ಮಹಿಳಾ ಸಿಬ್ಬಂದಿ ಬ್ಯಾಂಕ್ ಶಾಖೆ

ಬೆಂಗಳೂರು: ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಯಾವುದೇ ರಾಷ್ಟ್ರೀಕೃತ ಬ್ಯಾಂಕ್​ಗಳಿಗೆ ಕಡಿಮೆ ಇಲ್ಲದಂತೆ ಸೇವೆ ನೀಡುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ.ಎಂ.ಆರ್. ವೆಂಕಟೇಶ್ ಹೇಳಿದ್ದಾರೆ.

ಮೈಸೂರು ರಸ್ತೆಯಲ್ಲಿ ನೂತನವಾಗಿ ನಿರ್ವಣಗೊಂಡ ಶ್ರೀ ತ್ಯಾಗರಾಜ ಕೋ ಆಪ ರೇಟಿವ್ ಬ್ಯಾಂಕ್​ನ ಮಹಿಳಾ ಸಿಬ್ಬಂದಿ ಶಾಖೆ ಉದ್ಘಾಟಿಸಿದರು.

ಬ್ಯಾಂಕ್ 55 ವರ್ಷಗಳ ಇತಿಹಾಸ ಹೊಂದಿದೆ. ಸಾರ್ವಜನಿಕರಿಗೆ ಎಲ್ಲ ಸೇವೆಗಳನ್ನು ಉನ್ನತೀಕರಿಸಲಾಗಿದೆ. ಮಹಿಳಾ ಸಿಬ್ಬಂದಿ ಶಾಖೆಯನ್ನು ಆರಂಭಿಸಬೇಕು ಎಂಬ ಯೋಚನೆ ಹಲವು ದಿನಗಳಿಂದ ಇತ್ತು. ಈ ಬಗ್ಗೆ ಐದಾರು ತಿಂಗಳಿಂದ ವಿಶೇಷ ಆಸಕ್ತಿ ವಹಿಸಿ ಕೆಳ ಹಂತದಿಂದ ಎಲ್ಲ ಸಿಬ್ಬಂದಿಯನ್ನು ಮಹಿಳೆಯರನ್ನೇ ಶಾಖೆಯಲ್ಲಿ ನಿಯೋಜಿಸಲಾಗಿದೆ. ಈ ಮೂಲಕ ಬ್ಯಾಂಕ್ ಮಹಿಳೆಯರನ್ನು ಗೌರವಿಸುತ್ತಿದೆ ಎಂದರು.

ಬ್ಯಾಂಕ್​ಗೆ 2017-18ರ ರಾಜ್ಯ ಸರ್ಕಾರದ ಉತ್ತಮ ಸಹಕಾರ ಬ್ಯಾಂಕ್ ಪ್ರಶಸ್ತಿ ಲಭಿಸಿದೆ. ಇದರಿಂದ ನಮ್ಮ ಜವಾಬ್ದಾರಿ ಮತ್ತಷ್ಟು ಅಧಿಕಗೊಂಡಿದೆ. ನಾವು ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸುತ್ತೇವೆ ಎಂದು ವೆಂಕಟೇಶ್ ಹೇಳಿದರು. ಬ್ಯಾಂಕ್ ಶಾಖೆಯನ್ನು ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಹಾಗೂ ಸುವರ್ಣ ನ್ಯೂಸ್​ನ ಔಟ್​ಪುಟ್ ಎಡಿಟರ್ ಎಮ್​ಸಿ. ಶೋಭಾ ಉದ್ಘಾಟಿಸಿದರು. ಬ್ಯಾಂಕ್ ಉಪಾಧ್ಯಕ್ಷ ಕೆ.ಜಿ. ರಾಮೇಗೌಡ, ನಿರ್ದೇಶಕ ಎಂ.ಎನ್. ಕಂಬೇಗೌಡ, ನಿರ್ದೇಶಕರಾದ ಸಿ. ಚನ್ನಯ್ಯ, ಎಂ.ಆರ್. ರಾಜಶೇಖರ್, ಎನ್. ಬಸವರಾಜ್, ಆರ್. ವೀರಣ್ಣ ಹಾಗೂ ಇತರರು ಇದ್ದರು.

ಆಡಳಿತ ಮಂಡಳಿ ನೀಡಿರುವ ಅವಕಾಶ ಬಳಸಿಕೊಳ್ಳಿ

ನಗರದಲ್ಲೇ ಸಂಪೂರ್ಣ ಮಹಿಳಾ ಸಿಬ್ಬಂದಿ ಇರುವ ಏಕೈಕ ಬ್ಯಾಂಕ್ ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಆಗಿದೆ. ಆಡಳಿತ ಮಂಡಳಿ ಮಹಿಳೆಯರಿಗೆ ಈ ಉತ್ತಮ ಅವಕಾಶ ಕಲ್ಪಿಸಿದೆ. ಇದನ್ನು ಬಳಸಿಕೊಂಡು ಬ್ಯಾಂಕ್ ಅನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬೇಕು ಎಂದು ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಹಾಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು. ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿ ಪುರುಷರಿಗಿಂತ ನಾವು ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ. ಬ್ಯಾಂಕ್​ನ ಇಡೀ ಶಾಖೆಯನ್ನು ಮಹಿಳೆಯರ ಕೈಗೆ ಒಪ್ಪಿಸಲಾಗಿದೆ. ಮಹಿಳೆಯರು ಹಣಕಾಸು ನಿರ್ವಹಣೆ ಮಾಡುವುದರಲ್ಲಿ ಎತ್ತಿದ ಕೈ. ಹೀಗಾಗಿ ಬ್ಯಾಂಕ್ ಚೆನ್ನಾಗಿ ನಡೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

One Reply to “ಮಹಿಳಾ ಸಿಬ್ಬಂದಿ ಬ್ಯಾಂಕ್ ಶಾಖೆ”

  1. ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕೆ ಡಿ ಸಿ ಸಿ ಬ್ಯಾಂಕಿನ ಮಹಿಳಾ ಶಾಖೆ ತುಂಬಾ ವರ್ಷಗಳಿಂದ ಇದೆ

Comments are closed.