಲ್ಲಿ ಹೆಚ್ಚಿನ ತರಬೇತಿಯನ್ನು ಪಡೆಯುತ್ತಾರೆ.

1992ರವರೆಗೆ ನೌಕಾಪಡೆಯಲ್ಲಿ ವೈದಕೀಯ ಸೇವೆಗಳಿಗೆ ಮಾತ್ರ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಈಗ ಅಧಿಕಾರಿ ಹುದ್ದೆಗೆ ಸೂಕ್ತ ಅರ್ಹತೆ ಹೊಂದಿರುವ ಬಿಕಾಂ, ಬಿಎಸ್ಸಿ, ಎಂಬಿಎ, ಬಿಇ, ಎಂಸಿಎ, ಎಂಎಸ್ಸಿ, ಬಿಎ ಹೀಗೆ ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಹೊಂದಿರುವ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಭಾರತೀಯ ನೌಕಾಪಡೆಯ ಯುದ್ಧವಿಮಾನಗಳ ಹೊರತಾದ ವಿಮಾನಗಳ ಪೈಲಟ್ ಹುದ್ದೆಗಳಿಗೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ನೌಕಾಪಡೆಯ ಇಂತಹ ವಿಮಾನಗಳ ಮೊದಲ ಮಹಿಳಾ ಪೈಲಟ್ ಆಗಿಶಿವಾಂಗಿಯವರು 2019ರ ಡಿಸೆಂಬರ್ 2ರಂದು ನೌಕಾಪಡೆಯನ್ನು ಸೇರಿದ್ದಾರೆ. ಇದೇ ವರ್ಷ ಭಾರತದ ವಾಯುಪಡೆಯ ಯುದ್ಧವಿಮಾನಗಳ ಪ್ರಥಮ ಮಹಿಳಾ ಪೈಲಟ್ ಆಗಿ ಫೈಟ್ ಭಾವನಾ ಕಾಂತ್ ತಮ್ಮ ಕೆಲಸವಾರಂಭಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ನೌಕಾಪಡೆಯಲ್ಲಿ ನಾವಿಕರಾಗಿ ಆಯ್ಕೆಯಾದವರಿಗೆ ಒಡಿಶಾ ರಾಜ್ಯದ ಚಿಲ್ಕಾದಲ್ಲಿರುವ ಐಎನ್​ಎಸ್ ಚಿಲ್ಕಾ ಹೆಸರಿನ ಯುದ್ಧನೌಕೆಯಲ್ಲಿ ಮೊದಲನೆಯ ಹಂತದ ತರಬೇತಿ ನೀಡಲಾಗುತ್ತದೆ. ವರ್ಷದಲ್ಲಿ ಎರಡು ಬಾರಿಯಂತೆ, ಒಟ್ಟು 4500 ಅಭ್ಯರ್ಥಿಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಇಲ್ಲಿ ತರಬೇತಿ ಪಡೆದ ನಂತರ ಅವರು ಕೆಲಸ ಮಾಡುವ ಸ್ಥಳದಲ್ಲಿ ಹೆಚ್ಚಿನ ತರಬೇತಿಯನ್ನು ನೀಡಲಾಗುತ್ತದೆ.

ಪಿಯುಸಿ ( ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಬಯಾಲಜಿ ಅಥವಾ ಕಂಪ್ಯೂಟರ್ ಸೈನ್ಸ್) ನಲ್ಲಿ ಶೇಕಡಾ 60ರಷ್ಟು ಅಂಕಗಳಿಸಿರುವ, 17ರಿಂದ 20 ವರ್ಷದೊಳಗಿನ ಪುರುಷ ಅಭ್ಯರ್ಥಿಗಳು ನಾವಿಕ (ಅಪ್ರೆಂಟಿಸ್) ಎಂದು 9 ವಾರಗಳ ತಾಂತ್ರಿಕ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿಯಲ್ಲಿ ಆಯ್ಕೆಯಾದವರಿಗೆ ನೌಕಾಪಡೆಯಲ್ಲಿ ಕೆಲಸ ನೀಡಲಾಗುತ್ತದೆ.

ಪಿಯುಸಿ ಮತ್ತು ಮೇಲ್ಕಂಡ ವಿದ್ಯಾರ್ಹತೆ ಹಾಗೂ ವಯೋಮಾನದ ಅಭ್ಯರ್ಥಿಗಳು ನೌಕಾಪಡೆಯಲ್ಲಿ ನಾವಿಕ-ಎಸ್​ಎಸ್​ಆರ್ ಹುದ್ದೆಗೆ ಕೂಡ ಪ್ರಯತ್ನಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ 22 ವಾರಗಳು ಮೊದಲ ಹಂತದ ತರಬೇತಿ ಮತ್ತು ನಂತರ ಹೆಚ್ಚುವರಿ ತಾಂತ್ರಿಕ ತರಬೇತಿಯನ್ನು ನೀಡಲಾಗುತ್ತದೆ.

10ನೇ ತರಗತಿ ತೇರ್ಗಡೆಯಾಗಿದ್ದು 17ರಿಂದ 20ವರ್ಷಗಳ ವಯೋಮಿತಿಯೊಳಗಿನ ಪುರುಷ ಅಭ್ಯರ್ಥಿಗಳು, ಅಡುಗೆಯವರು (ವೆಜ್ ಮತ್ತು ನಾನ್​ವೆಜ್), ಸ್ವೀವಾರ್ಡ ಹಾಗೂ ಸ್ವಚ್ಛತಾ ಸಿಬ್ಬಂದಿಯ ಕೆಲಸಗಳಿಗೆ ಪ್ರಯತ್ನಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ 14 ವಾರಗಳ ಮೊದಲ ಹಂತದ ತರಬೇತಿ, ಬಂದೂಕು ಬಳಸುವ ತರಬೇತಿ ಹಾಗೂ ಅವರ ವೃತ್ತಿಯಲ್ಲಿ ಹೆಚ್ಚುವರಿ ತರಬೇತಿಯನ್ನು ನೀಡಲಾಗುತ್ತದೆ.

ಈ ಹುದ್ದೆಗಳಲ್ಲದೆ, ನೌಕಾಪಡೆಯ ಸ್ಥಳೀಯ ಕೇಂದ್ರಗಳ ಅಗತ್ಯಕ್ಕೆ ತಕ್ಕಂತೆ ಸಿವಿಲಿಯನ್ ಹುದ್ದೆಗಳು (ವಾಹನ ಚಾಲಕ, ಅಗ್ನಿಶಾಮಕ ಸಿಬ್ಬಂದಿ, ಮೆಕ್ಯಾನಿಕ್, ದಿನಗೂಲಿ ನೌಕರ, ಇತ್ಯಾದಿ) ನೇಮಕ ನಡೆಯುತ್ತದೆ. ಈ ಕುರಿತು ನೌಕಾಪಡೆಯ ನೇಮಕಾತಿ ಕೇಂದ್ರಗಳಿಂದ ಮಾಹಿತಿ ಪಡೆಯಬಹುದು.

ಮರ್ಚೆಂಟ್ ನೇವಿ: ಮರ್ಚೆಂಟ್ ನೇವಿಯಲ್ಲಿರುವ ಭಾರತದ ನೌಕಾಯಾನ ಸಂಸ್ಥೆಗಳು ಮತ್ತು ವಿದೇಶಿ ನೌಕಾಯಾನ ಸಂಸ್ಥೆಗಳಲ್ಲಿ ನಾವಿಕ ಮತ್ತು ಅಧಿಕಾರಿ ಹುದ್ದೆಗಳಿಗೆ 10ನೆ ತರಗತಿಯಿಂದ ಸ್ನಾತಕ್ಕೋತ್ತರ ಪದವಿ ಪಡೆದವರ ತನಕ ಅವಕಾಶಗಳಿವೆ. ಸಾಮಾನ್ಯವಾಗಿ ಪುರಷರಿಗೆ ಮೀಸಲಾಗಿರುವ ಈ ಹುದ್ದೆಗಳಿಗೆ ಅಗತ್ಯವಾದ ಕನಿಷ್ಠ ವಿದ್ಯಾರ್ಹತೆ ಮತ್ತು ಅನುಭವವನ್ನು ಇಂತಹ ಸಂಸ್ಥೆಗಳ ಜಾಲತಾಣಗಳಲ್ಲಿ ನೋಡಬಹುದು. ತಮ್ಮ ಕುಟುಂಬ, ಪರಿವಾರದವರಿಂದ ದೂರವಾಗಿ ಹಲವು ತಿಂಗಳ ಕಾಲ ನೌಕೆಯಲ್ಲಿ ಪ್ರಯಾಣ ಮಾಡುವುದು ಅಧಿಕಾರಿ ಮತ್ತು ನಾವಿಕರಿಗೆ ಅಗತ್ಯವಿರುತ್ತದೆ. ದೇಶ ವಿದೇಶಗಳಲ್ಲಿ ಪ್ರಯಾಣ ಮಾಡಬಹುದು ಮತ್ತು ಉತ್ತಮ ಸಂಬಳ ಹಾಗೂ ಸೌಲಭ್ಯಗಳನ್ನು ಪಡೆಯಬಹುದು ಎಂದು ಹೆಚ್ಚು ಜನ ಯುವಕರು ಮರ್ಚೆಂಟ್ ನೇವಿ ಸೇರಲು ಮುಂದಾಗುತ್ತಿದ್ದಾರೆ. ಹೆಚ್ಚು ಜನ ಭಾರತೀಯರಿಗೆ ಇಂತಹ ಉದ್ಯೋಗವಕಾಶಗಳು ದೊರೆಯಲಿ ಎಂದು ಕೇಂದ್ರ ಸರ್ಕಾರ ನಾವಿಕ ಹುದ್ದೆಗಳಿಗೆ ಬೇಕಾದ ಸರ್ಟಿಫಿಕೇಟ್ ಪಡೆಯುವ ನಿಯಮಗಳನ್ನು ಸರಳಗೊಳಿಸಿದೆ ಮತ್ತು ಭಾರತದಲ್ಲಿ ಹೆಚ್ಚು ತರಬೇತಿ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಂಡಿದೆ. ನಾವಿಕರಿಗೆ ತರಬೇತಿ ನೀಡುವ ಖಾಸಗಿ ಸಂಸ್ಥೆಗಳು, ಕಡ್ಡಾಯವಾಗಿ ನೌಕೆಯಲ್ಲಿ ತರಬೇತಿ ನೀಡುವಂತೆ ಆದೇಶವನ್ನು ಇವರು ಹೊರಡಿಸಿರುವುದರಿಂದ, ಉತ್ತಮ ಗುಣಮಟ್ಟದ ತರಬೇತಿಯನ್ನು ಅಭ್ಯರ್ಥಿಗಳು ಪಡೆಯಲು ಸಾಧ್ಯವಾಗುತ್ತಿದೆ.

ನೇವಿ ಡೇ ಏಕೆ?

1971ರ ವೇಳೆ ಪೂರ್ವ ಪಾಕಿಸ್ತಾನಿಯರನ್ನು ಪಾಕಿಸ್ತಾನ ಹೊರಹಾಕಿದ ಸಂದರ್ಭದಲ್ಲಿ ನಿರಾಶ್ರಿಯರು ಭಾರತದ ಮೊರೆ ಹೋಗಿದ್ದರು. ಲಕ್ಷಾಂತರ ನಿರಾಶ್ರಿತರು ಭಾರತಕ್ಕೆ ಹೊರೆಯಾಗಿದ್ದರು. ಆದ್ದರಿಂದ ಅನಿವಾರ್ಯವಾಗಿ ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲೇಬೇಕಾಯಿತು. ಈ ವೇಳೆ 1991ರ ಡಿ.4ರಂದು ಪಾಕಿಸ್ತಾನವನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅಂದಿನಿಂದ ಪ್ರತಿವರ್ಷ ಡಿ.4ನ್ನು ನೌಕಾದಿನವನ್ನಾಗಿ ಆಚರಿಸಲಾಗುತ್ತಿದೆ.

ಸಂದರ್ಶನ ಹೇಗೆ?

ನೌಕಾಪಡೆಗೆ ಅಧಿಕಾರಿ ಹುದ್ದೆಗಳಿಗೆ ಆಯ್ಕೆ ಕುರಿತು ಎಂಪ್ಲಾಯಿಮೆಂಟ್ ನ್ಯೂಸ್ ಮತ್ತು ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹಿರಾತು ನೀಡಲಾಗುತ್ತದೆ. ಎನ್​ಡಿಎ (ನೌಕಾಪಡೆ) ಮತ್ತು ನೌಕಾಪಡೆಯ ಅಕಾಡೆಮಿ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಯುಪಿಎಸ್​ಸಿಯಿಂದ ಪರೀಕ್ಷೆ ಮತ್ತು ಎಸ್​ಎಸ್​ಬಿ(ನೌಕಾಪಡೆ)ಯಿಂದ ಸಂದರ್ಶನ ಮಾಡಲಾಗುತ್ತದೆ. ಸಿಡಿಎಸ್​ಇ ಪರೀಕ್ಷೆಯ ಅಭ್ಯರ್ಥಿಗಳಿಗೆ ಯುಪಿಎಸ್​ಸಿಯಿಂದ ಪರೀಕ್ಷೆ ಮತ್ತು ಎಸ್​ಎಸ್​ಬಿ (ನೌಕಾಪಡೆ)ಯಿಂದ ಸಂದರ್ಶನ ಮತ್ತು ವೈದಕೀಯ ಪರೀಕ್ಷೆ ಮಾಡಲಾಗುತ್ತದೆ. ಬಿ.ಇ ಅಥವಾ ಬಿ.ಟೆಕ್ ಪದವಿಯ ಜತೆಗೆ ಎನ್​ಸಿಸಿಯ ನೌಕಾಪಡೆಯ ಸೀನಿಯರ್ ವಿಭಾಗದ ಎನ್​ಸಿಸಿ ಸಿ ಸರ್ಟಿಫಿಕೇಟ್ ಹೊಂದಿರುವವರಿಗೆ ನೇರವಾಗಿ ಎಸ್​ಎಸ್​ಬಿ (ನೌಕಾಪಡೆ) ಸಂದರ್ಶನ ಮತ್ತು ನಂತರದ ವೈದಕೀಯ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಇಂಜನಿಯರಿಂಗ್ ಕಾಲೇಜುಗಳಲ್ಲಿ ನೌಕಾಪಡೆಯ ಅಧಿಕಾರಿ ಹುದ್ದೆಗಾಗಿ ವರ್ಷಕ್ಕೆ ಒಂದು ಸಲ ನೌಕಾಪಡೆ ಕ್ಯಾಂಪಸ್ ಸಂದರ್ಶನ ನಡೆಸುತ್ತದೆ. 5ನೆ ಸೆಮಿಸ್ಟರ್​ವರೆಗೂ ಕನಿಷ್ಠ ಶೇಕಡಾ 60ರಷ್ಟು ಅಂಕಗಳನ್ನು ಗಳಿಸಿ 7ನೇ ಸೆಮಿಸ್ಟರ್​ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದು.

ಉದ್ಯೋಗಕ್ಕೆ ಅರ್ಹತೆ

ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತದಲ್ಲಿ ಶೇಕಡಾ 70ರಷ್ಟು ಅಂಕಗಳು ಮತ್ತು ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿಯಲ್ಲಿ ಇಂಗ್ಲಿಷ್​ನಲ್ಲಿ ಶೇಕಡಾ 50ರಷ್ಟು ಅಂಕಗಳನ್ನು ಪಡೆದು, ಬಿ.ಟೆಕ್ ಓದುತ್ತಿರುವವರು ಕೂಡಾ ನೌಕಾಪಡೆಯ ಅಧಿಕಾರಿ ಹುದ್ದೆಗೆ ಆಯ್ಕೆಯಾಗಲು ಪ್ರಯತ್ನಿಸಬಹುದು. ಇಂತಹ ಅಭ್ಯರ್ಥಿಗಳಿಗೆ ಜೆಇಇ (ಮೇನ್ಸ) ಪರೀಕ್ಷೆಯ ರ‍್ಯಾಂಕಿಂಗ್ ಕಡ್ಡಾಯವಾಗಿದೆ. ಸಂಗೀತ ಅಥವಾ ಕ್ರೀಡೆಗಳಲ್ಲಿ ಕೌಶಲ್ಯ ಹೊಂದಿರುವ ಸಾಮಾನ್ಯ ಪದವೀಧರರಿಗೆ ನೌಕಾಪಡೆಯ ಅಧಿಕಾರಿ ಹುದ್ದೆಗಳಿಗೆ ಪ್ರಯತ್ನಿಸುವ ಅವಕಾಶವನ್ನು ವರ್ಷಕ್ಕೆ ಎರಡು ಸಲ ನೀಡಲಾಗುತ್ತದೆ. ಈ ಕುರಿತು ನೌಕಾಪಡೆ ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತದೆ.

ಅಂಕಗಳು ಹೇಗೆ?

ಭಾರತೀಯ ನೌಕಾಪಡೆ ಪ್ರವೇಶ ಪರೀಕ್ಷೆ ( ಐಎನ್​ಇಟಿ) ಹೆಸರಿನ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ವರ್ಷಕ್ಕೆ ಎರಡು ಸಲ ನಡೆಸಲಾಗುತ್ತದೆ. ಪದವೀಧರರು ಭಾಗವಹಿಸಬಹುದಾದ ಈ ಪರೀಕ್ಷೆಯಲ್ಲಿ ಇಂಗ್ಲಿಷ್ (25 ಅಂಕಗಳು) ಸಾಮಾನ್ಯ ವಿಜ್ಞಾನ ಮತ್ತು ಗಣಿತ (25 ಅಂಕಗಳು), ಸಾಮಾನ್ಯ ಜ್ಞಾನ (25 ಅಂಕಗಳು) ಮತ್ತು ರ್ತಾಕ ಮತ್ತು ಸಂಖ್ಯಾತ್ಮಕ ಸಾಮರ್ಥ್ಯ (25 ಅಂಕಗಳು), ಹೀಗೆ 100 ಅಂಕಗಳ ಪರೀಕ್ಷೆಯಾಗಿರುತ್ತದೆ. ಪ್ರತಿಯೊಂದು ಭಾಗದಲ್ಲಿ ಕನಿಷ್ಠ 10 ಅಂಕಗಳನ್ನು ಅಭ್ಯರ್ಥಿ ಗಳಿಸಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನವನ್ನು ನೌಕಾಪಡೆ ನಡೆಸುತ್ತದೆ.

| ಡಾ.ಉದಯ ಶಂಕರ ಪುರಾಣಿಕ್

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...